More

    ಅಯೋಧ್ಯೆ ಶ್ರೀರಾಮಮಂದಿರ ನಿರ್ಮಾಣಕ್ಕೆ ಬಿತ್ತು ಅಡಿಪಾಯ

    ಅಯೋಧ್ಯೆ: ಸಾಕಷ್ಟು ಕಾಲ ಕಾನೂನು ಹೋರಾಟದ ಬಳಿಕ ಬಹುಜನರ ಅಪೇಕ್ಷೆಯ ಮೇರೆಗೆ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಕಾರ್ಯ ಮಂಗಳವಾರದಿಂದ ಆರಂಭವಾಗಿದೆ.

    ತಾತ್ಕಾಲಿಕ ದೇಗುಲದಲ್ಲಿ ಇರುವ ರಾಮಲಲ್ಲಾ ದೇವರ ಮೂರ್ತಿಗೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ಅಧ್ಯಕ್ಷ ಮಹಾಮತಾ ನೃತ್ಯ ಗೋಪಾಲ ದಾಸ್​ ಮಂಗಳವಾರ ಬೆಳಗ್ಗೆ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಅವರು ರಾಮಜನ್ಮಭೂಮಿಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯವನ್ನು ಇಂದಿನಿಂದ ಆರಂಭಿಸುತ್ತಿರುವುದಾಗಿ ಘೋಷಿಸಿದರು.

    ನಿರ್ಮಾಣ ಕಾರ್ಯ ಆರಂಭವಾಗುವ ಮುನ್ನ ರಾಮ ಜನ್ಮಭೂಮಿ ನ್ಯಾಸ್​ನ ಮುಖ್ಯಸ್ಥರೂ ಆಗಿರುವ ಮಹಾಂತಾ ನೃತ್ಯ ಗೋಪಾಲ್​ ದಾಲ್​ ಭೂಮಿ ಪೂಜೆ ನೆರವೇರಿಸಿದರು.

    ಇದನ್ನೂ ಓದಿ: ಭಾರತ-ಚೀನಾ ನಡುವಿನ ಈಗಿನ ಬಿಕ್ಕಟ್ಟು ಡೊಕ್ಲಾಮ್​ ಬಿಕ್ಕಟ್ಟಿಗಿಂತ ದೊಡ್ಡದು

    ಅಂದಾಜು 27 ವರ್ಷಗಳ ಹೋರಾಟದ ಬಳಿಕ 2020ರ ಮಾರ್ಚ್​ 25ರಂದು ಅಯೋಧ್ಯೆಯ ತಾತ್ಕಾಲಿಕ ದೇಗುಲದಲ್ಲಿದ್ದ ರಾಮ ಲಲ್ಲಾ ದೇವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇಟ್ಟು ಮಾನಸ ಭವನಕ್ಕೆ ಸ್ಥಳಾಂತರಿಸಲಾಗಿತ್ತು. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ ಉಪಸ್ಥಿತರಿದ್ದರು.

    2019ರ ನವೆಂಬರ್​ 9ರಂದು ದೇಗುಲ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವ ತೀರ್ಪು ನೀಡುವ ಮೂಲಕ ಸುಪ್ರೀಂಕೋರ್ಟ್​ ಒಂದು ಶತಮಾನಕ್ಕೂ ಹೆಚ್ಚುಕಾಲದಿಂದ ಇದ್ದ ವಿವಾದವನ್ನು ಇತ್ಯರ್ಥ ಪಡಿಸಿತ್ತು.

    5 ನ್ಯಾಯಮೂರ್ತಿಗಳ ಸುಪ್ರೀಂಕೋರ್ಟ್​ನ ಸಂವಿಧಾನ ಪೀಠದ ಮುಖ್ಯಸ್ಥರಾಗಿದ್ದ ಸುಪ್ರೀಂಕೋರ್ಟ್​ನ ಆಗಿನ ನ್ಯಾಯಮೂರ್ತಿ ರಂಜನ್​ ಗೊಗೊಯ್​, ಅಯೋಧ್ಯೆಯ ವಿವಾದಿತ ಪ್ರದೇಶದಲ್ಲಿ ರಾಮ ಜನಿಸಿದ್ದ ಎಂಬ ಹಿಂದು ಧರ್ಮೀಯರ ನಂಬಿಕೆ ವಿವಾದಾತೀತ ಎಂದು ತೀರ್ಪು ನೀಡಿದ್ದರು.

    ಒಳ್ಳೆಯ ಮಾತಿನಲ್ಲಿ ಭಾರತ ನಮ್ಮ ಪ್ರದೇಶಗಳನ್ನು ನಮಗೆ ಒಪ್ಪಿಸಬೇಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts