More

    ಗದಗ: ಬೇಕಾಗಿದ್ದು 190 ಮೆಗಾವ್ಯಾಟ್​, ಸಿಗುತ್ತಿರುವುದು 80 ಮೆಗಾವ್ಯಾಟ್​ ವಿದ್ಯುತ್​ ! ಜಿಲ್ಲೆಯಲ್ಲಿ ಅನಿಯಮಿತ ಲೋಡ್​ ಶೇಡ್ಡಿಂಗ್​ ಅನಿವಾರ್ಯ

    ಶಿವಾನಂದ ಹಿರೇಮಠ ಗದಗ
    ಮಳೆ ಅಭಾವದಿಂದ ಬರ ಕೂಪದಲ್ಲಿ ಬದಕುತ್ತಿರುವ ರೈತರಿಗೆ ಜಿಲ್ಲೆಯಲ್ಲಿನ ಹವಾಮಾನ ವೈಪರಿತ್ಯದಿಂದ ಉಂಟಾದ ವಿದ್ಯುತ್​ ಕೊರತೆ ಆತಂಕ ತಂದೊಡ್ಡಿದೆ. ಹವಾಮಾನ ವೈಪರಿತ್ಯದಿಂದ ರಾಜ್ಯದ ಸೋಲಾರ್​ ಮತ್ತು ಪವನ ವಿದ್ಯುತ್​ಗಳಿಂದ ಅಗತ್ಯವಿರುವ ವಿದ್ಯುತ್​ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಹೆಸ್ಕಾಂ ಮೂಲಗಳ ಪ್ರಕಾರ ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಶೇ. 50ಕ್ಕಿಂತ ಕಡಿಮೆ ರಷ್ಟು ಮಾತ್ರ ವಿದ್ಯುತ್​ ಉತ್ಪಾದನೆ ಜರುಗುತ್ತಿದೆ. ರಾಜ್ಯದಲ್ಲಿ ವಿದ್ಯುತ್​ ಅಭಾವದ ಹಿನ್ನೆಲೆ ಗದಗ ಜಿಲ್ಲೆಗೂ ಪ್ರತಿಗಂಟೆಗೊಮ್ಮೆ ಶೇ.60 ರಷ್ಟು ವಿದ್ಯುತ್​ ಕೊರತೆಯ ವಿದ್ಯುತ್​ ಹಂಚಿಕೆ ಕಡಿಮೆ ಮಾಡಲಾಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಅನಿಯಮಿತ ಲೋಡ್​ ಶೇಡ್ಡಿಂಗ್​ ಅನಿವಾರ್ಯವಾಗಿದೆ.
    ಗದಗ ಜಿಲ್ಲೆಯಲ್ಲಿ ಪ್ರಸ್ತುತ ಹೈಡ್ರೋ ಪವರ್​(ಜಲವಿದ್ಯುತ್​) ಪೂರೈಕೆ ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ವಿದ್ಯುತ್​ ಬೇಡಿಕೆ ಅನುಸಾರ ಸೌರ ಮತ್ತು ವಿಂಡ್​ ಪವರ್​ ಜತೆಗೆ ಹೈಡ್ರೋ ಪವರ್​ ಖರೀದಿ ಮಾಡಲಾಗುತ್ತಿತ್ತು. ಮಳೆ ಕೊರತೆ ಹಿನ್ನೆಲೆ ರಾಜ್ಯಾದ್ಯಂತ ಹೈಡ್ರೋ ಪವರ್​ ಉತ್ಪಾದನೆ ಗಣನೀಯ ಕುಸಿದಿದೆ. ಹೀಗಾಗಿ, ಒಂದು ಯುನಿಟ್​ ವಿದ್ಯುತ್​ಗೆ 9 ರಿಂದ 15 ರೂ. ವರೆಗೂ ವೆಚ್ಚ ಭರಿಸಿ ಜಿಲ್ಲೆಯ ಜನರಿಗೆ ವಿದ್ಯುತ್​ ಪೂರೈಕೆ ಮಾಡಬೇಕಾದ ಅನಿವಾರ್ಯತೆ ಹೆಸ್ಕಾಂಗೆ ಬಂದೊದಗಿದೆ.
    ಜಿಲ್ಲೆಯಯಲ್ಲಿ ಮನೆಗಳಿಗೆ, ಸಂಕೀರ್ಣಗಳು, ವಾಣಿಜ್ಯೋದ್ಯ ಸಂಸ್ಥೆ, ಕೈಗಾರಿಕೆ, ರೈತರ ಪಂಪಸೆಟ್​ ಸೇರಿದಂತೆ ಎಲ್ಲ ಮೂಲಗಳಿಗೆ ವಿದ್ಯುತ್​ ಪೂರೈಕೆ ಅತ್ಯಗತ್ಯ. ಕಳೆದೊಂದು ವಾರದಿಂದ ಗಾಳಿ ಮತ್ತು ಸೂರ್ಯನ ಬೆಳಕಿನ ಶಕ್ತಿ ನಿಯಮಿತ ಇಲ್ಲದ ಹಿನ್ನೆಲೆ ಸೋಲಾರ್​ ದಿಂದ ಸರಾಸರಿ 30 ಮೆಗಾವ್ಯಾಟ್​, ಪವನ ವಿದ್ಯುತ್​ ಮೂಲದಿಂದ 3 ರಿಂದ 5 ಮೆಗಾವ್ಯಾಟ್​ ಸರಾಸರಿ ವಿದ್ಯುತ್​ ಹಾಗೂ ಒನ್​ ನೇಷನ್​ ಒನ್​ ಗ್ರಿಡ್​ ಯೋಜನೆಯಡಿ ಜಿಲ್ಲೆಗಳಿಗೆ ವಿದ್ಯುತ್​ ಹಂಚಿಕೆ ಸೇರಿ ಜಿಲ್ಲೆಗೆ ಪ್ರಸ್ತುತ ಪ್ರತಿನಿತ್ಯ ಸರಾಸರಿ 70 ರಿಂದ 80 ಮೆಗಾವ್ಯಾಟ್​ ವಿದ್ಯುತ್​ ಜಿಲ್ಲೆಗೆ ಲಭ್ಯವಿದೆ. ಆದರೆ, ಜಿಲ್ಲೆಗೆ ಪ್ರತಿನಿತ್ಯ ಸರಾಸರಿ 190 ಮೆಗಾವ್ಯಾಟ್​ ವಿದ್ಯುತ್​ ಅಗತ್ಯತೆ ಇದ್ದು, ಶೇ.60 ರಷ್ಟು ಕೊರತೆ ಎದುರಾಗಿದೆ. ಜಿಲ್ಲೆಗೆ ಈಗಿರುವ ಹಂಚಿಕೆ ವಿದ್ಯುತ್​ ನಲ್ಲಿ ರೈತರ ಪಂಪಸೆಟ್​ ಗಳಿಗೆ ವಿದ್ಯುತ್​ ಪೂರೈಕೆ ಸಾಧ್ಯವಿಲ್ಲದ ಕಾರಣ ಜಿಲ್ಲೆಯಾದ್ಯಂತ ಪ್ರತಿಭಟನೆಗಳು ಜರುಗುತ್ತಿವೆ. ಹೀಗಾಗಿ ರೈತರ ಪಂಪಸೆಟ್​ಗಳಿಗೆ 7 ಗಂಟೆ ಬದಲಾಗಿ 3 ರಿಂದ 4 ಗಂಟೆ ವರೆಗೂ ವಿದ್ಯುತ್​ ಪೂರೈಕೆ ಮಾಡಲಾಗುತ್ತಿದೆ.

    ಜಿಲ್ಲೆಗೆ ವಿದ್ಯುತ್​ ಹಂಚಿಕೆ:
    ಅವಧಿ — ಪ್ರಸ್ತುತ ವಿದ್ಯುತ್​ ಪೂರೈಕೆ(ಪಂಪಸೆಟ್​ ಹೊರತುಪಡಿಸಿ) — ವಿದ್ಯುತ್​ ಅಗತ್ಯತೆ(ಪಂಪಸೆಟ್​ ಒಳಗೊಂಡು) — ಕೊರತೆ
    ಬೆಳಗ್ಗೆ 1ರಿಂದ 6 ಗಂಟೆವರೆಗೆ — 40 ಮೆಗಾವ್ಯಾಟ್​ — 60 ಮೆಗಾವ್ಯಾಟ್​ — 20 ಮೆಗಾವ್ಯಾಟ್​
    ಬೆಳಗ್ಗೆ 6 ರಿಂದ 9 ಗಂಟೆವರೆಗೆ — 60 ಮೆಗಾವ್ಯಾಟ್​ — 100 ಮೆಗಾವ್ಯಾಟ್​ — 40 ಮೆಗಾವ್ಯಾಟ್​

    ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ — 135 ಮೆಗಾವ್ಯಾಟ್​ — 160 ಮೆಗಾವ್ಯಾಟ್​ — 25 ಮೆಗಾವ್ಯಾಟ್​

    ಬಾಕ್ಸ್​:
    ಮುಂಡರಗಿ, ಶಿರಹಟ್ಟಿ, ಲೆ$್ಮಶ್ವರ, ಗದಗ ತಾಲೂಕು ಸೇರಿ ಗದಗ ವಿಭಾಗದಲ್ಲಿ ಒಟ್ಟಾರೆ 2.51 ಲಕ್ಷ ಹಾಗೂ ರೋಣ, ಗಜೇಂದ್ರಗಡ, ನರಗುಂದ ತಾಲೂಕು ಸೇರಿ ರೊಣ ವಿಭಾಗದಲ್ಲಿ 1.27 ವಿದ್ಯುತ್​ ಸಂಪರ್ಕಗಳಿವೆ. ಗದಗ ಮತ್ತು ರೊಣ ವಿಭಾಗ ಸೇರಿ ಸರಾಸರಿ 190 ಮೆಗಾವ್ಯಾಟ್​ ಪ್ರತಿನಿತ್ಯ ಅಗತ್ಯವಿದೆ. ಆದರೆ, ವಿದ್ಯುತ್​ ಕೊರತೆ ಹಿನ್ನೆಲೆ ಸೆಪ್ಟಂಬರ್​ 30 ರಂದು ಗದಗ ವಿಭಾಗಕ್ಕೆ 35 ಮೆಗಾವ್ಯಾಟ್​ ಮತ್ತು ರೊಣ ವಿಭಾಗದಲ್ಲಿ 10.9 ಮೆಗಾವ್ಯಾಟ್​ ವಿದ್ಯುತ್​ ಮಾತ್ರ ಪೂರೈಕೆ ಆಗಿದೆ. ಮಂಗಳವಾರ ಮುಂಡರಗಿ ಭಾಗದಲ್ಲಿ ಭಾಗಶಃ ಲೋಡ್​ ಶೆಡ್ಡಿಂಗ್​ ಉಲ್ಭಣಿಸಿತ್ತು. ಹೀಗಾಗಿ ರೋಣ, ನರೇಗಲ್​ ಮತ್ತು ಮುಂಡರಗಿಯಲ್ಲಿ ರೈತರು ವಿದ್ಯುತ್​ ಅಸಮರ್ಪಕ ಪೂರೈಕೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದರು.

    ವಿದ್ಯುತ್​ ಉತ್ಪಾದನಾ ಸಾಮರ್ಥ್ಯ: ಜಿಲ್ಲೆಯಲ್ಲಿ ಸೌರ ಮೂಲದಿಂದ 220 ಮೆಗಾವ್ಯಾಟ್​, ಪವನ ವಿದ್ಯುತ್​ ಮೂಲದಿಂದ 713 ಹಾಗೂ ಮುಂಡರಗಿ ಸಕ್ಕರೆ ಕಾರ್ಖಾನೆಯಿಂದ 31 ಸೇರಿ ಪ್ರತಿನಿತ್ಯ 964 ಮೆಗಾವ್ಯಾಟ್​ ವಿದ್ಯುತ್​ ಉತ್ಪಾದನಾ ಸಾಮರ್ಥ್ಯವಿದ್ದರೂ ಈವರೆಗೂ ದಿನವೊಂದಕ್ಕೆ 170 ಮೆಗಾವ್ಯಾಟ್​ ಅತೀ ಹೆಚ್ಚು ಉತ್ಪಾದನೆ ಮಾತ್ರ ಜರುಗಿದೆ.

    ವಿದ್ಯುತ್​ ಸಂಪರ್ಕಗಳು(ಗದಗ ಡಿವಿಸನ್​)
    ಪಂಪ್​ಸೆಟ್​ಗಳು: 28207
    ಮನೆ: 49332
    ವಾಣಿಜ್ಯ ಮಳಿಗೆ: 19451
    ಸಣ್ಣ ಕೈಗಾರಿಕೆ: 3651
    ಕುಡಿಯುವ ನೀರಿನ ಸಂಪರ್ಕ: 5296
    ಬೀದಿ ದೀಪ ಸಂಪರ್ಕ: 1673,

    11ಕೆವಿ ಕೈಗಾರಿಕೆ ಸಂಪರ್ಕ: 99

    ವಿದ್ಯುತ್​ ಸಂಪರ್ಕಗಳು(ರೋಣ ಡಿವಿಸನ್​)
    ಪಂಪಸೆಟ್​ಗಳು & 12315
    ಮನೆ: 31359
    ವಾಣಿಜ್ಯ ಮಳಿಗೆ: 8341
    ಸಣ್ಣ ಕೈಗಾರಿಕೆ: 2029
    ಕುಡಿಯುವ ನೀರಿನ ಸಂಪರ್ಕ: 1076
    ಬೀದಿ ದೀಪ ಸಂಪರ್ಕ: 642
    11ಕೆವಿ ಕೈಗಾರಿಕೆ ಸಂಪರ್ಕ: 55

    ಕೋಟ್​:
    ಉಡುಪಿಯ ಥರ್ಮಲ್​ ಪ್ಲಾಂಟ್​ ತನ್ನ ವಿದ್ಯುತ್​ ಉತ್ಪಾದನೆ ಆರಂಭಿಸಿದೆ. ಥರ್ಮಲ್​ ಪ್ಲಾಂಟ್​ ಮೂಲಕ ಜಿಲ್ಲೆಗೆ ವಿದ್ಯುತ್​ ಖರೀದಿಸುವ ಯೋಜನೆ ಇದೆ. ಕೆಲವೇ ದಿನಗಳಲ್ಲಿ ವಿದ್ಯುತ್​ ಸಮಸ್ಯೆ ಬಗೆ ಹರಿಯಲಿದೆ.
    – ಕಲ್ಯಾಣ ಶೆಟ್ಟರ್​, ಇಇ – ಹೆಸ್ಕಾಂ ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts