More

    ಮದುವೆ ನೆಪದಲ್ಲಿ 40 ಲಕ್ಷ ವರ್ಗಾಯಿಸಿಕೊಂಡು ಮಹಿಳೆಗೆ ವಂಚನೆ


    ಹುಬ್ಬಳ್ಳಿ: ಮ್ಯಾಟ್ರಿಮೋನಿ ವೆಬ್​ಸೈಟ್​ವೊಂದರಲ್ಲಿ ಮಾಹಿತಿ ಕದ್ದು ಮಹಿಳೆಯೊಬ್ಬರನ್ನು ಸಂರ್ಪಸಿ ಮದುವೆಯಾಗುವುದಾಗಿ ನಂಬಿಸಿ, ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ನಗರದಲ್ಲಿ ನಡೆದಿದೆ.
    ವಿದೇಶದಿಂದ ಚಿನ್ನದ ಉಡುಗೊರೆ ಕಳುಹಿಸಿರುವುದಾಗಿ ಮಹಿಳೆಯನ್ನು ನಂಬಿಸಿದ ಆರೋಪಿ, ಅವರ ಬ್ಯಾಂಕ್ ಖಾತೆಯಿಂದ 40,05,670 ರೂ. ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಹಳೇಹುಬ್ಬಳ್ಳಿ ಸಹದೇವ ನಗರದ ಜಮುನಾ ಎಂಬುವರು 10 ವರ್ಷಗಳ ಹಿಂದೆ ಮ್ಯಾಟ್ರಿಮೋನಿ ವೆಬ್​ಸೈಟ್​ವೊಂದರಲ್ಲಿ ಹೆಸರು ನೋಂದಾಯಿಸಿದ್ದರು. ಅದರಿಂದ ಮಾಹಿತಿ ಕದ್ದ ವಂಚಕ ವಾಟ್ಸ್ ಆಪ್ ಮೂಲಕ ಜಮುನಾರನ್ನು ಸಂರ್ಪಸಿದ್ದ. ‘ನನ್ನ ಹೆಸರು ಅಭಿಷೇಕ ಶರ್ವ. ನಾನು ಅಮೆರಿಕದಲ್ಲಿ ಮರಿನ್ ಇಂಜಿನಿಯರ್ ಇದ್ದೇನೆ. ಜತೆಗೆ ಗೋಲ್ಡ್ ವ್ಯವಹಾರ ಹಾಗೂ ಮೆಡಿಕಲ್ ಇಕ್ಯುಪ್​ವೆುಂಟ್ ವ್ಯಾಪಾರ ಮಾಡುತ್ತೇನೆ. ನಿಮ್ಮನ್ನು ಮದುವೆಯಾಗುತ್ತೇನೆ’ ಎಂದು ನಂಬಿಸಿದ್ದ.
    ನಾನು ಭಾರತಕ್ಕೆ ಹಡಗಿನ ಮೂಲಕ ಬರುತ್ತಿದ್ದೇನೆ. ಹಡಗನ್ನು ಸೋಮಾಲಿಯಾ ಪೈರೈಟ್ಸ್ ಅಟ್ಯಾಕ್ ಮಾಡಿದ್ದಾರೆ. ನನ್ನ ಹತ್ತಿರ ಇದ್ದ ಬೆಲೆಬಾಳುವ ಚಿನ್ನದ ವಸ್ತುಗಳನ್ನು ದಕ್ಷಿಣ ಆಫ್ರಿಕಾದ ಕೋರಿಯರ್ ಮೂಲಕ ಕಳುಹಿಸಿದ್ದೇನೆ ಎಂದು ಹೇಳಿಕೊಂಡಿದ್ದ. ನಂತರ ಜಮುನಾಗೆ ಬೇರೊಬ್ಬರು ಕರೆ ಮಾಡಿ, ದಕ್ಷಿಣ ಆಫ್ರಿಕಾದಿಂದ ನಿಮ್ಮ ಹೆಸರಿಗೆ ಪಾರ್ಸಲ್ ಬಂದಿದೆ. ಅದರ ಶುಲ್ಕವನ್ನು ಪೂರ್ತಿಯಾಗಿ ತುಂಬಿಲ್ಲ. ದೆಹಲಿ ಹಾಗೂ ಮುಂಬೈ ಏರ್​ಪೋರ್ಟ್​ಗೂ ಪಾರ್ಸಲ್ ಬಂದಿದೆ. ನಿಮ್ಮ ಮೇಲೆ ಪೊಲೀಸ್ ಪ್ರಕರಣ ದಾಖಲಾಗಿದೆ ಎಂದು ಬೆದರಿಸಿ ವಿವಿಧ ಶುಲ್ಕದ ನೆಪದಲ್ಲಿ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.
    ಲಕ್ಕಿ ಡ್ರಾ ಹೆಸರಲ್ಲಿ: ಅಪರಿಚಿತ ಮಹಿಳೆಯೊಬ್ಬಳು ನಗರದ ಗೋಪನಕೊಪ್ಪ ನಿವಾಸಿ ಸುಷ್ಮಿತಾ ನಿಜಗುಣಿ ಎಂಬುವರಿಗೆ ಕರೆ ಮಾಡಿ, ನಿಮಗೆ ಮಾಮಾ ಅರ್ಥ್ ಕಂಪನಿಯಿಂದ ನೀವು ಲಕ್ಕಿ ಡ್ರಾಗೆ ಆಯ್ಕೆಯಾಗಿದ್ದೀರಿ. ನಿಮಗೆ ಐಪೋನ್ 13 ಮತ್ತು 2,500 ರೂ.ಗಳ ಕೂಪನ್ ಕೊಡುತ್ತೇವೆ ಎಂದು ನಂಬಿಸಿ ವಿವಿಧ ಶುಲ್ಕದ ನೆಪದಲ್ಲಿ 40,083 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
    ಹಣ ನಾಪತ್ತೆ: ನಗರದ ಮಹಿಳೆಯೊಬ್ಬರ ಬ್ಯಾಂಕ್ ಖಾತೆಗಳಿಂದ ಅವರ ಗಮನಕ್ಕೆ ಬಾರದಂತೆ 6,95,632 ರೂ. ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ. ನವನಗರದ ಸ್ಮಿತಾ ಗಾಡಗೀಳ ಎಂಬುವರ
    ಖಾತೆಯಿಂದ ಏ.28ರಿಂದ ಜು.18ರ ನಡುವಿನ ಅವಧಿಯಲ್ಲಿ ಅವರಿಗೆ ಗೊತ್ತಾಗದಂತೆ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ವರದಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts