More

    ಈ ದೇಶದಲ್ಲಿ ರೈಲು ಪ್ರಯಾಣ ಸಂಪೂರ್ಣ ಉಚಿತ: ಸರ್ಕಾರ ನೀಡಿದ ಕಾರಣವಿದು

    ಸ್ಪೇನ್​: ಸಾರ್ವಜನಿಕರಿಗಾಗಿ ಇದೇ ಮೊದಲ ಬಾರಿ ಈ ದೇಶ ದೊಡ್ಡ ಮಟ್ಟದ ನಿರ್ಧಾರವನ್ನು ಕೈಗೊಂಡಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ತೆಗೆದುಕೊಂಡ ಈ ನಿರ್ಧಾರಕ್ಕೆ ಕಾರಣವನ್ನೂ ತಿಳಿಸಿದೆ.

    ಅದುವೇ ಸ್ಪೇನ್​ ದೇಶ ಸಾರ್ವಜನಿಕರಿಗೆ ರೈಲು ಪ್ರಯಾಣ ಸಂಪೂರ್ಣ ಉಚಿತ ಎಂದು ಘೋಷಣೆ ಮಾಡಿದೆ. ದೇಶದ ಯಾವುದೇ ಭಾಗದಲ್ಲಿ ಎಷ್ಟು ದೂರ ಪ್ರಯಾಣ ಮಾಡಿದರೂ ಸಂಪೂರ್ಣ ಉಚಿತ. ಇದಕ್ಕೆ ಟಿಕೆಟ್​ ತೆಗೆದುಕೊಳ್ಳುವ ಅಗತ್ಯವಿಲ್ಲ. ಟಿಕೆಟ್​ ಇಲ್ಲದೇಯೇ ನೀವು ಪ್ರಯಾಣಿಸಬಹುದು ಎಂದು ಹೇಳಿದೆ.

    ಆದರೆ ಈ ಘೋಷಣೆ ಜಾರಿಯಾಗುವುದು ಮಾತ್ರ ಸ್ವಲ್ಪ ತಡವಾಗಿ. ಅಂದರೆ ಸೆಪ್ಟಂಬರ್​ ತಿಂಗಳಿನಿಂದ ಇಲ್ಲಿನ ಸಾರ್ವಜನಿಕರು ಇದರ ಲಾಭ ಪಡೆಯಲಿದ್ದಾರೆ. ಇದು ಸೀಮಿತ ಅವಧಿಗೆ ಮಾತ್ರ ಇದ್ದು, ಇದೇ ವರ್ಷ ಅಂದರೆ 2022ರ ಡಿಸೆಂಬರ್​ ಅಂತ್ಯದವರೆಗೆ ಮಾತ್ರ ಅನ್ವಯಿಸಲಿದೆ.

    ಇದಕ್ಕೆ ಕಾರಣವೂ ನೀಡಿರುವ ಸರ್ಕಾರ ಸಾರ್ವಜನಿಕರ ಹಿತದೃಷ್ಟಿಯಿಂದ, ಸಾರ್ವಜನಿಕರ ಸಾರಿಗೆ ವೆಚ್ಚವನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ. ಇನ್ನು ಈ ರೀತಿಯ ನಿರ್ಧಾರ ಕೈಗೊಂಡಿರುವ ಯುರೋಪ್​ ರಾಷ್ಟ್ರಗಳಲ್ಲಿ ಸ್ಪೇನ್​ ಮೊದಲೇನಲ್ಲ. ಸ್ಪೇನ್​ ಹೊರತಾಗಿ ಜರ್ಮನಿ ಕೂಡ ಆಗ್ಗಾಗ್ಗೆ ಸಾರ್ವಜನಿಕರಿಗೆ ಈ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಈ ಸೌಲಭ್ಯ ಪಡೆಯಲು ಈ ದೇಶದ ಪ್ರಜೆಯೇ ಆಗಿರಬೇಕು. ಇವರಿಗೆ ನೀಡಲಾಗುವ ಉಚಿತ ಟಿಕೆಟನ್ನು ತೋರಿಸಿ ಎಲ್ಲೆಂದರಲ್ಲಿ ಪ್ರಯಾಣಿಸಬಹುದಾಗಿದೆ. (ಏಜೆನ್ಸೀಸ್​)

    ವಿಶ್ವದ ಶ್ರೇಷ್ಠ ಸ್ಥಳಗಳ ಪೈಕಿ ಭಾರತದ ಈ ಎರಡು ರಾಜ್ಯಗಳ ನಗರಗಳಿಗೂ ಸ್ಥಾನ! ಇಲ್ಲಿದೆ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts