More

    ರೈತರಿಂದ ಮಾತ್ರ ಕಾರ್ಖಾನೆ ಅಭಿವೃದ್ಧಿ ಸಾಧ್ಯ

    ಕಾಗವಾಡ: ರೈತರು ಅಭಿವೃದ್ಧಿ ಹೊಂದಿದಾಗ ಮಾತ್ರ ಸಕ್ಕರೆ ಕಾರ್ಖಾನೆಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಿರಗುಪ್ಪಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ, ಮಾಜಿ ಶಾಸಕ ಕಲ್ಲಪ್ಪಣ್ಣ ಮಗೆಣ್ಣವರ ಹೇಳಿದ್ದಾರೆ. ಪಟ್ಟಣದ ಶಿರಗುಪ್ಪಿ ಸಕ್ಕರೆ ಕಾರ್ಖಾನೆ ಕಾರ್ಯಾಲಯದಲ್ಲಿ ಸೋಮವಾರ ಕಾಗವಾಡ ಭಾಗದ ಕಬ್ಬು ಬೆಳೆಯುವ ರೈತರ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು.

    ರೈತ ಮುಖಂಡ ಸುಭಾಷ ಕಠಾರೆ ಮಾತನಾಡಿ, ಶಿರಗುಪ್ಪಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಕಲ್ಲಪ್ಪಣ್ಣ ಅವರು ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸುವ ಬೆಳೆಗಾರರಿಗೆ ಸರ್ಕಾರ ನಿಗದಿಪಡಿಸಿರುವ ಎಫ್‌ಆರ್‌ಪಿ ದರದಂತೆ ಪ್ರತಿ ಟನ್‌ಗೆ 2,700 ರೂ. ದರ ಘೋಷಣೆ ಜತೆಗೆ 15 ದಿನದ ಒಳಗೆ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಸಂದಾಯ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು. ಬಾಳಗೌಡ ಪಾಟೀಲ, ಅಜಿತ ಕರವ, ಅರುಣ ಜೋಶಿ, ಸುಧೀರ ಹುದ್ದಾರ, ಶ್ರೀರಂಗ ಪಾಟೀಲ, ಸುರೇಂದ್ರ ಕರೋಲೆ, ಲಕ್ಷ್ಮಣ ಸೂರ್ಯವಂಶಿ, ಕೌಸ್ತುಬ ಮಗೆಣ್ಣವರ, ಬಾಳಾಗೌಡ ಅರಗೆ, ವೃಷಬ ಸದಲಗೆ, ಬಾಳು ಕೊಗನೊಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts