More

    ವಿದ್ಯಾರ್ಥಿಮಿತ್ರದಿಂದಲೇ ಪರೀಕ್ಷೆಯಲ್ಲಿ ಪ್ರಥಮ

    ಯರಗಟ್ಟಿ: ವಿಜಯವಾಣಿ ಪತ್ರಿಕೆಯ ವಿದ್ಯಾರ್ಥಿಮಿತ್ರ ಸಂಚಿಕೆ ಅಧ್ಯಯನದಿಂದಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬರಲು ಸಾಧ್ಯವಾಯಿತು ಎಂದು ವಿದ್ಯಾರ್ಥಿನಿ ಹೇಳಿದ್ದು ಎಲ್ಲ ಮಕ್ಕಳಿಗೆ ಪ್ರೇರಣೆಯಾಗಬೇಕು ಎಂದು ಕನ್ನಡ ಭಾಷಾ ಶಿಕ್ಷಕ ಆರ್.ಜಿ. ಗಾಣಗೇರ ಹೇಳಿದರು.

    ಇಲ್ಲಿನ ಶ್ರೀ ಬಸವೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗುರುವಾರ ವಿಜಯವಾಣಿ ವಿದ್ಯಾರ್ಥಿಮಿತ್ರ ಸಂಚಿಕೆ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಿಂದ ರಚಿತವಾದ ‘ವಿದ್ಯಾರ್ಥಿಮಿತ್ರ’ದಲ್ಲಿ ನೈತಿಕ ಮೌಲ್ಯ, ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಹೀಗೆ ಬಹಳಷ್ಟು ಮಾಹಿತಿ ವಿದ್ಯಾರ್ಥಿಗಳನ್ನು ಚುರುಕು ಮಾಡುತ್ತದೆ ಎಂದರು.
    ವಿಜ್ಞಾನ ಶಿಕ್ಷಕ ಡಾ. ಕುಮಾರ ದಾಸರ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದೊಂದಿಗೆ ವಿಜಯವಾಣಿ ವಿದ್ಯಾರ್ಥಿಮಿತ್ರ ಸಂಚಿಕೆ ಓದಿ. ಇದು ಎಸ್‌ಎಸ್‌ಎಲ್‌ಸಿ, ಪಿಯುಸಿ ಜತೆಗೆ ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಹಕಾರಿಯಾಗಲಿದೆ ಎಂದರು.

    ಜಿಪಂ ಮಾಜಿ ಸದಸ್ಯ ಅಜಿತಕುಮಾರ ದೇಸಾಯಿ, ಮರಡಿ ಬಸವೇಶ್ವರ ವಿದ್ಯಾಪ್ರಸಾರ ಮಂಡಳಿಯ ಅಧ್ಯಕ್ಷ ರಮೇಶಗೌಡ ದೇವರಡ್ಡಿ, ಉಪಾಧ್ಯಕ್ಷ ಮಂಜುನಾಥ ತಡಸಲೂರ, ಕಾರ್ಯದರ್ಶಿ ಪಿ.ಎಚ್. ಪಾಟೀಲ, ಪೈಗಂಬರ ನದ್ಾ, ರಾಜು ಕತ್ತಿಶೆಟ್ಟಿ, ಉತ್ತಮರಾಮ ಚೌಧರಿ, ಮುಖ್ಯಶಿಕ್ಷಕ ಬಿ.ಎಸ್.ಆಲದಕಟ್ಟಿ, ಸಹಶಿಕ್ಷಕರಾದ ಎನ್.ಎಸ್.ಕಾಂಬಳೆ, ಎಸ್.ಜೆ. ಸತ್ತಿಗೇರಿ, ವಿ.ಆರ್. ಅಂತಾಪುರ, ಎಲ್.ಎಸ್.ಹೊನ್ನಪ್ಪಗೋಳ, ಎಂ.ಎನ್.ಚಾಲಿಹಳ್ಳಿ, ಎಂ.ಸಿ.ಚವಡಪ್ಪನವರ, ಜಿ.ಐ.ಡಮ್ಮಣಗಿ, ಡಿ.ಎಂ.ಪಾಟೀಲ, ವರದಿಗಾರ ಸಿದ್ದು ಪೂಜಾರ, ಶಿಕ್ಷಕ ಎಂ.ಎಸ್. ಗುಗ್ಗರನಟ್ಟಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts