More

    ‘ಭಾರತೀಯನಾಗಿರುವುದೇ ಅದೃಷ್ಟ, ಭಾರತ ರತ್ನಕ್ಕಾಗಿ ಬೇಡ ಒತ್ತಾಯ..’; ರತ್ನದಂಥ ಮಾತಾಡಿದ ರತನ್ ಟಾಟಾ

    ನವದೆಹಲಿ: ಪ್ರಶಸ್ತಿಗಾಗಿ ಲಾಬಿಗಳು ನಡೆಯುವ ಈ ಕಾಲದಲ್ಲಿ ಪ್ರಶಸ್ತಿಗಾಗಿ ಯಾವ ಒತ್ತಾಯ, ಅಭಿಯಾನವೂ ಬೇಡ ಎಂದು ಹೇಳುವ ಮೂಲಕ ಉದ್ಯಮಿ ರತನ್​ ಟಾಟಾ ಅವರು ಜನರಿಂದ ಮತ್ತಷ್ಟು ಮೆಚ್ಚುಗೆಗೆ ಒಳಗಾಗಿದ್ದಾರೆ. ಈ ಮೂಲಕ ಟಾಟಾ ಅವರಲ್ಲಿರುವ ದೇಶಭಕ್ತಿ-ರಾಷ್ಟ್ರಪ್ರೇಮ ಮತ್ತೊಮ್ಮೆ ಅನಾವರಣಗೊಂಡಿದೆ.

    ದೇಶಭಕ್ತಿ, ರಾಷ್ಟ್ರಕ್ಕಾಗಿ ಏನೂ ಬೇಕಾದರೂ ನೆರವು ನೀಡುವೆ ಎಂದು ಹೇಳುವ ಟಾಟಾ ಬರೀ ಮಾತಿಗೇ ಸೀಮಿತವಾಗಿಲ್ಲ. ಅದನ್ನು ಪ್ರವಾಹ ಹಾಗೂ ಕರೊನಾ ಸಂಕಷ್ಟದ ಸಂದರ್ಭದಲ್ಲಿ ಕಾರ್ಯರೂಪಕ್ಕೆ ತರುವ ಮೂಲಕ ತಮ್ಮದು ನುಡಿದಂತೆ ನಡೆ ಎಂಬುದನ್ನೂ ಸಾಬೀತು ಪಡಿಸಿದ್ದಾರೆ. ಲಾಭಕ್ಕಿಂತ ದೇಶದ ಹಿತಕ್ಕೇ ಆದ್ಯತೆ ಎಂಬ ಧ್ಯೇಯದ ಮೇಲೆಯೇ ಹಲವಾರು ಕಂಪನಿಗಳನ್ನು ಕಟ್ಟಿ ಮುನ್ನಡೆಸುತ್ತಿರುವ ಟಾಟಾ ಅವರಿಗೆ ಭಾರತ ರತ್ನ ಸಿಗಬೇಕು ಎಂಬ ಅಭಿಪ್ರಾಯ ಸಹಜವಾಗಿಯೇ ವ್ಯಕ್ತವಾಗಿದೆ.

    ಇದನ್ನೂ ಓದಿ: ಮೆಸೇಜ್​ ಮಾಡುವಾಗ ಹುಷಾರು.. ಆ ಒಂದು ಪದ ಬಳಸಿದ್ದಕ್ಕೆ ಆಕೆಗೆ 2 ವರ್ಷ ಜೈಲು! 

    #BharatRatnaForRatanTata ಎಂಬ ಹ್ಯಾಷ್​ಟ್ಯಾಗ್​ನಡಿ ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥ, ಖ್ಯಾತ ಉದ್ಯಮಿ ರತನ್ ಟಾಟಾ ಅವರನ್ನು ಭಾರತ ರತ್ನ ಪ್ರಶಸ್ತಿಗೆ ಪರಿಗಣಿಸಬೇಕು ಎಂಬ ಆಗ್ರಹದೊಂದಿಗೆ ಟ್ವಿಟರ್​ನಲ್ಲಿ ಅಭಿಯಾನವೂ ಆರಂಭಗೊಂಡಿದೆ. ಅದು ಟಾಟಾ ಅವರ ಗಮನಕ್ಕೂ ಬಂದಿದೆ. ಅದಕ್ಕೆ ಟ್ವಿಟರ್​ನಲ್ಲೇ ಪ್ರತಿಕ್ರಿಯಿಸಿರುವ ಟಾಟಾ, ಭಾರತ ರತ್ನ ಕೊಡಿ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿರುವುದರ ಬಗ್ಗೆ ಸಂತೋಷವಾದರೂ, ಅಂಥದ್ದೊಂದು ಅಭಿಯಾನವನ್ನು ನಿಲ್ಲಿಸುವಂತೆ ವಿನಯಪೂರ್ವಕವಾಗಿ ಕೋರಿಕೊಳ್ಳುತ್ತೇನೆ. ನನಗೆ ಭಾರತೀಯನಾಗಿರುವುದೇ ಅತ್ಯಂತ ದೊಡ್ಡ ಅದೃಷ್ಟ ಎಂದು ಹೇಳಿರುವ ಅವರು ಭಾರತ ರತ್ನಕ್ಕಾಗಿ ಆಗ್ರಹ ಬೇಡ ಎಂದು ಕೋರಿಕೊಂಡಿದ್ದಾರೆ. ಮಾತ್ರವಲ್ಲ, ಭಾರತದ ಪ್ರಗತಿಗಾಗಿ ಮತ್ತಷ್ಟು ಕೊಡುಗೆ ನೀಡಲು ಪ್ರಯತ್ನಿಸುತ್ತಿರುತ್ತೇನೆ ಎಂಬುದಾಗಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts