More

    ಕಣ್ಣಿನ ರಕ್ಷಣೆಗೆ ಆದ್ಯತೆ ನೀಡಿರಿ

    ಮದ್ದೂರು: ಕಣ್ಣು ದೇಹದ ಅವಿಭಾಜ್ಯ ಅಂಗವಾಗಿರುವುದರಿಂದ ಪ್ರತಿಯೊಬ್ಬರು ಕಣ್ಣಿನ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಸುಮುಖ ನಿಧಿ ಲಿಮಿಟೆಡ್ ಅಧ್ಯಕ್ಷ ಕುಂದನಕುಪ್ಪೆ ಕುಮಾರ್ ಸಲಹೆ ನೀಡಿದರು.

    ಪಟ್ಟಣದ ಶ್ರೀ ಕಾಶಿ ವಿಶ್ವೇಶ್ವರಸ್ವಾಮಿ ಆವರಣದಲ್ಲಿರುವ ಶಂಕರ ಸಭಾದಲ್ಲಿ ಸುಮುಖ ಸೇವಾ ಟ್ರಸ್ಟ್, ಸುಮುಖ ನಿಧಿ ಲಿಮಿಡೆಟ್, ಶಂಕರ ಸಭಾ ಹಾಗೂ ಶಂಕರ ಕಣ್ಣಿನ ಆಸ್ಪತ್ರೆಯ ವತಿಯಿಂದ ಗುರವಾರ ಹಮ್ಮಿಕೊಂಡಿದ್ದ ನೇತ್ರ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
    ಕಣ್ಣುಗಳು ಇದ್ದರೆ ಮಾತ್ರ ಸುಂದರ ಪ್ರಪಂಚ ನೋಡಲು ಸಾಧ್ಯ. ಇಲ್ಲದಿದ್ದರೆ ಬದುಕು ಕತ್ತಲಾಗುತ್ತದೆ. ಚಿಕ್ಕ ಸಮಸ್ಯೆ ಇದ್ದಾಗಲೇ ಚಿಕಿತ್ಸೆ ಪಡೆದು ಕಣ್ಣಿನ ರಕ್ಷಣೆ ಮಾಡಿಕೊಳ್ಳಬೇಕು ಹಾಗೂ ಉಚಿತ ಶಿಬಿರಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

    ಶಂಕರ ಸಭಾ ಅಧ್ಯಕ್ಷ ಗುರುಸ್ವಾಮಿ ಮಾತನಾಡಿ, ಸತ್ತ ನಂತರ ಮಣ್ಣಲ್ಲಿ ಮಣ್ಣಾಗುವ ಕಣ್ಣುಗಳನ್ನು ಮರಣದ ನಂತರ ದಾನ ಮಾಡುವ ಮೂಲಕ ಇನ್ನೊಬ್ಬರ ಬಾಳಿಗೆ ಬೆಳಕಾಗಬೇಕು ಎಂದು ಸಲಹೆ ನೀಡಿದರು. ಶಿಬಿರದಲ್ಲಿ 115 ಕ್ಕೂ ಹೆಚ್ಚಿನ ಜನರು ತಪಾಸಣೆಗೊಳಪಟ್ಟರು. 30 ಕ್ಕೂ ಹೆಚ್ಚಿನ ಜನರನ್ನು ನೇತ್ರ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಸುಮುಖ ಸೇವಾ ಟ್ರಸ್ಟ್‌ನ ಕೇಬಲ್ ಸತೀಶ್, ಶಂಕರ ಸಭಾದ ಸುನೀಲ್, ಸುರೇಶ್‌ಬಾಬು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts