More

    ಶೀಘ್ರದಲ್ಲೇ ಬರಲಿವೆ ರಫೇಲ್​ ಯುದ್ಧವಿಮಾನಗಳು; ಚೀನಾದ ಬೆದರಿಕೆ ಹಿಮ್ಮೆಟಿಸಲು ವಾಯುಪಡೆಗೆ ಬಂತು ರಕ್ಕೆಪುಕ್ಕ

    ನವದೆಹಲಿ: ಲಡಾಖ್​ನ ಪೂರ್ವಭಾಗದಲ್ಲಿನ ವಾಸ್ತವ ಗಡಿರೇಖೆಯಲ್ಲಿ ಚೀನಾ ಯುದ್ಧೋನ್ಮಾದ ತೋರುತ್ತಿರುವಂತೆ ಭಾರತೀಯ ವಾಯುಪಡೆಯ ಬಲ ಹೆಚ್ಚಿಸುವ ಸಂತಸದ ಸುದ್ದಿಯೊಂದು ಕೇಳಿಬಂದಿದೆ. ಭಾರತ ಖರೀದಿಸಲು ಉದ್ದೇಶಿಸಿರುವ ರಫೇಲ್​ ಯುದ್ಧವಿಮಾನಗಳನ್ನು ತ್ವರಿತವಾಗಿ ವಿತರಿಸಲು ಫ್ರಾನ್ಸ್​ ಮುಂದಾಗಿರುವುದು ಈ ಸಂತಸಕ್ಕೆ ಕಾರಣವಾಗಿದೆ.

    ಭಾರತೀಯ ವಾಯುಪಡೆಯ ಮನವಿ ಮೇರೆಗೆ ಆರು ರಫೇಲ್​ ಯುದ್ಧವಿಮಾನಗಳನ್ನು ತ್ವರಿತವಾಗಿ ವಿತರಿಸಲು ಫ್ರಾನ್ಸ್​ ನಿರ್ಧರಿಸಿದೆ. ಜುಲೈ 27ರಂದು ಈ ಯುದ್ಧವಿಮಾನಗಳು ಅಂಬಾಲಾ ವಾಯುನೆಲೆಗೆ ಬಂದಿಳಿಯಲಿರುವುದಾಗಿ ವಾಯುಪಡೆ ಮೂಲಗಳು ತಿಳಿಸಿವೆ.

    ಪೂರ್ವನಿಗದಿತದಂತೆ ಫ್ರಾನ್ಸ್​ ಜುಲೈ 27ರಂದು ನಾಲ್ಕು ರಫೇಲ್​ ಯುದ್ಧವಿಮಾನಗಳನ್ನು ವಿತರಣೆ ಮಾಡಬೇಕಿತ್ತು. ಆದರೆ, ವಾಸ್ತವ ಗಡಿರೇಖೆಯ ಬಳಿ ತೀವ್ರ ಉದ್ವಿಗ್ನ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ವಿಮಾನಗಳನ್ನು ವಿತರಿಸುವಂತೆ ವಾಯುಪಡೆ ಮನವಿ ಮಾಡಿಕೊಂಡಿತ್ತು ಎನ್ನಲಾಗಿದೆ. ಇದನ್ನು ಮನ್ನಿಸಿರುವ ಫ್ರಾನ್ಸ್​ ನಾಲ್ಕರ ಜತೆಗೆ ಹೆಚ್ಚುವರಿಯಾಗಿ ಇನ್ನೆರಡು ಯುದ್ಧವಿಮಾನಗಳನ್ನು ವಿತರಿಸಲು ಮುಂದಾಗಿದೆ.

    ಇದನ್ನೂ ಓದಿ: ದೆಹಲಿಯಲ್ಲಿ ಶೀಘ್ರವೇ ಪ್ಲಾಸ್ಮಾ ಬ್ಯಾಂಕ್​ ನಿರ್ಮಾಣ: ಮೃತ ವೈದ್ಯನ ಕುಟುಂಬಕ್ಕೆ 1 ಕೋಟಿ ರೂ.ಪರಿಹಾರ

    ಭಾರತಕ್ಕೆ ಕೊಡಬೇಕಿರುವ 36 ರಫೇಲ್​ ಯುದ್ಧವಿಮಾನಗಳ ಪೈಕಿ 10 ಯುದ್ಧವಿಮಾನಗಳು ಈಗಾಗಲೆ ಡಸಾಲ್ಟ್​ ಏವಿಯೇಷನ್ಸ್​ನ ಮೆರಿಗ್ನಾಕ್​ ಉತ್ಪಾದನಾ ಕೇಂದ್ರದಲ್ಲಿ ಸಿದ್ಧವಾಗಿ ನಿಂತಿವೆ. ಇವುಗಳಲ್ಲಿ ಆರು ಯುದ್ಧವಿಮಾನಗಳನ್ನು ಜುಲೈ ಕೊನೆಯ ವಾರದಲ್ಲಿ ಕೊಡಲಾಗುತ್ತಿದೆ. ಫ್ರಾನ್ಸ್​ನಿಂದ ಈ ಯುದ್ಧವಿಮಾನಗಳನ್ನು ಭಾರತೀಯ ಪೈಲಟ್​ಗಳೇ ಹಾರಿಸಿಕೊಂಡು ಬರಲಿದ್ದಾರೆ. ಯುಎಇಯ ಅಲ್​ ಧಾಫ್ರಾ ವಾಯುನೆಲೆಯಲ್ಲಿ ಒಂದು ದಿನ ನಿಲುಗಡೆ ಮಾಡಿ, ಅವನ್ನು ಭಾರತಕ್ಕೆ ತರಲಾಗುವುದು ಎಂದು ಭಾರತೀಯ ವಾಯುಪಡೆಯ ಮೂಲಗಳು ಖಚಿತಪಡಿಸಿವೆ.

    ಭಾರತೀಯ ವಾಯುಪಡೆಯ ಪೈಲಟ್​ಗಳಿಗೆ ತರಬೇತಿ ನೀಡಬೇಕಿರುವ ಕಾರಣ ಫ್ರಾನ್ಸ್​ 10ರ ಪೈಕಿ ನಾಲ್ಕು ರಫೇಲ್​ ಯುದ್ಧವಿಮಾನಗಳನ್ನು ತನ್ನಲ್ಲೇ ಉಳಿಸಿಕೊಂಡಿದ್ದು, ತಡವಾಗಿ ವಿತರಿಸಲಿದೆ ಎಂದು ಹೇಳಿವೆ.

    36 ರಫೇಲ್​ ಯುದ್ಧವಿಮಾನಗಳನ್ನು 59 ಸಾವಿರ ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಭಾರತ 2016ರ ಸೆಪ್ಟೆಂಬರ್​ನಲ್ಲಿ ಫ್ರಾನ್ಸ್​ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ವಾಯುಪಡೆಯ ಹೋರಾಟದ ಸಾಮರ್ಥ್ಯ ಕ್ಷೀಣಿಸುತ್ತಿದ್ದ ಹಿನ್ನೆಲೆಯಲ್ಲಿ ಅದಕ್ಕೆ ಹೆಚ್ಚಿನ ಬಲತುಂಬಿ ರೆಕ್ಕೆಪುಕ್ಕ ನೀಡುವುದು ಈ ಒಪ್ಪಂದದ ಉದ್ದೇಶವಾಗಿತ್ತು.

    ಅಡ್ಮಿಟ್‌ ವಿಳಂಬದಿಂದ ಸೋಂಕಿತನ ಸಾವು: ಆಸ್ಪತ್ರೆಗೆ ಬಿತ್ತು ₹ 77 ಲಕ್ಷ ಭಾರಿ ದಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts