More

    ಭೂತದ ಗುಂಡಿಯ ಭಯಾನಕ ಸತ್ಯ!!

    ಶಿರಸಿ: ಭೂತದ ಗುಂಡಿ ಹೆಸರಿನಂತೆ ಭಯಾನಕವಾಗಿ ಮಾರ್ಪಟ್ಟಿದೆ. ತಿಂಗಳ ಹಿಂದೆ ಮದುವೆಯ ಸಂಭ್ರಮದಲ್ಲಿದ್ದ ಕುಟುಂಬವೊಂದು ಇದೀಗ ಶೋಕ ಸಾಗರದಲ್ಲಿ ಮುಳುಗಿದೆ. ಭಾನುವಾರ ಭೈರುಂಭೆ ಗ್ರಾಪಂ ವ್ಯಾಪ್ತಿಯ ಶಾಲ್ಮಲಾ ನದಿಯ ನೀರಿನಲ್ಲಿ ಮುಳುಗಿ ಮೃತಪಟ್ಟ ಐವರ ದೇಹಗಳನ್ನು ಸೋಮವಾರ ಏಕ ಕಾಲದಲ್ಲಿ ದಫನ್‌ ಮಾಡಲಾಯಿತು. ರಾಮನಬೈಲ್‌ನ ಮನೆಯ ಎದುರು ಸಾವಿರಾರು ಜನ ಸೇರಿ ಕಣ್ಣೀರು ಸುರಿಸಿದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತರಲ್ಲಿ ಮಹಮ್ಮದ್ ಸಲೀಮ್ ಕಲೀಲ್ ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು.

    ಹಿನ್ನೆಲೆ:
    ನಗರದ ರಾಮನಬೈಲ್‌ನ ಮುಸ್ಲಿಂ ಕುಟುಂಬದ ಸುಮಾರು 25 ಜನರು ಭಾನುವಾರ ವಿಹಾರಕ್ಕೆಂದು ತಾಲೂಕಿನ ಶಾಲ್ಮಲಾ ನದಿಯ ಸಹಸ್ರ ಲಿಂಗ ಸಮೀಪದ ಭೂತದ ಗುಂಡಿ ಸಮೀಪ ತೆರಳಿದ್ದರು. ಅಲ್ಲೇ ಅಡುಗೆ ಮಾಡಿ ಊಟ ಮಾಡಿದ್ದರು. ಸುಮಾರು 2.30 ರ ಹೊತ್ತಿಗೆ ತಂಡದಲ್ಲಿದ್ದ ಮಗುವೊಂದು ಆಟವಾಡುತ್ತ ನೀರಿಗೆ ಬಿದ್ದಿದೆ. ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರೆಹಮಾನ್ ಅದನ್ನು ಗಮನಿಸಿ ತಕ್ಷಣ ನೀರಿಗೆ ಧುಮುಕಿ ಮಗುವನ್ನು ರಕ್ಷಿಸಿ ತಾಯಿಯ ಕೈಗೆ ಇತ್ತಿದ್ದಾರೆ. ಆದರೆ, ಮತ್ತೆ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸುವ ಬದರದಲ್ಲಿ ಇತರರೂ ನೀರಿಗೆ ಧುಮುಕಿದ್ದು, ಐದು ಜನ ನೀರು ಪಾಲಾಗಿದ್ದರು.

    ಶಿರಸಿ ರಾಮನಬೈಲಿನ ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರೆಹಮಾನ್ (44), ನಾದಿಯಾ ನೂರ್ ಅಹಮದ್ (20), ನಬಿಲ್ ನೂರ್ ಅಹಮದ್ ಶೇಖ್ (22), ಉಮರ್ ಸಿದ್ದಿಕ್(25) ಕಸ್ತೂರಬಾ ನಗರದ ವಿದ್ಯಾರ್ಥಿ ಮಿಸ್ಟಾ ತಬಸುಮ್ (21) ಮೃತಪಟ್ಟ ದುರ್ದೈವಿಗಳು.

    ತಕ್ಷಣ ಅಗ್ನಿಶಾಮಕ ದಳ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಈಜುಗಾರರು ಸತತ 4 ಗಂಟೆಗಳ ಕಾರ್ಯಾಚರಣೆ ನಡೆಸಿ ಭಾನುವಾರ ರಾತ್ರಿ ಐದೂ ಶವಗಳನ್ನೂ ಮೆಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

    ಭೂತದ ಗುಂಡಿ ರಹಸ್ಯ

    ಶಿರಸಿಯಲ್ಲಿ ಹುಟ್ಟಿ ಬೆಟ್ಟ, ಗುಡ್ಡಗಳ ನಡುವೆ ವೇಗವಾಗಿ ಹರಿಯುವುದು ಶಾಲ್ಮಲಾ ನದಿ. ಮುಂದೆ ಬೇಡ್ತಿ ನದಿಗೆ ಸೇರುತ್ತದೆ. ನಂತರ ಗಂಗಾವಳಿಯಾಗಿ ಹರಿದು ಅರಬ್ಬಿ ಸಮುದ್ರ ಸೇರುತ್ತದೆ. ಶಿರಸಿಯ ಭೈರುಂಬೆ, ಸೋಂದಾ, ಭಾಗದಲ್ಲಿ ಸಾಕಷ್ಟು ನಡುವೆ ಹರಿಯುವ ನದಿ ಕಲ್ಲನ್ನು ಕೊರೆದು ಚಿತ್ರ ವಿಚಿತ್ರ ಆಕೃತಿಗಳನ್ನು ಸೃಷ್ಟಿಸಿದೆ. ನದಿಯ ನೀರು ಅಲ್ಲಲ್ಲಿ ನಿಂತು ಗುಂಡಿಗಳು ಸೃಷ್ಟಿಯಾಗಿವೆ. ಬಂಡೆಗಳು ಜಾರುತ್ತವೆ. ನೀರು ಕಡಿಮೆ ಇದೆ ಎಂದು ಮೇಲ್ನೋಟಕ್ಕೆ ಕಂಡರೂ ಕಲ್ಲುಗಳ ನಡುವಿನ ಆಳವಾದ ಸುಳಿ ನೀರಿಗಿಳಿದವರನ್ನು ಸೆಳೆಯುತ್ತದೆ. ಸಹಸ್ರ ಲಿಂಗಕ್ಕೆ ಬರುವ ಪ್ರವಾಸಿಗರು ಈ ಗುಂಡಿಯಲ್ಲಿ ಈಜಲು ಹೋಗಿ ಮೃತಪಟ್ಟ ಕೆಲ ಘಟನೆಗಳು ಈ ಹಿಂದೆ ನಡೆದಿವೆ. ಇದು ಮಾತ್ರವಲ್ಲ. ಈದೇ ನಾಲ್ಕೈದು ಕಿಮೀ ದೂರದಲ್ಲಿ ಇಂಥ ಇನ್ನೂ ಕೆಲವು ಗುಂಡಿಗಳಿದ್ದು, ಅಲ್ಲೂ ಕೆಲವರು ಮೃತಪಟ್ಟ ಉದಾಹರಣೆಗಳಿವೆ. 

    ಇದನ್ನೂ ಓದಿ: ಸಹಸ್ರಲಿಂಗದಲ್ಲಿ ಐವರು ನೀರುಪಾಲು..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts