More

    ಮೊಬೈಲ್ ಪತ್ತೆಯಲ್ಲಿ ಗದಗ ಎರಡನೆ ಸ್ಥಾನ

    ಗದಗ: ತಂತ್ರಾಂಶ ಬಳಸಿಕೊಂಡು ಕಳ್ಳತನವಾದ ಮೊಬೈಲ್ ಗಳನ್ನು ಪತ್ತೆಹಚ್ಚಿ, ಅವುಗಳನ್ನು ಮರಳಿಸುವಲ್ಲಿ ಗದಗ ಜಿಲ್ಲೆ ರಾಜ್ಯದಲ್ಲಿಯೇ ಎರಡನೆ ಸ್ಥಾನದಲ್ಲಿದೆ ಎಂದು ಎಡಿಜಿಪಿ ಮುರುಗನ್ ಹೇಳಿದರು.

    ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಅಂದಾಜು 40 ಲಕ್ಷ ರೂ. ಮೌಲ್ಯದ ಕಳ್ಳತನವಾದ ಸ್ವತ್ತುಗಳನ್ನು ಮರಳಿ ಒಪ್ಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರು ನಗರ ಜಿಲ್ಲೆ ಹೊರುಪಡಿಸಿದರೆ ಗದಗ ಜಿಲ್ಲೆ ಮೊಬೈಲ್ ಪತ್ತೆ ಹಚ್ಚುವಲ್ಲಿ ಮುಂಚೂಣಿಯಲ್ಲಿದೆ ಎಂದರು.

    ಗದಗ ಜಿಲ್ಲಾ ಪೊಲೀಸರ ಸತತ ಪ್ರಯತ್ನದಿಂದ ನೂರಾರು ಮೊಬೈಲ್, ಬೈಕ್, ಟ್ರ್ಯಾಕ್ಟರ್ ಟ್ರೇಲರ್, ಬೆಳ್ಳಿ-ಬಂಗಾರದ ಆಭರಣಗಳನ್ನು ಪತ್ತೆ ಮಾಡಲಾಗಿದೆ. ಪೊಲೀಸರ ಈ ಕಾರ್ಯ ನಿರಂತರವಾಗಿರಲಿ ಎಂದ ಅವರು, ಕಳೆದೆರಡು ದಿನಗಳಿಂದ ಜಿಲ್ಲೆಯ ಪೊಲೀಸ್ ಇಲಾಖೆಯ ಪರಿಶೀಲನೆ ನಡೆಸಿದ್ದು, ಉತ್ತಮ ಕೆಲಸಗಳಾಗಿರುವುದು ಗಮನಕ್ಕೆ ಬಂದಿದೆ. ಜಿಲ್ಲೆಯ ಕಾನೂನು ಸುವ್ಯವಸ್ಥೆ ಉತ್ತಮ ಸ್ಥಿತಿಯಲ್ಲಿದೆ ಎಂದರು.

    ಸಮಾರಂಭದಲ್ಲಿ ಬೆಳಗಾವಿ ಐಜಿಪಿ  ವಿಕಾಸಕುಮಾರ್, ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಹೆಚ್ಚುವರಿ ಎಸ್ಪಿ ಎಂ.ಬಿ. ಸಂಕದ ಹಾಗೂ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

    39.70 ಲಕ್ಷ ರೂ. ವಸ್ತುಗಳು: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಸಂಬಂಧಿಸಿದ  35.13 ಲಕ್ಷ ರೂ. ಮೌಲ್ಯದ 210 ಮೊಬೈಲ್, ಮುಂಡರಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನವಾದ 6 ಲಕ್ಷ ರೂ. ಮೌಲ್ಯದ ಮೂರು ಟ್ರ್ಯಾಕ್ಟರ್ ಟ್ರೇಲರ್, ರೋಣ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾದ 10 ಬೈಕ್‌ ಸಹಿತ ಒಟ್ಟು 39.70 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಮರಳಿ ಒಪ್ಪಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts