More

    ಸಂಗೀತ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ

    ಗದಗ: ಆಧ್ಯಾತ್ಮಿಕ ಮೇರು ಚಿಂತಕರಾದ ಸ್ವಾಮಿ ವಿವೇಕಾನಂದರು ಸಂಗೀತ ಆರಾಧಕರಾಗಿದ್ದರು ಎಂದು ಉಪನ್ಯಾಸಕ ಗಂಗಾಧರ ಹಿಡ್ಕಿಮಠ ಅವರು ಹೇಳಿದರು .

    ಡಾ.ಪಿ ಜಿ ಎ ಎಸ್ ಸಮಿತಿಯ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯ ಹಾಗೂ ಸಂಗೀತ ಸ್ನಾತಕೋತರ ಕೇಂದ್ರದಲ್ಲಿ ಆಯೋಜಿಸಲಾದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಾ ಸಂಗೀತ ಕಲೆ ಚಿತ್ರಕಲೆ ಗಳಿಗೆ ಅಗಾಧವಾದ ಸ್ಮರಣ ಶಕ್ತಿ ಅವಶ್ಯಕವಾಗಿ ಇರುವುದನ್ನು ಮನಗಂಡಿದ್ದ ಸ್ವಾಮಿ ವಿವೇಕಾನಂದರು ಅವುಗಳ ಬಗ್ಗೆ ಅಪಾರವಾದಂತಹ ಪ್ರೀತಿಯನ್ನು ಹೊಂದಿದ್ದರು ಎಂದ ಅವರು ಸಂಗೀತದ ಮೂಲಕ ಸ್ವಾಮಿ ವಿವೇಕಾನಂದರು ತಮ್ಮ ಗುರುಗಳ ಪ್ರೀತಿಗೆ ಪಾತ್ರರಾಗಿದ್ದರು ಎಂದು ಅವರು ಹೇಳಿದರು.

    ಉಪನ್ಯಾಸಕ ಎನ್ಎಂ ಶೇಕ್ ಅವರು ಮಾತನಾಡಿ ಸ್ವಾಮಿ ವಿವೇಕಾನಂದರು ಯುವಕರಿಗೆ ಸ್ಪೂರ್ತಿಯಾಗಿದ್ದು. ಕಷ್ಟಗಳನ್ನು ಎದುರಿಸಿದಷ್ಟು ನೀನು ಬಲಶಾಲಿಯಾಗುವೆ ಆದ್ದರಿಂದ ಕಷ್ಟಗಳು ಬಂದಾಗ ಅದನ್ನು ಧೈರ್ಯದಿಂದ ಎದುರಿಸು ಎಂದು ಹೇಳಿದ ಸ್ವಾಮಿ ವಿವೇಕಾನಂದರ ಮಾತು ನಮ್ಮ ಯುವಕರಿಗೆ ಪ್ರೇರಣೆ ಯಾಗಲಿ ಎಂದು ಅವರು ಹೇಳಿದರು.
    ಕುಮಾರ್ ಅಮೋಘ ಮಾತನಾಡಿ ಸ್ವಾಮಿ ವಿವೇಕಾನಂದರ ದಿನಾಚರಣೆಯನ್ನು ರಾಷ್ಟ್ರೀಯ ಯುವ ದಿನ ಎಂದು ಆಚರಿಸಲಾಗುತ್ತಿದ್ದು ,”ನನಗೆ ಬೇಕಾಗಿರುವುದು ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಗಳು, ಸಿಡಿಲಿನಂತ ಮನಸ್ಸುಗಳು, ಅಂತಹ ಕೆಲುವೇ ತರುಣರಿಂದ ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲೆ” ಎಂಬ ಸ್ವಾಮಿ ವಿವೇಕಾನಂದರ ಮಾತು ಯುವಕರಿಗೆ ಪ್ರೇರಣೆ ಆಗಲಿ ಎಂದು ಅವರು ಹೇಳಿದರು.
    ವೇದಿಕೆಯ ಮೇಲೆ ಶ್ರೀಮತಿ ಮಹಾಲಕ್ಷ್ಮಿ ಹೆಗಡೆ ,ಡಾ ಎನ್ ವಿ ಅಕ್ಕಸಾಲಿ,  ಡಾ ಕೊಡಗಾನೂರು ಹನುಮಂತ್, ಡಾ, ವಿಶ್ವನಾಥ್ ಹಿರೇಮಠ, ವಾಯ್ . ಆರ. ಮೂಲಿಮನಿ, ಎಂ ಎಸ್ ಮಠದ,ವಿ ಎಂ ಪಟ್ಟದಕಲ್ ಹಾಗೂ ಕುಮಾರಿ ಯಶೋಧ ಮಾದರ್ ಉಪಸ್ಥಿತರಿದ್ದರು.

    ಪ್ರಾರಂಭದಲ್ಲಿ ವಿದ್ಯಾರ್ಥಿ ರಾಥೋಡ್ ಪ್ರಾರ್ಥನೆ ಗೈದರು ಇವರಿಗೆ ಶುಕ್ರುಸಾಬ್ ಹಾರ್ಮೋನಿಯಂ ಸಾಥ್  ತಬ್ಲಾಸಾ ಸಾಥ ಶರಣಪ್ಪ ಕಲ್ಬುರ್ಗಿಯವರು ನೀಡಿದರು.ಡಾ ಎಸ್ಎಸ್ ಗಡ್ಡದಮಠ ಸರ್ವರನ್ನು ಸ್ವಾಗತಿಸಿದರು ಕಾರ್ಯಕ್ರಮವನ್ನು ಕುಮಾರ್ ಅಮೋಘ  ನಡೆಸಿ ಕೊನೆಗೆ ವಂದಿಸಿದರು .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts