More

    ಅರ್ಧಕ್ಕೆ ನಿಂತ ಗಡಿಯಾರ ಗೋಪುರ

    ಬಳ್ಳಾರಿ: ರಾಜ್ಯದಲ್ಲೇ ಅತಿ ಎತ್ತರದು ಎಂಬ ಖ್ಯಾತಿ ಪಡೆಯಲಿರುವ ಬಳ್ಳಾರಿಯ ಗಡಿಯಾರ ಗೋಪುರ ಕಾಮಗಾರಿಗೆ ಗ್ರಹಣ ಬಡಿದಿದೆ.
    ನಗರದಲ್ಲಿ 120 ಅಡಿ ಎತ್ತರದಲ್ಲಿ ನಿರ್ಮಾಣಗೊಳ್ಳುತ್ತಿರುವ ಗಡಿಯಾರ ಗೋಪುರಕ್ಕೆ ಅನುದಾನ ಬಾರದ್ದರಿಂದ ಕಾಮಗಾರಿ ಸ್ಥಗಿತಗೊಂಡಿದೆ.

    ಇದರಿಂದ ನಗರದ ಹೃದಯ ಭಾಗದಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಪ್ರತಿದಿನವೂ ಸಂಚರಿಸುವ ಪ್ರಮುಖ ವೃತ್ತ ಗಡಿಗಿ ಚನ್ನಪ್ಪ ಸರ್ಕಲ್ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಿದ್ದು, ವಾಹನ ಸವಾರರು, ಪಾದಚಾರಿಗಳು ಕಿರಿಕಿರಿ ಅನುಭವಿಸುವಂತಾಗಿದೆ. 2022ರ ಆ.15ರಂದು ಕ್ಲಾಕ್ ಟವರ್ ಕಾಮಗಾರಿ ಆರಂಭಗೊಂಡಿದ್ದು, ಮಾರ್ಚ್ ವೇಳೆಗೆ ವಿಧಾನಸಭೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು. ಸದ್ಯ 72 ಅಡಿ ಎತ್ತರದವರೆಗೆ ಗೋಪುರ ನಿರ್ಮಾಣಗೊಂಡಿದೆ.

    ಇದನ್ನೂ ಓದಿ: ರಾಜ್ಯದ 35 ಸಾವಿರಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧ: ಮುಜರಾಯಿ ಇಲಾಖೆ

    5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ: ಗಡಿಯಾರ ಗೋಪುರವನ್ನು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಲಿಫ್ಟ್ ಹಾಗೂ ಮೆಟ್ಟಲುಗಳ ವ್ಯವಸ್ಥೆ ಮಾಡಲಾಗುತ್ತಿದೆ. 7ನೇ ಮಹಡಿಯಲ್ಲಿ ವೀಕ್ಷಣೆ ಬಿಂದು (ವ್ಯೆಪಾಯಿಂಟ್), 8ನೇ ಮಹಡಿಯಲ್ಲಿ ಗಡಿಯಾರ ನಿರ್ಮಿಸಲಾಗುತ್ತಿದೆ. ಒಟ್ಟು ಹತ್ತು ಮಹಡಿಗಳ ಗೋಪುರ ಇದಾಗಿದ್ದು, ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ. 5 ಕೋಟಿ ರೂ. ಪೈಕಿ ಈಗಾಗಲೇ 1.80 ಕೋಟಿ ರೂ. ಖರ್ಚಾಗಿದೆ. ಇನ್ನು 40 ಲಕ್ಷ ರೂ. ಬಿಡುಗಡೆಯಾಗಿದ್ದು, ಕಾಮಗಾರಿ ಆರಂಭಗೊಳ್ಳಬೇಕಿದೆ ಎನ್ನುತ್ತಾರೆ ಪಿಡಬ್ಲುೃಡಿ ಸಹಾಯಕ ಇಂಜಿನಿಯರ್ ಎಂ.ಗವಿಯಪ್ಪ.

    ಪ್ರತಿನಿತ್ಯ ಟ್ರಾಫಿಕ್ ಕಿರಿಕಿರಿ

    ಕ್ಲಾಕ್ ಟವರ್ ನಿರ್ಮಾಣದಿಂದಾಗಿ ಟ್ರಾಫಿಕ್ ಸಮಸ್ಯೆ ಆಗುತ್ತಿದೆ. ಗೋಪುರದ ರಸ್ತೆ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಇನ್ನು ಗೋಪುರ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ವಾಹನ ಸವಾರರು ನಿತ್ಯ ಗೋಳಾಡುವಂತಾಗಿದೆ. ರಾಯಲ್ ವೃತ್ತದಲ್ಲಿ ವಾಹನ ಸಂಚಾರಕ್ಕೆರಸ್ತೆ ಕಿರಿದಾಗಿದ್ದು, ನೂರಾರು ವಾಹನಗಳು ಸಂಚರಿಸುವುದರಿಂದ ಟ್ರಾಫಿಕ್ ಕಿರಿಕಿರಿ ಅನುಭವಿಸುವಂತಾಗಿದೆ. ಇದೇ ಮಾರ್ಗವಾಗಿ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಪ್ರತಿದಿನವೂ ಓಡಾಡುತ್ತಿದ್ದಾರೆ. ಅವರಿಗೂ ಟ್ರಾಫಿಕ್ ಸಮಸ್ಯೆ ತಪ್ಪಿಲ್ಲ. ಆದರೂ ಕಂಡೂ ಕಾಣದಂತೆ ಓಡಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿ, ರೈಲು ನಿಲ್ದಾಣ, ಸಾರಿಗೆ ಬಸ್ ನಿಲ್ದಾಣ ಸೇರಿದಂತೆ ವ್ಯಾಪಾರ, ವಹಿವಾಟುಗಳ ಕೇಂದ್ರ ರಸ್ತೆಗಳಿಗೆ ಗಡಿಗಿ ಚನ್ನಪ್ಪ ವೃತ್ತ ಒಂದೇ ಮಾರ್ಗ ಇರುವುದರಿಂದ ಸಂಚಾರದ ಸಮಸ್ಯೆ ಹೆಚ್ಚಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts