More

    21ರಿಂದ ಸ್ವಾಭಿಮಾನಿ ಕಲ್ಯಾಣ ಪರ್ವ ಉತ್ಸವ

    ಗೋಕಾಕ: ಬಸವಣ್ಣನವರ ಕಾರ್ಯಕ್ಷೇತ್ರ ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಅ.21 ಮತ್ತು 22ರಂದು ಸ್ವಾಭಿಮಾನಿ ಕಲ್ಯಾಣ ಪರ್ವ ಉತ್ಸವ ಆಯೋಜಿಸಲಾಗಿದೆ ಎಂದು ಸ್ವಾಭಿಮಾನಿ ಕಲ್ಯಾಣ ಪರ್ವ ಉತ್ಸವ ಸಮಿತಿ ಅಧ್ಯಕ್ಷರಾದ ಮನಸೂರಿನ ಡಾ.ಚನ್ನಬಸವಾನಂದ ಸ್ವಾಮೀಜಿ ಹೇಳಿದರು.
    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಗುರು ಬಸವಣ್ಣರವರು ಅನುಭವ ಮಂಟಪ ಸ್ಥಾಪಿಸಿದರು.

    ಯಾವುದೇ ಜಾತಿ, ಮತ, ಪಂಥ ಹಾಗೂ ಪ್ರದೇಶದ ಭೇದವಿಲ್ಲದೆ ಎಲ್ಲರಿಗೂ ಅವಕಾಶ ನೀಡಿದರು. ಪೂಜ್ಯರಾದ ಡಾ.ಮಾತೆ ಮಹಾದೇವಿ ಅವರ ನೇತೃತ್ವದಲ್ಲಿ 2002ರಲ್ಲಿ ಮತ್ತೆ ಬಸವ ಕಲ್ಯಾಣದಲ್ಲಿ ಕಲ್ಯಾಣ ಪರ್ವ ಉತ್ಸವ ಪ್ರಾರಂಭವಾಯಿತು. ಮೊದಲಿನ ವೈಭವದಂತೆ ಮಾತೆ ಮಹಾದೇವಿ ಅವರ ಸಂಕಲ್ಪ ಪೂರೈಸಲು ನಾವು ಅ.21 ಹಾಗೂ 22 ರಂದು ಸ್ವಾಭಿಮಾನಿ ಕಲ್ಯಾಣ ಪರ್ವ ಆಯೋಜಿಸಿದ್ದೇವೆ. ಬಸವ ಕಲ್ಯಾಣದ ಸಸ್ತಾಪುರ್ ಬಂಗ್ಲೆ ಹತ್ತಿರದ ಬೇಗ್ ಸಭಾ ಮಂಟಪದ ಆವರಣದಲ್ಲಿ 21ರಂದು ಬೆಳಗ್ಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಸ್ವಾಭಿಮಾನಿ ಕಲ್ಯಾಣ ಪರ್ವ ಉತ್ಸವದ ಸ್ವಾಗತ ಸಮಿತಿ ಅಧ್ಯಕ್ಷರನನ್ನಾಗಿ ಬೆಳಗಾವಿಯ ಶರಣ ಅಶೋಕ ಬೆಂಡಿಗೇರಿ ಮತ್ತು ಪ್ರಧಾನ ಕಾರ್ಯದರ್ಶಿಯನ್ನಾಗಿ ಬೀದರಿನ ಡಾ.ಮಹೇಶ ಬಿರಾದರ, ಹೈದರಾಬದ್‌ನ ವೆನ್ನ ಈಶ್ವರಪ್ಪ ಅವರನ್ನು ದಾಸೋಹ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಬೀದರ್ ಜಿಲ್ಲೆಯ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ, ಹಲವಾರು ಶಾಸಕರು, ಸಚಿವರು, ಸಮಾಜದ ಗಣ್ಯರು, ಧಾರ್ಮಿಕ ಮುಖಂಡರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದರು.

    ಕಾರ್ಯಕ್ರಮದಲ್ಲಿ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ, ಮಹಿಳಾ ಗೋಷ್ಠಿ, ಭಾವೈಕತಾ ಗೋಷ್ಠಿ, ಇಷ್ಟಲಿಂಗ ಪೂಜೆ ಮಹತ್ವ, ಮುಂತಾದ ವಿಷಯಗಳ ಕುರಿತು ಗೋಷ್ಠಿಗಳು ಜರುಗಲಿವೆ. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ದೆಹಲಿ ಮುಂತಾದ ರಾಜ್ಯಗಳಿಂದ ಸಹಸ್ರಾರು ಜನರು ಭಾಗವಹಿಸಲಿದ್ದಾರೆ. ಯಾವುದೇ ಜಾತಿ ಭೇದವಿಲ್ಲದೆ ಬಸವಭಕ್ತರು ಉತ್ಸವದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

    ಡಾ.ಮಹಾಂತೇಶ ಕಡಾಡಿ, ಡಾ.ರಮೇಶ ಪಟ್ಟಗುಂಡಿ, ಸ್ವಾಗತ ಸಮಿತಿ ಅಧ್ಯಕ್ಷ ಅಶೋಕ ಬೆಂಡಿಗೇರಿ, ಬಸವರಾಜ ಹುಳ್ಳೇದ, ರವಿ ಉಪ್ಪಿನ, ಮಹಾಂತೇಶ ವಾಲಿ, ಸಂಜಯ ಪಾಟೀಲ ಇತರರರು ಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts