More

    ಭೌತಿಕ ಸಂಪತ್ತಿಗಿಂತ, ಮನಸ್ಸಿನಿಂದ ಸಿರಿವಂತರಾಗಿ

    ಆಳಂದ: ಇಂದಿನ ಆಧುನಿಕ ಜಗತ್ತಿನಲ್ಲಿ ಭೌತಿಕ ಸಂಪತ್ತು ಗಳಿಸುವುದಕ್ಕಿಂತ, ಮನಸ್ಸಿನಿಂದ ಸಿರಿವಂತರಾಗುವುದು ಅಗತ್ಯವಾಗಿದೆ. ಇನ್ನೊಬ್ಬರಿಗೆ ಮಾದರಿಯಾಗಿ ಬದುಕು ನಡೆಸಿ, ಅಂದಾಗಲೇ ಸಮಾಜ ಪರಿವರ್ತನೆ ಹೊಂದಲು ಸಾಧ್ಯ ಎಂದು ಹಾವೇರಿ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ನುಡಿದರು.

    ಮಾದನಹಿಪ್ಪರಗಾದ ಶಿವಲಿಂಗೇಶ್ವರ ವಿರಕ್ತ ಮಠದಲ್ಲಿ ಶ್ರೀ ಶಾಂತಲಿಂಗ ಹಾಗೂ ಶ್ರೀ ಶಿವಲಿಂಗ ಸ್ವಾಮಿಗಳ ಪುಣ್ಯಸ್ಮರಣೆ ನಿಮಿತ್ತ ಬುಧವಾರ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಉಳ್ಳವರು ಅದ್ದೂರಿಯಾಗಿ ಮದುವೆಯಾಗಿ ಸುಖವಾಗಿ ತಿರುಗಾಡಿದರೆ, ಬಡವರು ಸಾಲ ಮಾಡಿ ವಿವಾಹ ಕಾರ್ಯಕ್ರಮ ನೆರವೇರಿಸಿ ಅದನ್ನು ತೀರಿಸಲು ಜೀವನಪೂರ್ತಿ ದುಡಿಯುವುದನ್ನು ಕಂಡಿದ್ದೇವೆ. ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದು ಎಂದರು.

    ಶಹಾಪುರದ ಶ್ರೀ ಗುರುಪಾದ ಸ್ವಾಮೀಜಿ, ಹತ್ತಿಕಣಬಸ್‌ನ ಶ್ರೀ ಪ್ರಭುಶಾಂತ ಸ್ವಾಮೀಜಿ, ದುಧನಿಯ ಶ್ರೀ ಡಾ.ಶಾಂತಲಿಂಗ ಸ್ವಾಮೀಜಿ, ಮೈಂದರಗಿಯ ಶ್ರೀ ಮಹಾಂತ ಸ್ವಾಮೀಜಿ, ನಂದಗಾಂವ್‌ನ ಶ್ರೀ ಡಾ.ರಾಜಶೇಖರ ಸ್ವಾಮೀಜಿ, ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ, ಮಾಜಿ ಶಾಸಕ ಸುಭಾಷ ಗುತ್ತೇದಾರ್ ಮಾತನಾಡಿದರು.

    ಮಾಡಿಯಾಳದ ಶ್ರೀ ಮರಳುಸಿದ್ಧ ಸ್ವಾಮೀಜಿ, ಪ್ರಮುಖರಾದ ರಾಜಕುಮಾರ ಸಲಗರ, ಸುರೇಖಾ ಯಾದಗಿರಿ, ಪೂಜಾ ಸಾಖರೆ, ಡಾ.ಯಲ್ಲಪ್ಪ ಇಂಗಳೆ, ತಾರಾಬಾಯಿ ಪಾಟೀಲ್, ಸಿದ್ದರಾಮ ಅರಳಿಮಾರ, ಶಾಂತಮಲ್ಲಯ್ಯ ಸ್ವಾಮಿ, ಬಸವರಾಜ ಅರಳಿಮಾರ, ಸೋಮನಾಥ ಕೌಲಗಿ, ರುಕ್ಕಪ್ಪ ಮಡಿವಾಳ, ಗಣೇಶ ಓನಮಶೆಟ್ಟಿ, ಶಾಂತಕುಮಾರ ಮಠಪತಿ ಇತರರಿದ್ದರು.

    ನೂರಂದಯ್ಯ ಸ್ವಾಮಿ ಸಂಗೀತ ಸೇವೆ ಸಲ್ಲಿಸಿದರು. ಬಸವರಾಜ ಪ್ಯಾಟಿ ನಿರೂಪಣೆ ಮಾಡಿದರು. ಹಿರಿಯ ಸಾಹಿತಿ ಲಕ್ಷ್ಮಣ ಎಸ್.ಕೌಂಟೆ ಅವರಿಗೆ ಶ್ರೀಮಠದಿಂದ ಸಾಸಿರ ನಾಡ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts