More

    ಗುಜರಾತ್‌ಗೆ ಅಗ್ರಸ್ಥಾನ ಕಾಯ್ದುಕೊಳ್ಳುವ ಗುರಿ ; ಕಡೇ ಸ್ಥಾನ ತಪ್ಪಿಸಿಕೊಳ್ಳಲು ಸಿಎಸ್‌ಕೆ ಹೋರಾಟ

    ಮುಂಬೈ: ಟೂರ್ನಿಗೆ ಪದಾರ್ಪಣೆಗೊಂಡ ವರ್ಷವೇ ಮೊದಲ ತಂಡವಾಗಿ ಪ್ಲೇಆ್ ಹಂತಕ್ಕೇರಿರುವ ಗುಜರಾತ್ ಟೈಟಾನ್ಸ್ ತಂಡ ಇದೀಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಗುರಿ ಹೊಂದಿದೆ. ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರದ ಮತ್ತೊಂದು ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸಾರಥ್ಯದ ಗುಜರಾತ್ ಹಾಗೂ ಈಗಾಗಲೇ ಲೀಗ್‌ನಿಂದ ಹೊರಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಎದುರಾಗಲಿವೆ. ಅಂಕಪಟ್ಟಿಯಲ್ಲಿ ಕಡೇ ಸ್ಥಾನ ತಪ್ಪಿಸಿಕೊಳ್ಳುವ ಸಲುವಾಗಿ ಸಿಎಸ್‌ಕೆ ಗೆಲುವಿಗಾಗಿ ಹೋರಾಡಬೇಕಿದೆ.
    * ಅಗ್ರಸ್ಥಾನದ ಮೇಲೆ ಕಣ್ಣು
    ಕ್ರಿಕೆಟ್ ಪಂಡಿತರ ಲೆಕ್ಕಾಚಾರವನ್ನೇ ಉಲ್ಟಾ ಮಾಡಿರುವ ಗುಜರಾತ್ ಟೈಟಾನ್ಸ್ ತಂಡ, ಇದುವರೆಗೂ ಆಡಿರುವ 12 ಪಂದ್ಯಗಳಿಂದ 9 ಗೆಲುವು ದಾಖಲಿಸಿ 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಟೂರ್ನಿಯಲ್ಲಿ ಇದುವರೆಗೂ ಪ್ರಭುತ್ವ ಸಾಧಿಸುತ್ತಾ ಬಂದಿರುವ ಗುಜರಾತ್ ತಂಡ ಇದೀಗ ಪ್ರಶಸ್ತಿ ಫೇವರಿಟ್ ಎನಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳುವ ಗುರಿಯಲ್ಲಿದೆ. ಕಳೆದ ಪಂದ್ಯದಲ್ಲಿ ಲಖನೌ ಎದುರು ಸಾಧಾರಣ ಮೊತ್ತವನ್ನು ಕಟ್ಟಿಹಾಕಿಕೊಳ್ಳುವ ಮೂಲಕ ಗುಜರಾತ್ ಬೌಲರ್‌ಗಳು ಗಮನಸೆಳೆದಿದ್ದರು.
    * ಸಿಎಸ್‌ಕೆಗೆ ಗೆಲುವಿನ ಹಂಬಲ
    ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿರುವ ಸಿಎಸ್‌ಕೆ ತಂಡ ಕಡೇ ಎರಡು ಪಂದ್ಯಗಳಲ್ಲಿ ಜಯ ದಾಖಲಿಸಿ ಟೂರ್ನಿಗೆ ವಿದಾಯ ಹೇಳುವ ಲೆಕ್ಕಾಚಾರದಲ್ಲಿದೆ. ಪ್ರಮುಖ ಬೌಲರ್‌ಗಳಾದ ದೀಪಕ್ ಚಹರ್, ಆಡಂ ಮಿಲ್ನೆ ಅನುಪಸ್ಥಿತಿ ನಡುವೆಯೂ ಮುಕೇಶ್ ಚೌಧರಿ, ಸಿಮ್ರಾನ್‌ಜೀತ್ ಸಿಂಗ್ ಗಮನಸೆಳೆಯುತ್ತಿದ್ದಾರೆ. ಮೊದಲ ಹಣಾಹಣಿಯಲ್ಲಿ ಗುಜರಾತ್ ಎದುರು ಅನುಭವಿಸಿದ್ದ ಸೋಲಿಗೂ ಸೇಡು ತೀರಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.

    ಟೀಮ್ ನ್ಯೂಸ್:
    ಗುಜರಾತ್: ಲಾಕಿ ರ್ಗ್ಯುಸನ್ ಅಥವಾ ಅಲ್ಜಾರಿ ಜೋಸೆಫ್ ಇಬ್ಬರಲ್ಲಿ ಒಬ್ಬರು ಕಣಕ್ಕಿಳಿಬಹುದು.
    ಕಳೆದ ಪಂದ್ಯ: ಲಖನೌ ಎದುರು 62 ರನ್ ಜಯ

    ಸಿಎಸ್‌ಕೆ: ಈಗಾಗಲೇ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಕೆಲವೊಂದು ಹೊಸಮುಖಗಳಿಗೆ ಅವಕಾಶ ನೀಡಬಹುದು.
    ಕಳೆದ ಪಂದ್ಯ: ಮುಂಬೈ ಎದುರು 5 ವಿಕೆಟ್ ಸೋಲು

    ಪಂದ್ಯ ಆರಂಭ: ಮಧ್ಯಾಹ್ನ 3.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
    ಮೊದಲ ಹಣಾಹಣಿ: ಗುಜರಾತ್ ತಂಡಕ್ಕೆ 3 ವಿಕೆಟ್ ಜಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts