More

    ಲಾಕ್‌ಡೌನ್‌ನಿಂದ ಸಕಾಲಕ್ಕೆ ಸಿಗದ ವಾಹನ, ರಸ್ತೆ ಮೇಲೆಯೇ ಹೆರಿಗೆ !

    ಬೆಳಗಾವಿ: ಕರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರವು ಲಾಕ್‌ಡೌನ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ನಿಷೇಧಿಸಿರುವ ಕಾರಣ ಆಸ್ಪತ್ರೆಗೆ ಹೋಗಲು ವಿಳಂಬವಾಗಿರುವುದಕ್ಕೆ ಗರ್ಭಿಣಿಯೊಬ್ಬರು ರಸ್ತೆ ಮೇಲೆಯೇ ಮಗುವಿಗೆ ಜನ್ಮ ನೀಡಿರುವ ಘಟನೆ ಶನಿವಾರ ನಗರದಲ್ಲಿ ನಡೆದಿದೆ.

    ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಡಗಾಂವಿ ನಿವಾಸಿಯಾದ ಗರ್ಭಿಣಿಗೆ ಶನಿವಾರ ಬೆಳಗ್ಗೆ ಹೆರಿಗೆ ನೋವು ಆರಂಭವಾಗಿದ್ದರಿಂದ ಶಹಾಪುರದ ಹಟ್ಟಿಹೋಳಿ ಗಲ್ಲಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ಹೋಗಿದ್ದರು, ಆದರೆ, ಅದು ಚಿಕ್ಕ ಮಕ್ಕಳ ಆಸ್ಪತ್ರೆಯಾಗಿದ್ದರಿಂದ ಹೆರಿಗೆ ಆಸ್ಪತ್ರೆಗೆ ಹೋಗುವಂತೆ ಅಲ್ಲಿನ ವೈದ್ಯರು ಸೂಚಿಸಿದರು.

    ಅಲ್ಲಿಂದ ಬೇರೆ ಆಸ್ಪತ್ರಗೆ ಹೋಗಲು ತಕ್ಷಣ ಯಾವುದೇ ವಾಹನ ಸಿಕ್ಕಿಲ್ಲ. ಬಳಿಕ ಆಟೋ ಹಿಡಿದುಕೊಂಡು ಆಸ್ಪತ್ರೆಗೆ ಹೋಗುತ್ತಿರುವ ಸಂದರ್ಭದಲ್ಲಿ ಮಾರ್ಗಮಧ್ಯೆ ಹೆರಿಗೆ ನೋವು ತೀವ್ರವಾಗಿದ್ದರಿಂದ ಮಾರ್ಗ ಮಧ್ಯೆಯೇ ಆಟೋ ನಿಲ್ಲಿಸಿದ್ದಾರೆ. ಈ ವೇಳೆ ಸುತ್ತಮುತ್ತಲಿನ ಮಹಿಳೆಯರು ಸ್ಥಳಕ್ಕೆ ಬಂದು ಹೆರಿಗೆ ಮಾಡಿಸಿದ್ದಾರೆ. ಇದೀಗ ಖಾಸಗಿ ಆಸ್ಪತ್ರೆಯಲ್ಲಿ ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts