More

    ದಾಳಿ ಮಾಡಲಿದೆ ಜಿ-4 ಎಂಬ ಚೀನಿ ವೈರಸ್‌: ವಿಜ್ಞಾನಿಗಳು ಹೇಳಿರುವುದೇನು?

    ಬೀಜಿಂಗ್‌: ಚೀನಾದ ಹಂದಿಗಳಿಂದ ಭೀಕರ ವೈರಸ್‌ ಒಂದು ಜನರಿಗೆ ಅಂಟಿಕೊಳ್ಳುವ ಸಾಧ್ಯತೆ ಇದೆ ಎಂಬ ಗಾಬರಿ ವಿಷಯವನ್ನು ಚೀನಿ ವಿಜ್ಞಾನಿಗಳು ಹೊರಗೆಡವಿದ್ದಾರೆ!

    ಚೀನಾದ ಹಂದಿಗಳು ಇನ್‌‌ಫ್ಲುಯೆಂಜಾದಿಂದ ಹೆಚ್ಚು ಹೆಚ್ಚು ಸೋಂಕಿಗೆ ಒಳಗಾಗುತ್ತಿವೆ, ಈ ಸೋಂಕು ಮನುಷ್ಯರಿಗೂ ಹರಡುವ ಸಾಧ್ಯತೆ ಇದೆ. ಇದು ಸುಲಭದಲ್ಲಿ ಒಬ್ಬರಿಂದ ಒಬ್ಬರಿಗೆ ಹರಡಬಹುದಾಗಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದು ಜಿ-4 ಎಂಬ ಹೆಸರಿನ ವೈರಸ್‌ ಆಗಿದೆ ಎಂದಿದ್ದಾರೆ.

    ಚೀನಾದ ಹಂದಿಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ವೈರಸ್‌ ಯುರೋಪಿಯನ್ ಮತ್ತು ಏಷ್ಯನ್ ಪಕ್ಷಿಗಳಲ್ಲಿಯೂ ತಗಲುವ ಸಾಧ್ಯತೆ ಇದೆ ಎಂದಿರುವ ವಿಜ್ಞಾನಿಗಳು. ಚೀನಾ ಅಗ್ರಿಕಲ್ಚರಲ್ ಯೂನಿವರ್ಸಿಟಿಯ (ಸಿಎಯು) ಲಿಯು ಜಿನ್ಹುವಾ ನೇತೃತ್ವದ ತಂಡವು ಚೀನಾದ 10 ಕಸಾಯಿಖಾನೆಗಳ 30 ಸಾವಿರಕ್ಕೂ ಅಧಿಕ ಹಂದಿಗಳ ಸ್ವ್ಯಾಬ್‌ಗಳ ಪರೀಕ್ಷೆ ಮಾಡಿದ್ದು, ಅವುಗಳ ಉಸಿರಾಟದ ತೊಂದರೆಯಿಂದ ಬಳಲುತ್ತಿರುವುದು ತಿಳಿದುಬಂದ ಹಿನ್ನೆಲೆಯಲ್ಲಿ, ಇಂಥದ್ದೊಂದು ಅಧ್ಯಯನ ನಡೆಸಲಾಗಿತ್ತು.

    ಇದನ್ನೂ ಓದಿ: ಚಿಕಿತ್ಸೆ ಸಿಗದೇ ಕಂದನ ಸಾವು: ನೋಡಲಾಗುತ್ತಿಲ್ಲ ಕರುಳಿನ ಕಣ್ಣೀರು

    ಈ ನಿಟ್ಟಿನಲ್ಲಿ ಈಗಾಗಲೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ. ವೈರಸ್‌ಗೆ ಸಂಬಂಧಿಸಿದಂತೆ ನಡೆಸಿರುವ ಅಧ್ಯಯನದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ.

    ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ರೊಸೀಡಿಂಗ್ಸ್‌ನಲ್ಲಿ ಪ್ರಕಟವಾದ ಈ ಅಧ್ಯಯನವು ಜಿ 4 ಹೆಸರಿನ ವೈರಸ್‌ನ ಕರಾಳತೆಯನ್ನು ಬಿಚ್ಚಿಟ್ಟಿದೆ. ಇದು 2009ರಲ್ಲಿ ವಿಶ್ವದೆಲ್ಲೆಡೆ ಬೆಚ್ಚಿ ಬೀಳಿಸಿದ್ದ ಎಚ್‌1ಎನ್‌1ನ ಇನ್ನೊಂದು ರೂಪಾಂತರ ಎಂದು ಅದರಲ್ಲಿ ಉಲ್ಲೇಖಗೊಂಡಿದೆ.

    ಮನುಷ್ಯರಿಗೆ ಸೋಂಕು ತಗುಲಿಸಬಹುದಾಗಿ ಎಲ್ಲಾ ಲಕ್ಷಣಗಳನ್ನೂ ಈ ಸೋಂಕು ಹೊಂದಿರುವ ಬಗ್ಗೆ ಚೀನೀ ವಿಶ್ವವಿದ್ಯಾನಿಲಯಗಳು ಮತ್ತು ಚೀನಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ವಿಜ್ಞಾನಿಗಳು ಕೂಡ ಖಚಿತಪಡಿಸಿದ್ದಾರೆ. (ಏಜೆನ್ಸೀಸ್‌)

    ಪಾಕ್‌ನ ನಕಲಿ ಪೈಲಟ್‌ಗಳ ಭಯಾನಕ ಸತ್ಯ ಬಯಲು! ವಿಶ್ವಾದ್ಯಂತ ತಲೆದಂಡ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts