More

    ಜಾತ್ರೋತ್ಸವಗಳಿಂದ ಮನಸ್ಸಿಗೆ ಸಂತಸ

    ಚನ್ನಮ್ಮನ ಕಿತ್ತೂರು: ಲೋಕಕಲ್ಯಾಣಕ್ಕಾಗಿ ದೇವಸ್ಥಾನ ನಿರ್ಮಿಸಿ ಜನರಿಗೆ ಅಧ್ಯಾತ್ಮದತ್ತ ದಾರಿ ತೋರಿಸಿಕೊಟ್ಟಿರುವ ಹಿರಿಮೆ ಸುರೇಶ ಜೋರಾಪುರ ದಂಪತಿಗೆ ಸಲ್ಲುತ್ತದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

    ಸಮೀಪದ ಚನ್ನಪುರ ಗಿರಿಯಾಲದಲ್ಲಿ ಇರುವ ಸೂರ್ಯನಾರಾಯಣ ದೇವಸ್ಥಾನದಲ್ಲಿ ಗುರುವಾರ ಏರ್ಪಡಿಸಿದ್ದ ಶಿವನ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಮಾತನಾಡಿದರು. ದುಡ್ಡು ಮತ್ತಷ್ಟು ಬೇಕು ಮಗದಷ್ಟು ಬೇಕು ಎನ್ನುವ ಸಮಾಜದಲ್ಲಿ ಜೋರಾಪುರ ಅವರು ದೇವಸ್ಥಾನ ನಿರ್ಮಿಸಿ ಸಮಾಜಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಜಾತ್ರಾ ಮಹೋತ್ಸವಗಳು ಮನಸ್ಸಿಗೆ ಸಂತಸ ತರುತ್ತವೆ ಎಂದರು. ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು,

    ನಿಚ್ಚಣಕಿ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ನಯಾನಗರದ ಸಿದ್ದಲಿಂಗ ಸ್ವಾಮೀಜಿ, ಗಂದಿಗವಾಡದ ಮೃತ್ಯುಂಜಯ ಸ್ವಾಮೀಜಿ, ಮೃಣಾಲ ಹೆಬ್ಬಾಳ್ಕರ, ಹಿತಾ ಹೆಬ್ಬಾಳ್ಕರ್, ಬಸವರಾಜ ಪರವಣ್ಣವರ, ಸೋಂದಾದ ಮಹಾಬಲೇಶ್ವರ ಜೋಶಿ, ಅರ್ಚಕರಾದ ಗಣೇಶ ಜೋಶಿ, ಬಸವರಾಜ ಸಂಗೊಳ್ಳಿ, ಚಂದ್ರಗೌಡ ಪಾಟೀಲ, ಸುನೀಲ ವಾರಿ, ನರಸಿಂಹ ಗಲಗಲಿ, ಅಶ್ಪಾಕ್ ಹವಾಲ್ದಾರ್ , ವಿಷ್ಣು ಕಲಾಲ, ಬಾಬು ಪರೆಂಡೇಕರ, ಸಂತೋಷ ಕಲಾಲ, ಗ್ರಾಪಂ ಸದಸ್ಯೆ ರೇಣುಕಾ ಜೋರಾಪುರ, ನಳಿನಿ ಕಲಾಲ, ಶೈಲಾ ಕಲಾಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts