More

    ಆಸೆಗಳಿಂದ ಸ್ವಾರ್ಥ ಪ್ರವೃತ್ತಿ ಹೆಚ್ಚಳ

    ಮಾಂಜರಿ: ಆಸೆ-ಆಮಿಷಗಳಿಗೆ ಒಳಗಾಗದೆ ಸರಳವಾಗಿ ಜೀವನ ಸಾಗಿಸಬೇಕು ಎಂದು ನಿಯೋಜಿತ ಯಡೂರ ಗ್ರಾಮದ ವೀರಭದ್ರೇಶ್ವರ-ಕಾಡಸಿದ್ದೇಶ್ವರ ಮಠದ ಉತ್ತರಾಧಿಕಾರಿ ರೇಣುಕ ದೇವರು ಹೇಳಿದರು.

    ಸಮೀಪದ ಸುಕ್ಷೇತ್ರ ಯಡೂರ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶಾಳಿ ಜಾತ್ರಾ ಮಹೋತ್ಸವ, ಮಹಾರಥೋತ್ಸವ ಹಾಗೂ ಬಿಲ್ವಾರ್ಚನೆ ಕಾರ್ಯಕ್ರಮ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಅತಿ ಆಸೆ, ಸಿಟ್ಟು, ಪ್ರೀತಿ ನಿಜವಾದ ಶತ್ರುಗಳು. ಇವು ನಮ್ಮನ್ನು ಸ್ವಾರ್ಥಿಯನ್ನಾಗಿಸಿ ಶಾಂತಿ ಕಸಿದುಕೊಳ್ಳುತ್ತವೆ ಎಂದರು.

    ಸಾನ್ನಿಧ್ಯ ವಹಿಸಿ ಮಾಂಜರಿ ಕಾಡಸಿದ್ದೇಶ್ವರ ಮಠದ ಗುರುಶಾಂತಲಿಂಗ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಗವಂತನನ್ನು ಕಾಣುವ, ವಿದ್ಯೆ ಗ್ರಹಿಸುವ, ಉನ್ನತ ಸ್ಥಾನಕ್ಕೇರುವ ಆಸೆ ಇರಬೇಕು ವಿನಾ ದುರಾಸೆ ಇರಬಾರದು ಎಂದರು. ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರನ್ನು ಮನೆಗೆ ಕರೆಸಿ ಪಾದಪೂಜೆ ಮಾಡಿದ ಭಕ್ತರನ್ನು ಸನ್ಮಾನಿಸಲಾಯಿತು. ಉಪವಿಭಾಗಾಧಿಕಾರಿ ಸುಭಾಷ ಸಂಪಗಾವಿ, ಅಡವಯ್ಯ ಅರಳಿಕಟ್ಟಿಮಠ, ಮನೋಹರ ಫುಠಾಣಿ, ಎಸ್.ಎಂ. ಮಠಪತಿ, ಮಹಾಲಿಂಗ ಭ್ರಿಂಗಿ, ಅಣ್ಣಯ್ಯ ಪೂಜಾರಿ, ಮಲ್ಲಪ್ಪ ಶಿಂಧೂರ, ಮಲ್ಲಯ್ಯ ಜಡೆ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts