More

    ಶುಲ್ಕ ರಹಿತ ಆದೇಶ ಜಾರಿಗೊಳಿಸಲು ಲಿಂಗಸುಗೂರು ಎಸಿಗೆ ಎಪಿಎಂಸಿ ವರ್ತಕರ ಮನವಿ

    ಲಿಂಗಸುಗೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಶುಲ್ಕ ಮಾರುಕಟ್ಟೆ ಏಕರೂಪವಾಗಿ ಅನ್ವಯಿಸುವಂತೆ ಒತ್ತಾಯಿಸಿ ಎಪಿಎಂಸಿ ವರ್ತಕರ ಸಂಘದ ನೇತೃತ್ವದಲ್ಲಿ ವರ್ತಕರು ಎಸಿ ರಾಜಶೇಖರ ಡಂಬಳರಿಗೆ ಗುರುವಾರ ಮನವಿ ಸಲ್ಲಿಸಿದರು.

    ಸರ್ಕಾರ ಜು.9 ರಂದು ಜರುಗಿದ ಸಂಪುಟ ಸಭೆಯಲ್ಲಿ ಮಾರುಕಟ್ಟೆ ಶುಲ್ಕ ಶೇ.1 ರೂ.ಗೆ ಆದೇಶ ಹೊರಡಿಸಿರುವುದು ವರ್ತಕರಿಗೆ ತೊಂದರೆಯಾಗಿದೆ. ಎಪಿಎಂಸಿ ಪ್ರಾಂಗಣದ ಹೊರಗಡೆ ಕೃಷಿ ಉತ್ಪನ್ನ ವ್ಯವಹಾರ ಮಾಡುವವರಿಗೆ ಮಾರುಕಟ್ಟೆ ಶುಲ್ಕ ಇರುವುದಿಲ್ಲ ಎನ್ನುವ ಆದೇಶ ನಿರಾಶೆ ಮೂಡಿಸಿದೆ. ಈ ತಾರತಮ್ಯದಿಂದ ಕೃಷಿ ಮಾರುಕಟ್ಟೆ ಹೊರಗಡೆಯ ವರ್ತಕರ ಜತೆ ಪೈಪೋಟಿ ನಡೆಸಲಾಗದೆ ಆರ್ಥಿಕ ದುಃಸ್ಥಿತಿ ಎದುರಿಸುವ ಸಂದರ್ಭ ಬರಬಹುದಾಗಿದೆ.

    ಕಾನೂನು ಅಥವಾ ನಿಯಮಗಳು ಒಂದೇ ವಿಧದಲ್ಲಿ ಇರಬೇಕೆನ್ನುವುದು ವರ್ತಕರ ಅಭಿಪ್ರಾಯವಾಗಿದೆ ಮತ್ತು ಒಂದು ದೇಶ ಒಂದು ತೆರಿಗೆಯಲ್ಲಿ ಅಂತರ್ಗತವಾಗಲಿ. ಮಾರುಕಟ್ಟೆ ಶುಲ್ಕವು ವ್ಯಾಪಾರ ವಹಿವಾಟಿಗೆ ಇನ್ನೂ ಸುಧಾರಿಸಿ ವರ್ತಕರ ಹಾಗೂ ಕೃಷಿಕರ ಬದುಕನ್ನು ಉಜ್ವಲವಾಗಲು ಗೆಜೆಟ್‌ನಲ್ಲಿ ಮಾರುಕಟ್ಟೆ ಶುಲ್ಕ ರಹಿತ ಆದೇಶ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

    ಎಪಿಎಂಸಿ ವರ್ತಕರಾದ ಶಂಕರಗೌಡ ಅಮರಾವತಿ, ಮಹಾಂತೇಶ ನರಕಲದಿನ್ನಿ, ಬಸವರಾಜಪ್ಪ ಮಾಟೂರು, ಶ್ರೀನಿವಾಸ ಕಂಪ್ಲಿ, ಸೂಗಪ್ಪ ಗಲಗ, ಶಂಭುಲಿಂಗಪ್ಪ ಫೂಲಬಾವಿ, ಅನೀಫ್ ಸಾಬ್, ಮಲ್ಲಿಕಾರ್ಜುನ, ಶಿವಪ್ಪ ಸಕ್ರಿ ಸೇರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts