More

    ಫರ್ನೀಚರ್ ಎಕ್ಸ್​ಪೋದಲ್ಲಿ ಭರ್ಜರಿ ವಹಿವಾಟು: ಮೇಳಕ್ಕೆ ನಟಿ ತನಿಷಾ ಕುಪ್ಪಂಡ ಭೇಟಿ, ಜಾಲಹಳ್ಳಿ HMT ಮೈದಾನದಲ್ಲಿ ಆಯೋಜನೆ

    ಬೆಂಗಳೂರು: ಜಾಲಹಳ್ಳಿ ಎಚ್​ಎಂಟಿ ಮೈದಾನದಲ್ಲಿ ಎಕ್ಸ್​ಪೋ ಇವೆಂಟ್ಸ್ ಆಂಡ್ ಎಕ್ಸಿಬಿಷನ್ಸ್, ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಸಹಯೋಗದಲ್ಲಿ ಆಯೋಜಿಸಿರುವ ‘ಫರ್ನೀಚರ್ ಎಕ್ಸ್​ಪೋ’ಗೆ 7ನೇ ದಿನವಾದ ಗುರುವಾರ ಎಂದಿನಂತೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

    ಕಾಲೇಜಿನ ಯುವಕ- ಯುವತಿಯರು, ಸಾರ್ವಜನಿಕರು, ಕುಟುಂಬಸ್ಥರು, ಭೇಟಿ ನೀಡಿ ತಮಗಿಷ್ಟವಾದ ಉತ್ಪನ್ನಗಳ ಬಗ್ಗೆ ಮಳಿಗೆದಾರರಿಂದ ಮಾಹಿತಿ ಪಡೆದುಕೊಂಡು ನಂತರ ಖರೀದಿಸುತ್ತಿದ್ದ ದೃಶ್ಯಗಳು ಕಂಡುಬಂತು. ಗುರುವಾರ ಚಿತ್ರ ನಟಿ ತನಿಷಾ ಕುಪ್ಪಂಡ ಆಗಮಿಸಿ ವಿವಿಧ ಬಗೆಯ ಬಟ್ಟೆ, ಅಲಂಕಾರಿಕ ವಸ್ತುಗಳನ್ನು ಖರೀದಿಸಿದ್ದು ವಿಶೇಷವಾಗಿತ್ತು.

    150ಕ್ಕೂ ಹೆಚ್ಚು ಮಳಿಗೆಗಳು: ಎಕ್ಸ್​ಪೋದಲ್ಲಿ 150ಕ್ಕೂ ಹೆಚ್ಚು ಮಳಿಗೆಗಳಿವೆ. ಆಹಾರ ಉತ್ಪನ್ನ ಹಾಗೂ ಅಲಂಕಾರಿಕ ಸಾಮಗ್ರಿಗಳನ್ನು ಕೆಲವರು ಖರೀದಿಸಿದರು. ಇನ್ನೂ ಕೆಲವರು ಪೀಠೋಪಕರಣಗಳ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದುಕೊಂಡು ಖರೀದಿಸಿದರು.

    ಸೋಫಾ ಸೆಟ್, ಕುಶನ್, ಟೀಪಾಯಿ, ಕುರ್ಚಿ, ಗೋಡೆ ಗಡಿಯಾರ, ಬಾಗಿಲು- ಕಿಟಕಿಗಳಿಗೆ ಬಳಸಬಹುದಾದ ಅಲಂಕಾರಿಕ ಹ್ಯಾಂಗಿಂಗ್, ದೀಪದ ಗುಚ್ಛ, ಪಿಂಗಾಣಿ ಸಾಮಗ್ರಿ, ಕರ್ಟನ್, ಕಾಶ್ಮೀರಿ, ರಾಜಸ್ಥಾನಿ ಕಾರ್ಪೆಟ್, ನೆಲಹಾಸುಗಳು ಮುಂತಾದ ಉತ್ತರ ಭಾರತ ಶೈಲಿ ಡ್ರೆಸ್ ಮೆಟೀರಿಯಲ್ಸ್ ಖರೀದಿಗೆ ಲಭ್ಯವಿದೆ. ಒಳಾಂಗಣ ಅಲಂಕಾರಕ್ಕೆ ಬಳಸುವ ವಿವಿಧ ಬಗೆಯ ವಿನ್ಯಾಸ, ಮಾದರಿಯ ಉತ್ಪನ್ನಗಳು, ವಿವಿಧ ಬ್ರ್ಯಾಂಡ್​ನ ಕೈಮಗ್ಗ, ಕರಕುಲ ವಸ್ತುಗಳು ಹಾಗೂ ಖಾದಿ ಉಡುಪುಗಳನ್ನು ಕೊಳ್ಳಬಹುದು.

    ಹಲವು ವಸ್ತು ಖರೀದಿಸುವ ಚಾನ್ಸ್

    ಜಯನಗರದ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ದಿನಗಳಲ್ಲಿ ಗೆಳತಿಯರ ಜತೆ ಗಲ್ಲಿ ಶಾಪಿಂಗ್, ಸ್ಟ್ರೀಟ್ ಶಾಪಿಂಗ್ ಮಾಡುತ್ತಿದ್ದೆ. ಆಗಿನಿಂದಲೂ ಎಕ್ಸ್​ಪೋಗಳಿಗೆ ಹೋಗುವುದೆಂದರೆ ನನಗಿಷ್ಟ. ಆ ದಿನಗಳನ್ನು ನಾನು ಈಗ ತುಂಬ ಮಿಸ್ ಮಾಡುತ್ತಿದ್ದೇನೆ ಎಂದು ನಟಿ ತನಿಷಾ ಕುಪ್ಪಂಡ ಹೇಳಿದರು. ಇದೀಗ ವಿಜಯವಾಣಿ ಮತ್ತು ದಿಗ್ವಿಜಯ ವಾಹಿನಿ ಆಯೋಜಿಸಿರುವ ಮೇಳದಲ್ಲಿ ಒಂದೇ ಸೂರಿನಡಿ ವಿವಿಧ ರಾಜ್ಯಗಳಿಂದ ತಂದಿರುವ ಹಲವು ಬಗೆಯ ವಸ್ತುಗಳು ಖರೀದಿಗೆ ಸಿಗುತ್ತದೆ. ಇಲ್ಲಿರುವ ಫರ್ನೀಚರ್​ಗಳು ಒಂದಕ್ಕಿಂತ ಒಂದು ಆಕರ್ಷಕವಾಗಿವೆ. ಜತೆಗೆ ಕೈಗೆಟುಕುವ ದರದಲ್ಲಿವೆ ಎಂದರು.

    ಇಂದು ಬೆಂಗಳೂರು ಬಾಯ್ಸ್​ ಟೀಮ್ ಭೇಟಿ

    ಫರ್ನೀಚರ್ ಎಕ್ಸ್​ಪೋಗೆ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಗುರುದತ್ ಗಾಣಿಗ ನಿರ್ದೇಶನದ ‘ಬೆಂಗಳೂರು ಬಾಯ್್ಸ ಚಿತ್ರತಂಡ ಭೇಟಿ ನೀಡಲಿದೆ. ನಾಯಕರಾದ ಸಚಿನ್ ಚಲುವರಾಯಸ್ವಾಮಿ, ಚಂದನ್ ಆಚಾರ್, ಅಭಿ ದಾಸ್ ಮತ್ತು ರೋಹಿತ್ ಭಾನುಪ್ರಕಾಶ್ ಮತ್ತು ನಾಯಕಿ ಸೋನಿ ಮುಲೇವಾ ಎಕ್ಸ್​ಪೋದಲ್ಲಿ ಭಾಗವಹಿಸಲಿದ್ದಾರೆ. ಕಳೆದ ವಾರ (ಜೂ.30) ರಾಜ್ಯಾದ್ಯಂತ ಬಿಡುಗಡೆಯಾಗಿರುವ ‘ಬೆಂಗಳೂರು ಬಾಯ್ಸ್​ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ.

    ನಾನು ಸೋಫಾ ಖರೀದಿಸುವ ಸಲುವಾಗಿ ಎಕ್ಸ್​ಪೋಗೆ ಬಂದಿದ್ದೇನೆ. ಇಲ್ಲಿ ಹೆಚ್ಚಿನ ಆಯ್ಕೆಗೆ ಅವಕಾಶವಿದ್ದು, ಇಲ್ಲಿ ಎಲ್ಲ ತರಹದ ಉತ್ತಮವಾದ ಫರ್ನೀಚರ್​ಗಳು ಕೈಗೆಟುಕುವ ದರದಲ್ಲಿವೆ.

    | ರೀಟಾ ಜಾಲಹಳ್ಳಿ ನಿವಾಸಿ

    ಎಕ್ಸ್​ಪೋದಲ್ಲಿ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಫರ್ನೀಚರ್​ಗಳನ್ನು ಮಾರಾಟ ಮಾಡಲಾಗುತ್ತಿದೆ.

    | ಮಹೇಶ್ ಸುಂಕದಕಟ್ಟೆ ನಿವಾಸಿ

    ಮೇಳಕ್ಕೆ ಭಾನುವಾರ ತೆರೆ
    ಎಕ್ಸ್​ಪೋಗೆ ಭಾನುವಾರ (ಜು.9) ತೆರೆ ಬೀಳಲಿದೆ. ಶನಿವಾರ, ಭಾನುವಾರ ವೀಕೆಂಡ್ ಆಗಿರುವ ಹಿನ್ನೆಲೆ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆಯಿದೆ.

    ಎಕ್ಸ್​ಪೋ ತುಂಬ ಚೆನ್ನಾಗಿದೆ. ಫರ್ನೀಚರ್​ಗಳ ಸಂಗ್ರಹ ಹೆಚ್ಚಾಗಿದೆ. ಆದರೆ ಫುಡ್ ಕೋರ್ಟ್ ಮಾಡಿಲ್ಲ. ಮುಂದಿನ ಬಾರಿ ಫುಡ್ ಕೋರ್ಟ್​ಗಳನ್ನು ಮಾಡಿ.

    | ವರುಣ್ ನಾಗರಬಾವಿ ನಿವಾಸಿ

    ಅತಿಯಾಗಿ ಡ್ರೈಫ್ರೂಟ್ಸ್ ಸೇವಿಸ್ತೀರಾ? ಅದರಿಂದಾಗುವ ಅಡ್ಡಪರಿಣಾಮಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು

    ಇವರೇ ನೋಡಿ ಭಾರತದ ಶ್ರೀಮಂತ ಕ್ರಿಕೆಟಿಗ: ಒಟ್ಟು ಆಸ್ತಿ ಮೌಲ್ಯ ಕೇಳಿದ್ರೆ ನೀವು ಬೆರಗಾಗೋದು ಖಂಡಿತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts