More

    ನಾಲ್ಕರ ಕ್ರಾಸ್ ಅಪಘಾತದ ಸ್ಪಾಟ್

    ಅಕ್ಕಿಆಲೂರ: ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ಅಕ್ಕಿಆಲೂರ ಸಮೀಪದ ನಾಲ್ಕರ ಕ್ರಾಸ್​ನಲ್ಲಿ ಅಪಘಾತ ಹೆಚ್ಚುತ್ತಿದೆ. ವಾಹನಗಳ ವೇಗ ತಡೆಗೆ ವೈಜ್ಞಾನಿಕ ಹಂಪ್ಸ್, ಅಕ್ರಮಕ್ಕೆ ಬ್ರೇಕ್ ಹಾಕಲು ಚೆಕ್​ಪೊಸ್ಟ್ ಸೇರಿ ಸೌಲಭ್ಯ ಒದಗಿಸಲು ಸಾರ್ವಜನಿಕರಿಂದ ತೀವ್ರ ಒತ್ತಾಯ ಕೇಳಿಬರುತ್ತಿದೆ.

    ಹಾವೇರಿ, ಧಾರವಾಡ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ತೆರಳುವ ನಾಲ್ಕು ರಸ್ತೆಗಳು ಅಕ್ಕಿಆಲೂರ ಸಮೀಪದಲ್ಲಿ ಕೂಡಿವೆ. ಈ ಕ್ರಾಸ್​ನಲ್ಲಿ ಹಾವೇರಿಯಿಂದ ಶಿರಸಿಗೆ, ಹುಬ್ಬಳ್ಳಿಯಿಂದ ಶಿವಮೊಗ್ಗಕ್ಕೆ ವಾಹನಗಳು ವೇಗವಾಗಿ ಸಂಚರಿಸುತ್ತವೆ. ಆದರೆ, ವಾಹನಗಳ ವೇಗಕ್ಕೆ ತಡೆ ನೀಡಲು ಹಂಪ್ಸ್ ಇಲ್ಲದ ಕಾರಣ ನಿತ್ಯ ಅಪಘಾತ ಸಂಭವಿಸುತ್ತಿದೆ.

    ನಾಲ್ಕರ ಕ್ರಾಸ್​ನಲ್ಲಿ ಕಳೆದ 15 ದಿನಗಳಲ್ಲಿ 10ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಟ್ರ್ಯಾಕ್ಟರ್- ಬೈಕ್, ಲಾರಿ- ಕಾರ್ ಮತ್ತು ಬೈಕ್​ಗಳ ನಡುವೆ ಜರುಗಿದ ಅಪಘಾತಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

    ಬಸ್ ನಿಲ್ದಾಣ ನಿರ್ವಿುಸಲು ಆಗ್ರಹ

    ಬಸ್​ಗಳನ್ನು ಬದಲಿಸುವ ಪ್ರಯಾಣಿಕರೇ ಅಧಿಕ ಸಂಖ್ಯೆಯಲ್ಲಿ ನಾಲ್ಕರ್ ಕ್ರಾಸ್​ಗೆ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಬಸ್​ಗಾಗಿ ಕಾಯುತ್ತಿರುವ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಇದುವರೆಗೂ ಬಸ್ ನಿಲ್ದಾಣ ನಿರ್ವಿುಸಿಲ್ಲ. ಇದರಿಂದ ಪ್ರಯಾಣಿಕರು ಬೀಡಾ ಮತ್ತು ಚಹಾದಂಗಡಿಗಳಲ್ಲಿ ಕಾಯುವ ಪರಿಸ್ಥಿತಿ ನಿರ್ವಣವಾಗಿದೆ. ಮಾಜಿ ಸಿಎಂ ದಿ. ಎಸ್. ಬಂಗಾರಪ್ಪ ಹೆಸರಿನಲ್ಲಿರುವ ನಾಲ್ಕರ ಕ್ರಾಸ್​ನಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ವಿುಸಲು ಅಧಿಕಾರಿಗಳ ಗಮನಹರಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

    ಅಕ್ರಮ ತಡೆಗೆ ಚೆಕ್​ಪೋಸ್ಟ್ ಅಗತ್ಯ: ಅಕ್ಕಿಆಲೂರಿನಿಂದ 12 ಕಿಲೋ ಮೀಟರ್ ಶಿರಸಿ ರಸ್ತೆಯಲ್ಲಿ ಸಂಚರಿಸಿದರೆ ಉತ್ತರ ಕನ್ನಡ ಜಿಲ್ಲೆ, 15 ಕಿಲೋ ಮೀಟರ್ ಮರಕೊಳ್ಳಿ ಕಡೆಗೆ ಪ್ರಯಾಣ ಬೆಳೆಸಿದರೆ ಶಿವಮೊಗ್ಗ ಜಿಲ್ಲೆಯ ಪ್ರವೇಶವಾಗುತ್ತದೆ. ಈ ಭಾಗದಲ್ಲಿ ಅರಣ್ಯ ಪ್ರದೇಶವಿರುವುದರಿಂದ ಅಕ್ರಮ ಮತ್ತು ಅನೈತಿಕ ಚಟುವಟಿಕೆಗೆ ಹೇಳಿ ಮಾಡಿಸಿದ ತಾಣದಂತಾಗಿದೆ. ಅಕ್ರಮ ತಡೆಯಲು ನಾಲ್ಕರ ಕ್ರಾಸ್​ನಲ್ಲಿ ಪೊಲೀಸ್ ಇಲಾಖೆಯಿಂದ ಚೆಕ್​ಪೋಸ್ಟ್ ನಿರ್ವಣವಾಗಬೇಕಿದೆ.

    ನಾಲ್ಕರ ಕ್ರಾಸ್ ಅಪಘಾತ ಸಂಭವಿಸುವ ಅಪಾಯ ಮಾರ್ಗವಾಗುತ್ತಿದೆ. ರಾತ್ರಿ ವೇಳೆ ವೇಗದಲ್ಲಿ ಬರುವ ವಾಹನಗಳ ಮೇಲೆ ಯೋಗ್ಯ ಕ್ರಮ ಕೈಗೊಳ್ಳಬೇಕು. ಅದಕ್ಕೂ ಮೊದಲು ಶೀಘ್ರವೆ ವೇಗ ತಡೆಗೆ ಹಂಪ್ಸ್ ನಿರ್ಮಾಣ ಮಾಡಬೇಕು.
    | ರವಿ ಚೌಶೆಟ್ಟಿ ಅಕ್ಕಿಆಲೂರ ವಾಹನ ಚಾಲಕ

    ನಾಲ್ಕರ್ ಕ್ರಾಸ್ ಹತ್ತಿಕೊಂಡಿರುವ ಹೆದ್ದಾರಿಯು ರಾಜ್ಯ ಹೆದ್ದಾರಿ ಅಭಿವೃದ್ಧಿ ಇಲಾಖೆಗೆ ಒಳಪಡುತ್ತದೆ. ಅಪಘಾತ ಸಂಭವಿಸುವ ಸ್ಥಳವನ್ನು ಗುರುತಿಸಿ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಶೀಘ್ರದಲ್ಲೇ ಮತ್ತೊಂದು ಬಾರಿ ನಾಲ್ಕರ್ ಕ್ರಾಸ್ ಬಳಿ ಅಧಿಕಾರಿಗಳನ್ನು ಕರೆಸಿ ರ್ಚಚಿಸಲಾಗುವುದು. ಬಸ್ ನಿಲ್ದಾಣಕ್ಕೆ ಜನಪ್ರತಿನಿಧಿಗಳ ಅನುದಾನದಲ್ಲಿ ಘೊಷಣೆ ಮಾಡಬೇಕು.
    | ಪ್ರಕಾಶ ಶೆಟ್ಟಕೆರಿ, ಎಇಇ, ಪಿಡಬ್ಲ್ಯುಡಿ, ಹಾನಗಲ್ಲ ತಾಲೂಕು
    .

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts