More

    ಹೊಸೂರಿನಿಂದ ಬಾಂಗ್ಲಾದೇಶಕ್ಕೆ ಹೊರಟ ಸರಕು ಸಾಗಣೆ ರೈಲು

    ಬೆಂಗಳೂರು: ಇದೇ ಮೊದಲ ಬಾರಿಗೆ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ಹೊಸೂರು ರೈಲು ನಿಲ್ದಾಣದಿಂದ ಬಾಂಗ್ಲಾದೇಶದ ಬೆನಪೊಲೆ ರೈಲು ನಿಲ್ದಾಣಕ್ಕೆ ವಾಣಿಜ್ಯ ಸರಕು ಸಾಗಣೆ ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿದೆ.
    ಹೊಸೂರು ರೈಲ್ವೆ ನಿಲ್ದಾಣದಲ್ಲಿ 25 ವ್ಯಾಗನ್​ನಲ್ಲಿ ಅಶೋಕ ಲೇಲ್ಯಾಂಡ್​ ಕಂಪನಿಗೆ ಸೇರಿದ 100 ಲು ವಾಣಿಜ್ಯ ವಾಹನಗಳನ್ನು ಹೊತ್ತ ಸರಕು ಸಾಗಣೆ ರೈಲಿಗೆ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್​ ಕುಮಾರ್​ ವರ್ಮಾ ಮಂಗಳವಾರ ಹಸಿರು ನಿಶಾನೆ ತೋರಿದರು. ನೂತನ ರೈಲು ಹೊಸೂರು ರೈಲು ನಿಲ್ದಾಣದಿಂದ 2,121 ಕಿ.ಮೀ. ದೂರದಲ್ಲಿನ ಬಾಂಗ್ಲಾದೇಶದ ಬೆನಪೊಲೆ ರೈಲು ನಿಲ್ದಾಣಕ್ಕೆ ಸರಕುಗಳನ್ನು ಹೊತ್ತು ರೈಲು ತೆರಳಲಿದೆ.
    ನೈಋತ್ಯ ರೈಲ್ವೆ ಈ ಹಿಂದೆ ಪೆನಗೊಂಡ ರೈಲು ನಿಲ್ದಾಣದಿಂದ ನೇಪಾಳದ ನೌಟ್ನವಾಗೆ ಎರಡು ಸರಕು ಸಾಗಣೆ ರೈಲು ಕಾರ್ಯಾಚರಣೆ ಮಾಡಿತ್ತು. ಪ್ರಸಕ್ತ ಸಾಲಿನಲ್ಲಿ ದೇಶ ಹಾಗೂ ಹೊರ ದೇಶದ ವಿವಿಧ ಸ್ಥಳಗಳಿಗೆ 128 ಸರಕು ಸಾಗಣೆ ರೈಲುಗಳನ್ನು ಕಾರ್ಯಾಚರಣೆ ಮಾಡಲಾಗಿದೆ.
    ಆಟೋಮೊಬೈಲ್​ ಸರಕುಗಳ ಸಾಗಣೆಗೆ ರಸ್ತೆ ಸಾರಿಗೆಗೆ ಹೋಲಿಸಿದರೆ ರೈಲು ಸಾರಿಗೆ ಸುರಕ್ಷಿತ ಹಾಗೂ ಸುಲಭದ್ದಾಗಿದೆ. ಅಲ್ಲದೆ, ನಿಗದಿತ ಸಮಯಕ್ಕೆ ಸರಕು ತಲುಪುವ ಬಗ್ಗೆ ನಿಗಾವಹಿಸಲು ಸಾಧ್ಯವಾಗುತ್ತದೆ ಎಂದು ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್​ ಕುಮಾರ್​ ವರ್ಮಾ ಹೇಳಿದರು.
    ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ.ಎ.ಎನ್​.ಕೃಷ್ಣಾ ರೆಡ್ಡಿ, ಹಿರಿಯ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕ ಅಖಿಲ್​ ಎಂ.ಶಾಸಿ, ಅಶೋಕ ಲೇಲ್ಯಾಂಡ್​ ಉಪಾಧ್ಯಕ್ಷ ರಾಕೇಶ್​ ಮಿತ್ತಲ್​ ಸೇರಿ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts