More

    ಮಂಡ್ಯದಿಂದ ಎಚ್​ಡಿಕೆ ಕಣಕ್ಕೆ, ಹಾಸನಕ್ಕೆ ಪ್ರಜ್ವಲ್, ಕೋಲಾರದಲ್ಲಿ ಮಲ್ಲೇಶ್ ಬಾಬುಗೆ ಟಿಕೆಟ್

    ಬೆಂಗಳೂರು: ಲೋಕಸಭೆ ಚುನಾವಣೆಗೆ ಜೆಡಿಎಸ್ ಪಟ್ಟಿಯ ಕುತೂಹಲಕ್ಕೆ ತೆರೆ ಬಿದ್ದಿದೆ. ಪಕ್ಷದ ನಾಯಕರು, ಕಾರ್ಯಕರ್ತರ ಒತ್ತಡಕ್ಕೆ ಮಣಿದ ಮಾಜಿ ಸಿಎಂ ಕುಮಾರಸ್ವಾಮಿ ಮಂಡ್ಯದಲ್ಲಿ ಕಣಕ್ಕಿಳಿಯಲು ಒಪ್ಪಿದರೆ, ಹಾಸನದಿಂದ ಪ್ರಜ್ವಲ್ ರೇವಣ್ಣ, ಕೋಲಾರದಲ್ಲಿ ಮಲ್ಲೇಶ್ ಬಾಬುಗೆ ಟಿಕೆಟ್ ನೀಡುವ ವಿಚಾರವನ್ನು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಘೋಷಿಸಿದರು.

    ಕೋರ್ ಕಮಿಟಿ ನಿರ್ಧಾರ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮನೆಯಲ್ಲಿ ಶಾಸಕ ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಮಾಜಿ ಸಂಸದ, ಮಾಜಿ ಸಚಿವ ಪುಟ್ಟರಾಜು ಹೆಸರು ಕೇಳಿಬಂದಿತ್ತಾದರೂ ಅನಿವಾರ್ಯ ಪರಿಸ್ಥಿತಿಯಲ್ಲಿ ಮಂಡ್ಯದಲ್ಲಿ ಕುಮಾರಸ್ವಾಮಿ ಅವರೇ ಸ್ಪರ್ಧೆ ಮಾಡಬೇಕೆಂಬ ಸಹಮತಕ್ಕೆ ಬರಲಾಯಿತು.

    ಹಾಸನದಲ್ಲಿ ಪ್ರಜ್ವಲ!: ಹಾಸನಕ್ಕೆ ಪ್ರಜ್ವಲ್ ಹೆಸರು ಮೊದಲೇ ಘೋಷಣೆ ಆಗಿತ್ತು. ಅದರೆ ಅಭ್ಯರ್ಥಿ ಬದಲಿಸಬೇಕೆಂಬ ಒತ್ತಡ ಬಂದರೂ ವರಿಷ್ಠರು ಅದಕ್ಕೆ ಸೊಪು್ಪ ಹಾಕಿಲ್ಲ. ಕೋಲಾರದಲ್ಲಿ ಜೆಡಿಎಸ್ ಟಿಕೆಟ್ ಗಿಟ್ಟಿಸಿಕೊಂಡಿರುವ ಮಲ್ಲೇಶ್ ಬಾಬು ಕಳೆದ ಬಾರಿ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ನಿಂದ ಪ್ರಬಲ ಪೈಪೋಟಿ ನೀಡಿದ್ದರು. ಹೀಗಾಗಿಯೇ ಸಮೃದ್ಧಿ ಮಂಜುನಾಥ್, ನಿಸರ್ಗ ನಾರಾಯಣಸ್ವಾಮಿಯನ್ನು ಬಿಟ್ಟು ಮಲ್ಲೇಶ್​ಬಾಬುಗೆ ಟಿಕೆಟ್ ದೊರೆತಿದೆ. ಇನ್ನು ಹಾಲಿ ಸಂಸದ ಮುನಿಸ್ವಾಮಿ ಜತೆ ಕೂಡ ಚರ್ಚೆ ಮಾಡಿದ್ದು, ಒಟ್ಟಾಗಿ ಕೆಲಸ ಮಾಡುವ ನಿರ್ಣಯ ಕೈಗೊಂಡಿರುವುದಾಗಿ ಎಚ್​ಡಿಕೆ ಹೇಳಿದರು.

    ಎಚ್​ಡಿಕೆ ಭರವಸೆಗಳೇನು?

    1. ರಾಮನಗರ ಕಾರ್ಯಕರ್ತರ ಜತೆ ಸುದೀರ್ಘ ಚರ್ಚೆ
    2. ಕಾರ್ಯಕರ್ತರಿಗೆ ಸಮಾಧಾನ ಹೇಳಿದ ಎಚ್​ಡಿಕೆ
    3. ಬಾರಿ ಶಸ್ತ್ರಚಿಕಿತ್ಸೆ ಆಗಿದ್ದರೂ ಬದುಕುಳಿದಿದ್ದೇನೆ
    4. ಪಕ್ಷ ಉಳಿಸಲು ಶ್ರಮ ಹಾಕಿದ್ದೇನೆ, ಹಾಕುತ್ತೇನೆ
    5. ಎಲ್ಲೇ ಇದ್ದರೂ ಅಭಿವೃದ್ಧಿಯನ್ನು ಮರೆಯಲ್ಲ
    6. ರಾಮನಗರ ಜಿಲ್ಲೆ ಅಭಿವೃದ್ಧಿಗೆ ಬದ್ಧನಾಗಿರುವೆ

    ರಾಜಕೀಯಕ್ಕೆ ಎಂಟ್ರಿ ಕೊಟ್ಟ ಖ್ಯಾತ ನಟಿ ಅನುಷ್ಕಾ ಶೆಟ್ಟಿ..! ಈ ಪಕ್ಷದಿಂದ ಎಂಎಲ್​ಎ ಎಲೆಕ್ಷನ್‌ಗೆ ಸ್ಪರ್ಧೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts