More

    ರೈಲ್ವೆ ಇಲಾಖೆ ಖಾಸಗಿಕರಣ ನಿಲ್ಲಿಸಿ

    ಯಾದಗಿರಿ: ಕೇಂದ್ರ ಸರ್ಕಾ ರ ರೈಲ್ವೆ ಇಲಾಖೆ ಖಾಸಗಿಕರಣ ಮಾಡುತ್ತಿರುವುದನ್ನು ಕೂಡಲೇ ತಡೆಯಬೇಕು ಎಂದು ಆಗ್ರಹಿಸಿ ಎಐಯುಟಿಯುಸಿ ಸಂಘಟನೆಯಿಂದ ಶುಕ್ರವಾರ ಇಲ್ಲಿನ ರೈಲ್ವೆ ನಿಲ್ದಾಣದ ವ್ಯವಸ್ಥಾಪಕರ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

    ಜಿಲ್ಲಾಧ್ಯಕ್ಷೆ ಡಿ.ಉಮಾದೇವಿ ಮಾತನಾಡಿ, ರೈಲ್ವೆ ಇಲಾಖೆಯು ಭಾರತದಲ್ಲಿ ಅತಿದೊಡ್ಡ ಸಾರ್ವಜನಿಕ ಸಂಸ್ಥೆಯಾಗಿದ್ದು, ಸಾರ್ವಜನಿಕರ ಹಣದಿಂದ ಸ್ಥಾಪಿಸಲಾದ ಈ ಇಲಾಖೆಯು ರಾಷ್ಟ್ರೀಯ ಆಸ್ತಿಯಾಗಿದೆ. ಈ ಸಾರ್ವಜನಿಕ ಸಂಪತ್ತನ್ನು ಖಾಸಗಿ ಬಂಡವಾಳಗಾರರಿಗೆ ಹಸ್ತಾಂತರಿಸಲು ಯಾವುದೇ ರಾಜಕೀಯ ಪಕ್ಷಕ್ಕೆ, ಆಳುವ ಸಕರ್ಾರಕ್ಕೆ ಅಧಿಕಾರವಿಲ್ಲ. ರೈಲ್ವೆ ಖಾಸಗಿಕರಣದ ಪರಿಣಾಮವಾಗಿ ಟಿಕೆಟ್ ದರಗಳು ಗಣನೀಯವಾಗಿ ಹೆಚ್ಚಿಸಿ ಬಹುಸಂಖ್ಯಾತ ಜನಸಾಮಾನ್ಯರಿಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ ಎಂದರು.

    ರೈಲ್ವೆ ಇಲಾಖೆಯನ್ನು ಕಟ್ಟಿ ಬೆಳೆಸಲು ಲಕ್ಷಾಂತರ ಉದ್ಯೊಗಿಗಳ ಶ್ರಮ ಹಾಗೂ ಇದಕ್ಕಾಗಿ ಕೋಟ್ಯಾಂತರ ಜನರ ಆಸ್ತಿ ನೀಡಿದ ಸಾರ್ವಜನಿಕರ ಪಾಲು ಇದೆ. ಈಗ ಲಾಭಗಳಿಸುವ ಒಂದೇ ಉದ್ದೇಶದಿಂದ, ಖಾಸಗಿಯವರಿಗೆ ಇಲಾಖೆಯನ್ನು ಕೊಡಲಾಗುತ್ತಿದೆ. ಪ್ರಧಾನಿಯವರು ರೈಲ್ವೆ ಇಲಾಖೆಯನ್ನು ಖಾಸಗಿಯವರಿಗೆ ನಿಡುವುದಿಲ್ಲ ಎಂದು ಸಂಸತ್ತಿನಲ್ಲಿ ಮೂರು ಬಾರಿ ಹೇಳಿದ್ದಾರೆ. ಇತ್ತೀಚೆಗೆ ಸ್ವಾವಲಂಬನೆ ಮಂತ್ರ ಪಠಿಸುತ್ತಾ, ಅತ್ಯಂತ ಲಾಭದಾಯಕವಾದ ಈ ಇಲಾಖೆಯನ್ನು ಖಾಸಗಿ ಲಾಭಕೋರ, ಬಂಡವಾಳಗಾರರಿಗೆ ಧಾರೆಯೆರೆಯಲು ಯೋಜನೆ ರೂಪಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಯಾವುದೇ ವಿಧದಲ್ಲೂ ಭಾರತೀಯರೈಲ್ವೇ ಖಾಸಗಿಕರಣಗೊಳ್ಳಲು ಬಿಡಬಾರದು. 109 ರೂಟ್ಗಳಲ್ಲಿ 151 ಖಾಸಗಿ ರೈಲುಗಳು ಓಡಿಸುವ ಯೋಜನೆಯನ್ನು ಕೈಬಿಡಬೇಕು. ರೈಲ್ವೆ ಜಮೀನು, ಕಾಲೋನಿಗಳು, ಆಸ್ಪತ್ರೆಗಳು, ವರ್ಕಶಾಪ್​ ಮತ್ತು ಇತರೆ ರೈಲ್ವೆ ಸಂಸ್ಥೆಗಳನ್ನು ಮುಚ್ಚುವುದು ಅಥವಾ ಮಾರಾಟ ಮಾಡುವುದನ್ನು ತಡೆಗಟ್ಟಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಕಾರ್ಯದರ್ಶಿ ಬಿ.ಎನ್.ರಾಮಲಿಂಗಪ್ಪ, ಸದಸ್ಯರಾದ ಶರಣಪ್ಪ, ಸಿದ್ದಪ್ಪ, ಲಲಿತಾ, ಗಂಗಮ್ಮ, ರಾಜೇಶ್ವರಿ, ಸಿದ್ದಮ್ಮ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts