More

    ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಕ್ರಿಯೆ

    ಬ್ಯಾಡಗಿ: ತಾಲೂಕಿನ ಮೋಟೆಬೆನ್ನೂರು ಗ್ರಾಮದ ಮೃತಯೋಧ ಸುರೇಶ ಉಡಚಪ್ಪ ಹಾವನೂರು (43) ಅಂತ್ಯಕ್ರಿಯೆ ಶನಿವಾರ ಸರ್ಕಾರಿ ಗೌರವದೊಂದಿಗೆ ಶನಿವಾರ ಜರುಗಿತು.

    ಬೆಳಗಾವಿಯಿಂದ ಯೋಧನ ಪಾರ್ಥಿವ ಶರೀರ ಸಂಜೆ 6 ಗಂಟೆ ಸುಮಾರಿಗೆ ಗ್ರಾಮಕ್ಕೆ ಆಗಮಿಸಿತು. ಬಳಿಕ ಕೆಲಕಾಲ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಂಡು ಅಂತಿಮ ದರ್ಶನ ಪಡೆಯಲಾಯಿತು. ಬಳಿಕ ಗ್ರಾಮ ಪಂಚಾಯಿತಿ ಆವರಣದಲ್ಲಿ ಸ್ಥಳೀಯ ಪೊಲೀಸ್ ಸಿಬ್ಬಂದಿ ಹಾಗೂ ಸಿಆರ್​ಪಿಎಫ್ ತುಕಡಿಯಿಂದ ಸರ್ಕಾರಿ ಗೌರವ ಸಲ್ಲಿಸಿ, ಅಂತ್ಯಕ್ರಿಯೆ ನೆರವೇರಿಸಲಾಯಿತು.

    ತ್ರಿಪುರಾದ ಸಿಆರ್​ಪಿಎಫ್ ಬೆಟಾಲಿಯನ್ ತಂಡದಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಯೋಧ ಸುರೇಶ ಹಾವನೂರ ಅನಾರೋಗ್ಯದಿಂದ ಬುಧವಾರ ಮೃತಪಟ್ಟಿದ್ದರು.

    ಅಂತ್ಯಕ್ರಿಯೆ ವೇಳೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ತಹಸೀಲ್ದಾರ್ ಶರಣಮ್ಮ ಕಾರಿ, ಸಿಪಿಐ ಭಾಗ್ಯವತಿ ಬಂತಿ, ಜಿ.ಪಂ. ಸದಸ್ಯೆ ಸುಮಂಗಲಾ ಪಟ್ಟಣಶೆಟ್ಟಿ, ಅನುಸೂಯಾ ಶಿವಬಸಪ್ಪ ಕುಳೇನೂರು, ಎಪಿಎಂಸಿ ಸದಸ್ಯೆ ವನಿತಾ ಗುತ್ತಲ, ತಾ.ಪಂ. ಸದಸ್ಯ ಪೂರ್ಣಿಮಾ ಆನ್ವೇರಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಬೆಟ್ಟಪ್ಪನವರ, ಸದಸ್ಯ ನಾಗರಾಜ ಹಾವನೂರು, ಮಾಜಿ ಸೈನಿಕರಾದ ಮಲ್ಲೇಶಪ್ಪ ಚಿಕ್ಕಣ್ಣನವರ, ವೀರಭದ್ರಗೌಡ್ರ ಪಾಟೀಲ, ವೀರಣ್ಣ ಮತ್ತಿಹಳ್ಳಿ, ಲಿಂಗರಾಜಯ ಅಯ್ಯಣ್ಣನವರ, ಜಯಪ್ಪ ಚಂದ್ರಪ್ಪನವರ, ಸಿದ್ದಪ್ಪ ಗುಂಡೇನಹಳ್ಳಿ, ಗೂಳಪ್ಪ ಪೂಜಾರ, ಉದ್ಯಮಿ ವಿ.ವಿ. ಹಿರೇಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts