More

    ಖಾಸಗಿ ಶಾಲೆಯ ಶಿಕ್ಷಕಿಗೆ ನಾಮ ಹಾಕಿದ ಆನ್‌ಲೈನ್‌ ವಂಚಕರು!

    ಚೆನ್ನೈ: ಕೊಯಮತ್ತೂರಿನ ಖಾಸಗಿ ಶಾಲೆಯ ಶಿಕ್ಷಕರೊಬ್ಬರಿಂದ ಆನ್‌ಲೈನ್ ವಂಚಕರು 15 ಲಕ್ಷ ರೂ.ಲಪಟಾಯಿಸಿದ್ದಾರೆ. ಹೌದು, ಕಲಪಟ್ಟಿಯ ಖಾಸಗಿ ಶಾಲೆಯ ಶಿಕ್ಷಕಿ ಮಾಲತಿ ನೀಡಿದ ದೂರಿನ ಆಧಾರದ ಮೇಲೆ ಕೊಯಮತ್ತೂರು ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪೊಲೀಸರ ಪ್ರಕಾರ, ವಿದೇಶಿ ಪ್ರಜೆಯೊಬ್ಬ ಮಾಲತಿ ಜೊತೆಗೆ ಸಾಮಾಜಿಕ ಮಾಧ್ಯಮ ವೇದಿಕೆಯ ಮೂಲಕ ಸ್ನೇಹ ಬೆಳೆಸಿದ್ದಾನೆ. ತನ್ನನ್ನು ಕ್ಲಿಂಟನ್, ಲಂಡನ್‌ನ ಪ್ರೀಮಿಯಂ ಕಾರ್ ಸರ್ವಿಸ್ ಶೋರೂಮ್‌ನಲ್ಲಿ ಹಿರಿಯ ವ್ಯವಸ್ಥಾಪಕ ಎಂದು ಪರಿಚಯಿಸಿಕೊಂಡು ವಿಮಾನದ ಮೂಲಕ ದುಬಾರಿ ಉಡುಗೊರೆಗಳನ್ನು ಕಳುಹಿಸಿರುವುದಾಗಿ ಹೇಳುತ್ತಾನೆ.

    ಇದಾದ ನಂತರ ಮಾಲತಿಗೆ ಕಸ್ಟಮ್ಸ್ ಇಲಾಖೆಯಿಂದ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರು ಕರೆ ಮಾಡಿ, ವಿದೇಶದಿಂದ ಉಡುಗೊರೆ ಬಂದಿದ್ದು, ಅದನ್ನು ಸ್ವೀಕರಿಸಲು ಕಸ್ಟಮ್ಸ್ ಸುಂಕವನ್ನು ಪಾವತಿಸಬೇಕಾಗುತ್ತದೆ ಎನ್ನುತ್ತಾನೆ. ನಂತರ ಮಾಲತಿ ತಮ್ಮ ಚಿನ್ನಾಭರಣಗಳನ್ನು ಗಿರವಿ ಇಟ್ಟು ಅವರು ಹೇಳಿದ ಮೊತ್ತವನ್ನು ವರ್ಗಾಯಿಸಿದ್ದಾರೆ. ಆ ನಂತರ ವಂಚಕನನ್ನು ಸಂಪರ್ಕಿಸಲು ಪ್ರಯತ್ನ ಮಾಡಿದರೆ ಆ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ.

    ಅಂತಿಮವಾಗಿ ಮಾಲತಿ ಕೊಯಮತ್ತೂರು ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
    ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ‘ಆನ್‌ಲೈನ್ ವಂಚನೆ ಮತ್ತು ವಂಚನೆಯ ಪ್ರಕರಣಗಳು ದಿನನಿತ್ಯವೂ ಮುನ್ನೆಲೆಗೆ ಬರುತ್ತಿದ್ದರೂ, ಜನರು ಇನ್ನೂ ಇಂತಹ ಬಲೆಗೆ ಬೀಳುತ್ತಿದ್ದಾರೆ. ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಜನರಲ್ಲಿ ಸರಿಯಾದ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದ್ದಾರೆ.

    ಜಗದ್ವಿಖ್ಯಾತ ಗಣಿತ ಶಾಸ್ತ್ರಜ್ಞ ಸಿ.ಆರ್.ರಾವ್ ನಿಧನ: ಸಿಎಂ ಸಿದ್ದರಾಮಯ್ಯ ಸಂತಾಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts