More

    ನರಗುಂದದಲ್ಲಿ ವಿಎಚ್​ಪಿ, ಬಜರಂಗದಳದಿಂದ ನಿಧಿ ಸಂಗ್ರಹ

    ನರಗುಂದ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ವಣಕ್ಕಾಗಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರಿಂದ ಪಟ್ಟಣದ 23 ವಾರ್ಡ್​ಗಳಲ್ಲಿ ಭಾನುವಾರ ನಿಧಿ ಸಮರ್ಪಣಾ ಅಭಿಯಾನ ಜರುಗಿತು.

    ಸುಕ್ಷೇತ್ರ ವಿರಕ್ತಮಠ, ಕಿಡಕಿ ಬಸವೇಶ್ವರ ದೇವಸ್ಥಾನ, ಅಂಬಾಭವಾನಿ, ಮಾರುತೇಶ್ವರ ದೇವಸ್ಥಾನ ಸೇರಿದಂತೆ ನಗರದ ಪ್ರಮುಖ ದೇವಸ್ಥಾನಗಳಲ್ಲಿ ಗುರು-ಹಿರಿಯರಿಂದ ಪೂಜೆ ಸಲ್ಲಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

    14ನೇ ವಾರ್ಡ್​ನ ಅಂಧ ಬಾಲಕಿ ಮಂಜುಶ್ರೀ ಚನ್ನಬಸನಗೌಡ್ರ ಅವರು ತಮ್ಮ ಒಂದು ತಿಂಗಳ 1500 ಪಿಂಚಣಿ ಹಣ ಶ್ರೀರಾಮ ಮಂದಿರ ನಿರ್ವಣಕ್ಕೆ ನಿಧಿ ಸಮರ್ಪಣೆ ಮಾಡಿದರು. 17ನೇ ವಾರ್ಡ್​ನ ಪ್ರಶಾಂತ ಪಲ್ಲೇದ ಅವರ 7 ವರ್ಷದ ಮಗ ಧ್ರುವ, 5 ವರ್ಷದ ಮಗಳು ಧೃತಿ ಪಲ್ಲೇದ ಅವರು ವರ್ಷಪೂರ್ತಿ ಕೂಡಿಟ್ಟಿದ್ದ 1730 ರೂ. ಗಳನ್ನು ಮಂದಿರ ನಿರ್ವಣಕ್ಕೆ ನಿಧಿ ಸಮರ್ಪಿಸಿದರು. 23ನೇ ವಾರ್ಡ್​ನಲ್ಲಿ ಪ್ರಸನ್ನ ಕುಲಕರ್ಣಿ ಅವರ ಪುತ್ರ ಕೃಷ್ಣ, ಪುತ್ರಿ ವರ್ಷಾ ಕುಲಕರ್ಣಿ ಕೂಡಿಟ್ಟಿದ್ದ 600 ರೂ.ಗಳನ್ನು ಶ್ರೀರಾಮ ಮಂದಿರ ನಿರ್ವಣಕ್ಕೆ ವಿತರಿಸಿದರು.

    ದಂಡಾಪೂರ 3ನೇ ವಾರ್ಡ್​ನಲ್ಲಿ ನಿಧಿ ಸಂಗ್ರಹ ಮಾಡುತ್ತಿದ್ದ ವೇಳೆ ಅಜ್ಜಿಯೊಬ್ಬರು ಕುಂಟುತ್ತ ಓಡೋಡಿ ಬಂದು ಮುಷ್ಠಿಯಲ್ಲಿದ್ದ ಹಣವನ್ನು ದೇಣಿಗೆ ನೀಡಿದರು. ಹೆಸರು ಕೇಳಿದರೆ ನನ್ನ ಹೆಸರು ಆ ಶ್ರೀರಾಮನಿಗೆ ಗೊತ್ತು ಎಂದು ಅಜ್ಜಿ ಹೇಳಿ ಎಲ್ಲರನ್ನೂ ನಿಬ್ಬೆರಗಾಗಿಸಿದರು. . ಹೀಗಾಗಿ ನನ್ನ ಹೆಸರನ್ನು ಯಾವುದೇ ಕಾರಣಕ್ಕೂ ಪುಸ್ತಕದಲ್ಲಿ ಬರೆದುಕೊಳ್ಳಬೇಡಿ ಎಂದು ಶ್ರೀರಾಮನನ್ನು ಮನದಲ್ಲೇ ಸ್ಮರಿಸಿದ ಘಟನೆಗಳು ಜರುಗಿದವು.

    ಪುರಸಭೆ ಸದಸ್ಯ ಮಹೇಶ ಬೋಳಶೆಟ್ಟಿ, ಎಸ್.ವೈ. ಪಾಟೀಲ, ಉಮೇಶಗೌಡ ಪಾಟೀಲ, ಮಲ್ಲನಗೌಡ ಕೆಂಚನಗೌಡ್ರ, ಶಶಿಕಲಾ ಪೂಜಾರ, ಬಿ.ಡಿ. ಪಾಟೀಲ, ಸಿದ್ದೇಶ ಹೂಗಾರ, ನಂದೀಶ ಮಠದ, ವಿಶ್ವನಾಥ ದೇಶಪಾಂಡೆ, ಬಸವರಾಜ ಗಡೇಕಾರ, ಬಸವರಾಜ ಪಾಟೀಲ, ಮಣಿಕಂಠ ಬೆಳದಡಿ, ಕಿರಣ ಮುಧೋಳೆ, ಶಿವನಗೌಡ ಚನ್ನಬಸನಗೌಡ್ರ, ಶರಣು ಪಿಡ್ನಾಯ್ಕರ, ಈರಣ್ಣ ಕೋರಿ, ಯೋಗೇಶ ಗುಡಾರದ, ಪುನೀತ ಬೋಳಶೆಟ್ಟಿ, ಮಲ್ಲೇಶ ಸೊಪ್ಪಿನ, ಮೈನುಸಾಬ ಚಿನ್ನಾಪೂರ, ರಿಯಾಜ್ ಕೊಣ್ಣೂರ, ಹುಸೇನಸಾಬ ಗೋಟೂರ, ವೆಂಕಪ್ಪ ಕೋರಿ, ವಿರೇಶ ಜಾಮದಾರ, ಸಂಜು ಕೋರಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts