More

    ಹಾತಲಗೇರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ರೋಟರಿಯಿಂದ ಮಾಸಿಕ ಋತು ಸ್ರಾವ ಕುರಿತು ಮಾಹಿತಿ

    ರೋಟರಿ ಕ್ಲಬ್ ಗದಗಬೆಟಗೇರಿತಿಯಿಂದ ಸರ್ಕಾರಿ ಪ್ರೌಢಶಾಲೆ ಹಾತಲಗೇರಿಯಲ್ಲಿ “ಮಾಸಿಕ ಋತು ಸ್ರಾವ (ಮುಟ್ಟಿನ) ನೈರ್ಮಲ್ಯದ ಮಹತ್ವ” ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.
    ಈ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ರೊ.ಡಾ. ಕಮಲಾಕ್ಸಿಅಂಗಡಿ ಮಾತನಾಡಿ, ಮುಟ್ಟಿನ ನೈರ್ಮಲ್ಯವನ್ನು ನಿರ್ವಹಿಸುವಲ್ಲಿ ಹೆಣ್ಣುಮಕ್ಕಳು ಎದುರಿಸುತ್ತಿರುವ ತಾರತಮ್ಯ, ನೀಷೇಧಗಳು ಮತ್ತು ಸವಾಲುಗಳನ್ನು ತಿಳಿಸಿದರು. ಮಾಸಿಕ ಋತು ಸ್ರಾವವು ಪ್ರಾಕೃತಿಕ ಕ್ರಿಯಯಾಗಿದ್ದು ಹೆಣ್ಣು ಮಕ್ಕಳು ಇದರ ಬಗ್ಗೆ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳುವುದು ಅವಶ್ಯವಿದೆ ಮತ್ತು ಪ್ರತಿಯೊಬ್ಬರು ವ್ಯಯಕ್ತಿಕ ನೈರ್ಮಲ್ಯದ ವಿಧಾನಗಳು, ಪ್ಯಾಡ್‌ಗಳನ್ನು ಬದಲಾಯಿಸುವ ಆವರ್ತನ, ನೈರ್ಮಲ್ಯ ವಿಧಾನಗಳು, ತೊಳೆಯುವ ತಂತ್ರಗಳು, ನೈರ್ಮಲ್ಯ ಉತ್ಪನ್ನಗಳನ್ನು ತಿರಸ್ಕರಿಸುವ ಸರಿಯಾದ ವಿಧಾನ, ದದ್ದುಗಳನ್ನು ತಪ್ಪಿಸುವುದು ಹೇಗೆ ಇತ್ಯಾದಿಗಳ ಮೇಲೆ ಹೈಲೈಟ್ ಮಾಡಿದರು. ವಿದ್ಯಾರ್ಥಿಗಳು ವೈದ್ಯರೊಂದಿಗೆ ತಮ್ಮಲ್ಲಿರುವ ಸಂದೇಹವನ್ನು ವ್ಯಕ್ತಪಡಿಸಿ ಅದಕ್ಕೆ ತಕ್ಕ ಸಮಾಧಾನವನ್ನು ಪಡೆದುಕೊಂಡರು. ಈ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ವತಿಯಿಂದ ಉಚಿತವಾಗಿ ಸ್ಯಾನಿಟರಿ ಪ್ಯಾಡಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.
    ಕಾರ್ಯಕ್ರದಲ್ಲಿ ಸಂಸ್ಥೆಯ ಅಧ್ಯಕ್ಷರಾದ ರೊ. ಚಂದ್ರಮೌಳಿ ಜಾಲಿ, ಕಾರ್ಯದರ್ಶಿಗಳಾದ ರೊ. ವೀಣಾ ತಿರ್ಲಾಪೂರ, ರೊ. ಶ್ರೀಧರ ಸುಲ್ತಾನಪೂರ ರೊ. ಶಿವಾಚಾರ್ಯ ಹೊಸಳ್ಳಿಮಠ ಹಾಗೂ ಶಾಲೆ ಶಿಕ್ಷಕರಾದ ಶ್ರೀಮತಿ. ಗೀತಾ ಕಟಗಿ, ಶ್ರೀಮತಿ. ಸುಮಿತ್ರಾ ಮೆಸ್ತಾ, ಶ್ರೀಮತಿ ಸಾವಿತ್ತಿ ಅವರಶೆಟ್ಟಿ, ಶ್ರೀ ಕೃಷ್ಣಾಸಾ ಬಾಕಳೆ ಶ್ರೀ ಲಿಂಗನಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts