More

    ಸಂಘಟನಾ ಶಕ್ತಿಯಿಂದ ಬೇಡಿಕೆಗಳ ಈಡೇರಿಕೆ

    ಗೋಣಿಕೊಪ್ಪ: ಸರ್ಕಾರದ ಯೋಜನೆಗಳನ್ನು ಪಡೆಯಲು ಸಂಘಟನೆಯಿಂದ ಮಾತ್ರ ಸಾಧ್ಯ ಎಂದು ಕರ್ನಾಟಕ ಸ್ಟೇಟ್ ಟೈಲರ್ಸ್‌ ಅಸೋಸಿಯೇಷನ್(ಕೆಎಸ್‌ಟಿಎ) ಅಧ್ಯಕ್ಷ ಬಿ.ಎ.ನಾರಾಯಣ ಅಭಿಪ್ರಾಯಪಟ್ಟರು.

    ಕರ್ನಾಟಕ ಸ್ಟೇಟ್ ಟೈಲರ್ಸ್‌ ಅಸೋಸಿಯೇಷನ್ ರಾಜ್ಯ ಸಮಿತಿ ಮತ್ತು ವಿರಾಜಪೇಟೆ ವಲಯ ಸಮಿತಿ ವತಿಯಿಂದ ವಿರಾಜಪೇಟೆ ಪುರಭವನದಲ್ಲಿ ಸೋಮವಾರ ಆಯೋಜಿಸಿದ್ದ ಸರ್ವ ಸದಸ್ಯರ ಸಭೆ ಮತ್ತು ಗುರುತಿನ ಚೀಟಿ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

    ಟೈಲರ್ಸ್‌ಗಳಿಗೆ ಕಾರ್ಮಿಕ ಇಲಾಖೆಯಿಂದ ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ನಮ್ಮಲ್ಲಿ ಕೆಲವರಿಗೆ ಯೋಜನೆಗಳ ಅರಿವು ಇಲ್ಲದಾಗಿದೆ. ವೃತ್ತಿಯಲ್ಲಿ ತೊಡಗಿರುವವರಿಗೆ ಜೀವನ ಭದ್ರತೆ ಇಲ್ಲ. ಈ ನಿಟ್ಟಿನಲ್ಲಿ ಸಂಘವು ರಾಜ್ಯ ಸರ್ಕಾರದ ಮಂದೆ ಐದು ಪ್ರಮುಖ ಬೇಡಿಕೆಗಳನ್ನು ಮುಂದಿಡಲು ತೀರ್ಮಾನಿಸಿದೆ. ಸಂಘಟನೆಯು ಬಲಗೊಳ್ಳಬೇಕಾದರೆ ಹೆಚ್ಚು ಸದಸ್ಯರು ಸಂಘದ ಸದಸ್ಯತ್ವ ಪಡೆಯಬೇಕು ಎಂದರು.

    ಸಂಘವು ಬೆಳ್ಳಿ ಹಬ್ಬದ ಹೊಸ್ತಿಲ್ಲಿದೆ. ಬೆಳ್ಳಿ ಹಬ್ಬ ಆಚರಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾರ್ಮಿಕ ಇಲಾಖೆ ಸಚಿವರು ಆಗಮಿಸಲಿದ್ದಾರೆ. ಸಂಘದ ಸರ್ವ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಘದ ಒಗ್ಗಟ್ಟು ಪ್ರದರ್ಶಿಸಬೇಕು. ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.

    ಕೆಎಸ್‌ಟಿಎ ಕೊಡಗು ಜಿಲ್ಲಾಧ್ಯಕ್ಷ ಶೇಖ್ ಅಹಮ್ಮದ್ ಮಾತನಾಡಿ, ಟೈಲರ್ಸ್‌ಗಳಿಗೆ ಕಾರ್ಮಿಕ ಇಲಾಖೆಯಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಸೌಲಭ್ಯ ಪಡೆಯಲು ನಾವು ಹಿಂದೇಟು ಹಾಕುತ್ತಿದ್ದೇವೆ. ಇದಕ್ಕೆ ಮಾಹಿತಿ ಕೊರತೆ ಕಾರಣ ಎಂದರು.

    ಕೆಎಸ್‌ಟಿಎ ವಿರಾಜಪೇಟೆ ವಲಯ ಸಮಿತಿ ಅಧ್ಯಕ್ಷ ತೊರೇರ ಜಿ.ಪೊನ್ನಕ್ಕಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಮೃತಪಟ್ಟ ವೃತ್ತಿ ಬಾಂಧವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಸ್ಥಾಪಕ ಅಧ್ಯಕ್ಷರಾದ ಸಿ.ಕೆ.ಚಂದ್ರಶೇಕರ್, ದೇಜಪ್ಪ, ಬಾಲನ್ ಮತ್ತು ಶರ್ಲಿ ಅವರನ್ನು ಸನ್ಮಾನಿಸಲಾಯಿತು.

    ಕೆಎಸ್‌ಟಿಎ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ಕುಮಾರ್, ಮಾಜಿ ಜಿಲ್ಲಾಧ್ಯಕ್ಷ ಎನ್.ನಂದೀಶ್, ವಿರಾಜಪೇಟೆ ವಲಯ ಸ್ಥಾಪಕ ಅಧ್ಯಕ್ಷ ಸಿ.ಕೆ.ಚಂದ್ರಶೇಖರ್, ಸೋಮವಾರಪೇಟೆ ಕ್ಷೇತ್ರ ಸಮಿತಿ ಅಧ್ಯಕ್ಷ ಬಿ.ಎನ್.ಮಂಜುನಾಥ್, ಮೂರ್ನಾಡು ವಲಯ ಅಧ್ಯಕ್ಷ ಎ.ಪಿ.ತುಳಸಿ, ಗೊಣಕೊಪ್ಪ ವಲಯ ಅಧ್ಯಕ್ಷ ಹಜಿಬುನ್ನಿಸಾ, ಪೊನ್ನಂಪೇಟೆ ವಲಯ ಅಧ್ಯಕ್ಷ ಎಸ್.ಟಿ.ಗೀರಿಶ್, ಮಡಿಕೇರಿ ವಲಯ ಅಧ್ಯಕ್ಷ ಬಿ.ಜುಲೇಖಾ, ವಿರಾಜಪೇಟೆ ವಲಯ ಉಪಾಧ್ಯಕ್ಷ ಕೆ.ವಿ.ಸುಮೇಶ್, ಖಜಾಂಚಿ ಎಂ.ಎ.ಪ್ರಕಾಶ್, ಸಂಘಟನಾ ಕಾರ್ಯದರ್ಶಿಗಳಾದ ಎನ್.ಎಸ್.ಅಜೀತ್ ಕುಮಾರ್, ಹರಿದಾಸ್, ಸಲಹೆಗಾರರಾದ ವೇಣು, ಅಶೋಕ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts