More

    ತಿರುಪತಿಯಲ್ಲಿ ಡಿ.23ರಿಂದ ವೈಕುಂಠ ದ್ವಾರ ದರ್ಶನ: ಟೋಕನ್ ಉಚಿತ, ಪಡೆಯುವುದು ಕಡ್ಡಾಯ- ವಿವರ ಇಲ್ಲಿದೆ…

    ತಿರುಪತಿ: ತಿರುಮಲೆಯ ವೆಂಕಟೇಶ್ವರ ದೇವಸ್ಥಾನದಲ್ಲಿ ಡಿ.23ರಿಂದ ಜ.1ರವರೆಗೆ ವೈಕುಂಠ(ಉತ್ತರ) ದ್ವಾರ ದರ್ಶನಕ್ಕೆ ಸಂಬಂಧಿಸಿದಂತೆ ಡಿ.22ರ ಮಧ್ಯಾಹ್ನ 2ಗಂಟೆಯಿಂದ ತಿರುಪತಿಯ ಒಂಬತ್ತು ವಿವಿಧ ಪಾಯಿಂಟ್‌ಗಳಲ್ಲಿ 90 ಕೌಂಟರ್‌ಗಳಲ್ಲಿ ಸುಮಾರು 4,23,500 ಉಚಿತ ಸರ್ವದರ್ಶನ ಟೈಂಸ್ಲಾಟ್​ ಟೋಕನ್‌ಗಳನ್ನು ನೀಡಲಾಗುತ್ತದೆ ಎಂದು ಟಿಟಿಡಿ ಜೆಇಒ ಸದಾ ಭಾರ್ಗವಿ ತಿಳಿಸಿದ್ದಾರೆ.

    ಇದನ್ನೂ ಓದಿ: ಅಯೋಧ್ಯೆ ರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾ ಪೂಜೆಯನ್ನು ಯಾರು ಮಾಡುತ್ತಾರೆ?
    ಕೌಂಟರ್​ಗಳನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು. ವೈಕುಂಠ ಏಕಾದಶಿಯಂದು ಡಿಸೆಂಬರ್ 23 ರಂದು ಮಧ್ಯರಾತ್ರಿ 1.45 ರಿಂದ ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ ವೈಕುಂಠ ದ್ವಾರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಮಂಗಳಕರ ದಿನದಂದು ಕಡ್ಡಾಯ ಆಚರಣೆಗಳು ಮುಗಿದ ನಂತರ ಸಾಮಾನ್ಯ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಅವರು ವಿವರಿಸಿದರು.

    ದರ್ಶನದ ದಿನಾಂಕ ಮತ್ತು ಸಮಯವನ್ನು ಹೊಂದಿರುವ ಟೋಕನ್‌ಗಳನ್ನು ಮಧ್ಯಾಹ್ನ 2 ರಿಂದ ಏಕಕಾಲದಲ್ಲಿ ನೀಡಲಾಗುವುದು. ಡಿ.22 ರಂದು ಟಿಟಿಡಿಯ ವಿಷ್ಣು ನಿವಾಸ, ಶ್ರೀನಿವಾಸಮ್, ಗೋವಿಂದರಾಜ ಚೌಲ್ಟ್ರಿಸ್, ಭೂದೇವಿ ಕಾಂಪ್ಲೆಕ್ಸ್, ರಾಮಚಂದ್ರ ಪುಷ್ಕರಿಣಿ, ಇಂದಿರಾ ಮೈದಾನ, ಜೀವ ಕೋನ ಹೈಸ್ಕೂಲ್, ಎಂಆರ್ ಪಲ್ಲಿ ZP ಹೈಸ್ಕೂಲ್ ಮತ್ತು ಬೈರಾಗಿಪಟ್ಟೇಡಾದ ರಾಮ ನಾಯ್ಡು ಶಾಲೆಯಲ್ಲಿ ಲಭ್ಯವಿರುವ ಟೋಕನ್ ಗಳು ಖಾಲಿಯಾಗುವವರೆಗೆ ವಿತರಿಸಲಾಗುವುದು ಎಂದು ತಿಳಿಸಿದರು.

    ದರ್ಶನ ಟಿಕೆಟ್ ಅಥವಾ ಟೋಕನ್ ಹೊಂದಿರುವ ಭಕ್ತರು 24 ಗಂಟೆಗಳ ಮುಂಚಿತವಾಗಿ ತಿರುಮಲೆಗೆ ಸೇರಿಕೊಳ್ಳಬೇಕಾಗುತ್ತದೆ. ತಿರುಮಲೆಯಲ್ಲಿ ಜನದಟ್ಟಣೆಯಾಗುವುದನ್ನು ತಪ್ಪಿಸಲು, ಭಕ್ತರು ತಿರುಪತಿಯಲ್ಲಿ ವಸತಿಗಾಗಿ ಆಯ್ಕೆ ಮಾಡಿಕೊಳ್ಳಬಹುದು. ತಮ್ಮ ಟೋಕನ್‌ಗಳಲ್ಲಿ ನಿರ್ದಿಷ್ಟಪಡಿಸಿದ ಸಮಯದಲ್ಲಿ ತಿರುಮಲೆ ತಲುಪಬಹುದು. ದರ್ಶನ ಟೋಕನ್ ಇಲ್ಲದ ಭಕ್ತರು ಸಹ ತಿರುಮಲೆಗೆ ಭೇಟಿ ನೀಡಬಹುದು, ಆದರೆ, ಅವರಿಗೆ ದರ್ಶನಕ್ಕೆ ಅವಕಾಶ ನೀಡುವುದಿಲ್ಲ. ಇತರ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಬಹುದು ಎಂದು ವಿವರಿಸಿದರು.

    ಇನ್ನು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ತಿರುಮಲ ತಿರುಪತಿ ದೇವಸ್ಥಾನಗಳ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮಾ ರೆಡ್ಡಿ ವಿವಿಧ ವೈಷ್ಣವ ದೇವಾಲಯಗಳಲ್ಲಿ ಆಚರಿಸಿದಂತೆ ಉತ್ತರ ದ್ವಾರವನ್ನು ವೆಂಕಟೇಶ್ವರ ದೇವಾಲಯದಲ್ಲಿ 10 ದಿನಗಳ ಕಾಲ ತೆರೆದಿಡಲಾಗುವುದು. ಜನವರಿ 1 ಮಧ್ಯರಾತ್ರಿ ಮುಚ್ಚಲಾಗುವುದು ಎಂದು ಹೇಳಿದರು.

    ‘ಹೊಸ ತಂತ್ರಜ್ಞಾನದ ಬಗ್ಗೆ ಇರಲಿ ಎಚ್ಚರ’! ಡೀಪ್‌ಫೇಕ್ ಕುರಿತಂತೆ ಪ್ರಧಾನಿ ಹೇಳಿದ್ದಿಷ್ಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts