More

    ಕೇಂದ್ರ ಬಜೆಟ್ 2020| ಆರ್ಥಿಕತೆಯ ಮೂಲ ಬಲಿಷ್ಠವಾಗಿವೆ, ಹಣದುಬ್ಬರವನ್ನೂ ಸಮರ್ಥವಾಗಿ ನಿರ್ವಹಿಸಲಾಗುತ್ತಿದೆ ಎಂದ ವಿತ್ತ ಸಚಿವೆ

    ನವದೆಹಲಿ: ದೇಶದ ಆರ್ಥಿಕತೆ ಮತ್ತು ಅದರ ಮೂಲಗಳು ಕೂಡ ಬಲಿಷ್ಠವಾಗಿವೆ. ಇದೇ ವೇಳೆ ಹಣದುಬ್ಬರವನ್ನೂ ಸಮರ್ಥವಾಗಿ ನಿರ್ವಹಿಸಲಾಗಿದೆ. ಅಲ್ಲದೆ, ಬ್ಯಾಂಕುಗಳು ತಮ್ಮಲ್ಲಿ ತುಂಬಿದ್ದ ಸಾಲಗಳ ಬಾಕಿಯನ್ನು ಸ್ವಚ್ಛಗೊಳಿಸಿವೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2020 ಮಂಡಿಸುತ್ತಿದ್ದ ಅವರು, ಕೇಂದ್ರ ಸರ್ಕಾರ ದೇಶದ ಜನರ ಖರೀದಿ ಸಾಮರ್ಥ್ಯ ಮತ್ತು ಆದಾಯ ಹೆಚ್ಚಿಸುವ ಉದ್ದೇಶದಿಂದಲೇ ಕೆಲಸ ಮಾಡುತ್ತಿದೆ. ಇದಕ್ಕೆ ಬೇಕಾದ ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

    ಆಡಳಿತದಲ್ಲಿ ಭಾರಿ ಬದಲಾವಣೆ ತರಬೇಕೆಂಬ ಕಾರಣಕ್ಕೆ 2014-19ರ ಅವಧಿಯಲ್ಲಿ ಈ ಸರ್ಕಾರ ಹೆಚ್ಚಿನ ಕ್ರಮಗಳನ್ನು ತೆಗೆದುಕೊಂಡಿದೆ. ಇದು ಆಡಳಿತದಲ್ಲಿ ಸಾಕಷ್ಟು ಬದಲಾವಣೆಗೂ ಕಾರಣವಾಗಿದೆ. ಇವುಗಳ ಪೈಕಿ ಜಿಎಸ್​ಟಿ(ಗೂಡ್ಸ್​ ಆ್ಯಂಡ್​ ಸರ್ವೀಸ್​ ಟ್ಯಾಕ್ಸ್​) ಜಾರಿಗೊಳಿಸಿದ್ದು ಐತಿಹಾಸಿಕ ಹೆಜ್ಜೆಯಾಯಿತು. ಇದು ಸ್ಟ್ರಕ್ಚರಲ್ ರಿಫಾರ್ಮ್​ಗೆ ಕಾರಣವಾಗಿದ್ದು, ದೇಶದ ಆರ್ಥಿಕತೆಯಲ್ಲಿ ಈ ವ್ಯವಸ್ಥೆ ಈಗ ಮಿಳಿತವಾಗಿದೆ ಎಂದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts