ಉಮದಿ: ವೈಕುಂಠ ಅಥವಾ ಪುತ್ರದಾ ಏಕಾದಶಿ ನಿಮಿತ್ತ ಭೂವೈಕುಂಠ ಎಂದ ವೈಷ್ಣವರ ನಂಬಿಕೆ ಸ್ಥಾನವಾದ ಪಂಢರಪುರದಲ್ಲಿ ಶ್ರೀ ವಿಠ್ಠಲ ರುಕ್ಮಿಣಿ ದೇವರಿಗೆ ವಿಶೇಷವಾದ ಪೋಷಾಕು ಹಾಗೂ ಪಾರಂಪರಿಕ ಆಭರಣಗಳಿಂದ ಅಲಂಕರಿಸಲಾಗಿತ್ತು.
ವೈಕುಂಠ ಏಕಾದಶಿ ನಿಮಿತ್ತ ಪಂಢರಿನಗರಕ್ಕೆ 40 ಸಾವಿರಕ್ಕೂ ಅಧಿಕ ವೈಷ್ಣವ ಭಕ್ತರು ಆಗಮಿಸಿ ಶ್ರೀ ವಿಠ್ಠಲ ರುಕ್ಮಿಣಿ ದೇವರ ದರ್ಶನ ಪಡೆದಿದ್ದಾರೆ. ಪದ್ಮ ಪುರಾಣದ ವರ್ಣನೆಯ ಪ್ರಕಾರ ಒಂದು ಅಂದರೆ ವೈಕುಂಠ ಏಕಾದಶಿಯಂದು ಮುರಾನ್ ಎಂಬ ರಾಕ್ಷಸನನ್ನು ಶ್ರೀವಿಷ್ಣು ವಧೆ ಮಾಡಿ ಜಗದ ಕಂಟಕ ದೂರ ಮಾಡಿದನು. ಶ್ರೀ ವಿಷ್ಣುವಿನ ಹೆದರಿಕೆಯಾಗಿ ಆತನು ಅಕ್ಕಿಯಲ್ಲಿ ಅಡಗಿಕೊಂಡನು. ಹೀಗಾಗಿ ಅಂದು ಅಕ್ಕಿಯಿಂದ ಮಾಡಿದ ಪದಾರ್ಥ ನಿಷೇಧಿಸಲಾಗಿದೆ.