More

    ಆರೋಪಿಗಳು ನ್ಯಾಯಾಂಗ ಬಂಧನದಲ್ಲಿ: ವಿನಾಯಕ ಅರೆಸ್ಟ್​ ಆಗಿದ್ದು ಎಲ್ಲಿ?

    ವಿಜಯವಾಣಿ ಸುದ್ದಿಜಾಲ ಗದಗ
    ಬಾಕಳೆ ಕುಟುಂಬದ ನಾಲ್ವರ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಬುಧವಾರ ಪೊಲೀಸ್​ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ಬಂಧಿತ ಆರೋಪಿಗಳನ್ನು ಮತ್ತಷ್ಟು ವಿಚಾರಣೆ ಒಳಪಡಿಸುವ ಹಿನ್ನೆಲೆ ಮತ್ತು ಆರೋಪಿಗಳ ಸಾಮಾಜಿಕ ಹಿನ್ನೆಲೆ, ಆಥಿರ್ಕ ಹಿನ್ನೆಲೆ ಮತ್ತು ಇತರೆ ಪ್ರಕರಣದಲ್ಲಿ ಆರೋಪಿಗಳು ಭಾಗಿ ಆಗಿದ್ದಾರೆಯೇ ಎಂಬುದರ ಕುರಿತು ಪೊಲೀಸರು ವಿಚಾರಣೆ ನಡೆಸಬೇಕಿದೆ. ಕೊಲೆ ಪ್ರಕರಣದಿಂದ ರಾಜ್ಯವೇ ತಲ್ಲಣಗೊಂಡು, ಸಾಮಾಜಿಕ ಸ್ವಾಸ್ಥ$್ಯ ಹದಗೆಡಿಸುವ ಪ್ರಯತ್ನ ನಡೆದ ಹಿನ್ನೆಲೆ ಆರೋಪಿಗಳ ಪೂರ್ವಾಪರ ವಿಚಾರಣೆ ಜತೆಗೆ ಪೊಲೀಸರು ಸಮರ್ಪಕ ಸಾಾಧಾರಗಳನ್ನು ಕಲೆ ಹಾಕಬೇಕಿದೆ.

    ಪೊಲೀಸ್​ ಕಸ್ಟಡಿ ಅಗತ್ಯತೆ?
    ಆರೋಪಿಗಳ ವಿಚಾರಣಗೆ ಮತ್ತಷ್ಟು ದಿನ ಅವಶ್ಯಕತೆ ಇದೆ. ಹತ್ಯೆ ಡೀಲ್​ ನಡೆದಿರುವುದು ಎಲ್ಲಿ?, ಹಣಕಾಸಿವ ವ್ಯವಹಾರ ನಡೆದ ಕುರಿತು ವಿಚಾರಣೆ? ಹತ್ಯೆ ನಡೆಸಲು ಎಲ್ಲಿ? ಹೇಗೆ? ಸುಪಾರಿ ನೀಡಲಾಯಿತು. ಮುಂಗಡ ಹಣ ಪಾವತಿ ಆಗಿದ್ದು ಹೇಗೆ?, ಹತ್ಯೆಗೆ ಸುಪಾರಿ ಪಡೆದ ಗದಗ ಮೂಲದ ೈರೋಜ್​ ಖಾಜಿ ಗೆ ಮಹಾರಾಷ್ಟ್ರದ ಮೀರಜ್​ ಮೂಲದ ಹಂತಕರಿಗೆ ಗೆಳೆತನ ಬೆಳೆದದ್ದು ಹೇಗೆ? ಹತ್ಯೆಗೈದ ದಿನಕ್ಕಿಂತ ಎಷ್ಟು ದಿನ ಮೊದಲೇ ಹಂತಕರು ಗದಗ ನಗರಕ್ಕೆ ಬಂದಿದ್ದರು? ಆರೋಪಿಗಳು ಬಾಕಳೆ ಮನೆ ಹಾಗೂ ಅಕ್ಕಪಕ್ಕದ ಮಾಹಿತಿ ಕಲೆ ಹಾಕಿದ್ದು ಹೇಗೆ? ಶಸ್ತ್ರಾಸ್ತ್ರಗಳ ಖರೀದಿ ಹೇಗಾಯಿತು? ಕೊಲೆ ನಡೆಸುವುದಕ್ಕೂ ಮುಂಚೆ ನಷೆ ಪದಾರ್ಥಗಳನ್ನು ಆರೋಪಿಗಳು ಸೇವಿದ್ದರ ಕುರಿತು ವೈದ್ಯಕಿಯ ಪರೀೆ?, ಹತ್ಯೆಯ ನಂತರ ಎಲ್ಲಿಗೆ ಪ್ರಯಾಣ ಬೆಳೆಸಲು ಯೋಜನೆ ರೂಪಿಸಲಾಗಿತ್ತು? ಹೀಗೆ ಹತ್ತು ಹಲವು ವಿಚಾರಣೆಗೆ ಜತೆಗೆ ಪೊಲೀಸರು ದಾಖಲೆಗಳನ್ನು ಕಲೆ ಹಾಕಬೇಕಿದೆ. ಈ ಕಾರಣದಿಂದ ಆರೋಪಿಗಳನ್ನು ಬುಧವಾರ ಪೊಲೀಸ್​ ಕಸ್ಟಡಿಗೆ ನೀಡುವ ಸಾಧ್ಯತೆ ದಟ್ಟವಾಗಿದೆ.

    ನಗರದಲ್ಲಿ ಏನಿದೆ ಚರ್ಚೆ?
    ರಾಜ್ಯವನ್ನು ತಲ್ಲಣಗೊಳಿಸಿದ್ದ ಗದಗ ನಗರದ ಪ್ರಕಾಶ ಬಾಕಳೆ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ನಂತರ ಗದಗ ನಗರದಲ್ಲಿ ಹತ್ತು ಹಲವು ವಿಷಯಗಳ ಕುರಿತು ಚರ್ಚೆ ನಡೆಯುತ್ತಿವೆ. ಆರೋಪಿಗಳು ಹತ್ಯೆ ಮಾಡಲು ಮೊದಲು ಪ್ರಕಾಶ ಬಾಕಳೆ ಮಲಗಿದ್ದ ಕೊಠಡಿಯ ಬಾಗಿಲನ್ನೇ ತಟ್ಟಿದ್ದರು. ಹೀಗಾಗಿ ಆರೋಪಿಗಳು ಹಲವು ದಿನಗಳ ಹಿಂದೆಯೇ ಮನೆ ಮತ್ತು ದಾಸರ ಗಲ್ಲಿಯ ಎಲ್ಲ ಮಾಹಿತಿ ಕಲೆ ಹಾಕಿದ್ದರು. ನಗರದ ಖಾಸಗಿ ಹೊಟೆಲ್​ ಒಂದರಲ್ಲಿ ತಂಗಿದ್ದರು ಎಂದು ಚರ್ಚೆಗಳು ನಡೆಯುತ್ತಿವೆ. ಹತ್ಯೆಗೆ ನಡೆಸಲು 65 ಲಕ್ಷಕ್ಕೆ ಸುಪಾರಿ ಪಡೆದ ನಗರದ ೈರೋಜ್​ ಖಾಜಿಗೆ ಮತ್ತೀತರ ಆರೋಪಿಗಳಾದ ಹುಡ್ಕೋ ಕಾಲನಿಯ ಜಿಶಾನ್​ ಮೆಹಬೂಬಅಲಿ ಖಾಜಿ, ಮಹರಾಷ್ಟ್ರದ ಮಿರಜ್​ ಮೂಲದ ಅವಳಿ ಸಹೋದರರಾದ ಸಾಹಿಲ್​ ಖಾಜಿ, ಸೋಹೆಲ್​ ಖಾಜಿ ಸಂಬಂಧಿಕರು ಎಂದು ತಿಳಿದು ಬಂದಿದೆ. ಇತರೆ ಆರೋಪಿಗಳಾದ ಸುಲ್ತಾನ ಶೇಖ್​, ಮಹೇಶ ಸಾಳೋಂಕೆ, ವಾಹಿದ್​ ಬೇಪಾರಿ ವೃತ್ತಿಯ ಮೂಲಕ ಇವರಿಗೆ ಒಬ್ಬರಿಗೊಬ್ಬರು ಪರಿಚಯಸ್ಥರು ಎನ್ನಲಾಗಿದ್ದು, ಆರೋಪಿಗಳು ಎಲ್ಲರೂ 19 ರಿಂದ 23 ವಯಸ್ಸಿನ ಒಳಗಿನವರಾಗಿದ್ದಾರೆ.

    ಮತ್ತೇ ಮರಳಿ ಬಂದರು?
    ನಗರದ ದಾಸರ ಓಣಿಯಲ್ಲಿ ಶುಕ್ರವಾರ ಬೆಳಗಿನ ಜಾವ 2.30ಕ್ಕೆ ಪ್ರಕಾಶ ಬಾಕಳೆ ಕುಟುಂಬದ ನಾಲ್ವರ ಕೊಲೆ ಪ್ರಕರಣದಲ್ಲಿ ಸುನಂದಾ ಬಾಕಳೆ ಪುತ್ರ ಕಾತಿರ್ಕ್​ ಬಾಕಳೆ ಹೊರತುಪಡಿಸಿ ಇನ್ನೂಳಿದ ಮೂವರು ಹಂತಕರ ಟಾರ್ಗೆಟ್​ ಆಗಿರಲಿಲ್ಲ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಕೊಲೆಯಾದ ಸಹೋದರ ಸಂಬಂಧಿ ಪರಶುರಾಮ ಹಾದಿಮನಿ (55), ಪರಶುರಾಮನ ಪತ್ನಿ ಲಕ್ಷೀ ್ಮ (45) ಹಾಗೂ 16 ವರ್ಷದ ಪುತ್ರಿ ಆಕಾಂಕ್ಷಾ ಗುರುವಾರ ಸಂಜೆ ಊರಿಗೆ ತೆರಳಲು ರೈಲ್ವೆ ನಿಲ್ದಾಣಕ್ಕೆ ತೆರಳಿದ್ದರು. ಕಾರಣಾಂತರಗಳಿಂದ ಮನೆಗೆ ಮರಳಿದ್ದರು. ಪರಶುರಾಮ ಹಾದಿಮನಿ ಕುಟುಂಬ ಮತ್ತೇ ಮನೆಗೆ ಮರಳಿದ ವಿಚಾರ ಮುಖ್ಯ ಆರೋಪಿ ವಿನಾಯಕನಿಗೆ ಮಾಹಿತಿ ಇರಲಿಲ್ಲ. ಹಾಗಾಗಿ ಹಂತಕರಿಗೆ ಅಮಾಯಕ ಕುಟುಂಬ ಬಲಿಯಾಗಿದೆ ಎಂದು ಮೂಲಗಳು ತಿಳಿಸಿವೆ.

    ಚೆಕ್​ಪೋಸ್ಟ್​ ನಲ್ಲಿ ವಿನಾಯಕ ಬಂಧನ:
    ಹತ್ಯೆಗೆ ಸುಪಾರಿ ಪಡೆದ ಆರೋಪಿ ೈರೋಜ್​ ಪೊಲೀಸರ ಎದುರು ವಿನಾಯಕ ಬಾಕಳೆ ಹೆಸರು ಬಾಯಿಬಿಟ್ಟ ನಂತರ ವಿನಾಯಕನ್ನು ವಿಚಾರಣೆಗೆ ಕರೆತರಲು ಪೊಲೀಸರು ಪ್ರಕಾಶ ಬಾಕಳೆ ಮನೆಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಸಂಬಂಧಿಕರನ್ನು ಹುಬ್ಬಳಿಗೆ ಬಿಡಲು ಕಾರಿನೊಂದಿಗೆ ತೆರಳಿದ್ದಾಗಿ ಬಾಕಳೆ ಕುಟುಂಬ ಪೊಲೀಸರಿಗೆ ತಿಳಿಸಿದೆ. ಈ ನಡುವೆ ಗದಗ ಹುಬ್ಬಳಿ ನಡುವಿನ ಚೆಕ್​ ಪೋಸ್ಟ್​ಗಳಿಗೆ ಮಾಹಿತಿ ನೀಡಿರುವ ಪೊಲೀಸರು ನಿಗದಿತ ನಂಬರ್​ ಹೊಂದಿದ ಕಾರನ್ನು ತಡೆದು ನಿಲ್ಲಿಸುವಂತೆ ಸೂಚಿಸಿದ್ದಾರೆ. ಅಣ್ಣಿಗೇರಿ ಬಳಿ ಚೆಕ್​ ಪೋಸ್ಟ್​ ಸಿಬ್ಬಂದಿ ಕಾರನ್ನು ತಡೆದು ನಿಲ್ಲಿಸಿದ ಅರ್ಧ ಗಂಟೆ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ವಿನಾಯಕ ನನ್ನು ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಬಂಧಿತ ಹಂತಕರನ್ನು ಗುರುತಿಸಿದ ವಿನಾಯಕ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ ಮೂಲಗಳು ವಿಜಯವಾಣಿಗೆ ತಿಳಿಸಿವೆ.

    ದತ್ತು ಮಗಳು:
    ಅಮಾಯಕವಾಗಿ ಕೊಲೆಯಾದ ಕೊಪ್ಪಳ ಮೂಲದ ಪರಶುರಾಮ, ಲಕ್ಷಿ$್ಮ ಅವರು ಮಕ್ಕಳಿಲ್ಲದ ಕಾರಣ ಆಕಾಂಾಳನ್ನು ದತ್ತು ಪಡೆದು ಸಾಕುತ್ತಿದ್ದರು. ಪರಶುರಾಮ ಕೊಪ್ಪಳ ಭಾಗ್ಯ ನಗರದಿಂದ ಸ್ಥಳಿಯ ಚುನಾವನೆಗೆ ಸ್ಪಧಿರ್ಸಿ ಪರಾವಭಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಕೋಟ್​:
    ವಜ್ಞಾನಿಕವಾಗಿ ಸಾಾಧಾರಗಳನ್ನು ಕಲೆ ಹಾಕುತ್ತಿದ್ದೇವೆ. ವಿಚಾರಣೆ ಬಾಕಿ ಇರುವುದರಿಂದ ಬುಧವಾರ ಪೊಲೀಸ್​ ಕಸ್ಟಡಿಗೆ ಆರೋಪಿಗಳನ್ನು ಕೇಳುತ್ತೇವೆ.
    ಬಿ.ಎಸ್​. ನೇಮಗೌಡ, ಎಸ್ಪಿ – ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts