More

    ಕೆಎಚ್‌ಬಿ ಇ ಹರಾಜು ರದ್ದತಿಗೆ ಆಗ್ರಹ; ಬಹಿರಂಗ ಹರಾಜು ಆರಂಭಿಸುವಂತೆ ರೈತ ಸಂಘ ಒತ್ತಾಯ

    ಹಾವೇರಿ: ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಜನ ಸಾಮಾನ್ಯರಿಗೆ ತಿಳಿಯದ ಇ ಹರಾಜು ಪ್ರಕ್ರಿಯೆಯನ್ನು ರದ್ದುಪಡಿಸಿ, ಬಹಿರಂಗ ಹರಾಜು ಪ್ರಕ್ರಿಯೆ ಆರಂಭಿಸುವ ಮೂಲಕ ಪಾರದರ್ಶಕತೆಗೆ ಒತ್ತು ನೀಡಬೇಕು. ಈ ಮೂಲಕ ಬಡವರಿಗೆ ಅನುಕೂಲ ಮಾಡಬೇಕು ಎಂದು ರಾಜ್ಯ ರೈತ ಸಂಘ ಸರ್ಕಾರಕ್ಕೆ ಆಗ್ರಹಿಸಿದೆ.
    ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘದ ಸದಸ್ಯರು ಶನಿವಾರ ಪ್ರತಿಭಟನೆ ನಡೆಸಿದರು. ಕರ್ನಾಟಕ ಹೌಸಿಂಗ್ ಬೋರ್ಡ್‌ನ ಜನ ವಿರೋಧಿ ನೀತಿ ಖಂಡಿಸಿ ಧಿಕ್ಕಾರ ಕೂಗಿದರು.
    ಕೆಎಚ್‌ಬಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ನಿರ್ಮಿಸಿರುವ ವಿವಿಧ ಬಡವಾಣೆಗಳಲ್ಲಿ ವಿವಿಧ ವರ್ಗದ ಖಾಲಿ ನಿವೇಶನಗಳನ್ನು ಇರುವ ನಿವೇಶನ/ ಪ್ಲಾಟ್/ ಮನೆಗಳನ್ನು ಇ ಹರಾಜು ಪ್ರಕ್ರಿಯೆ ಮೂಲಕ ವಿಲೇವಾರಿ ಆರಂಭಿಸಿದ ನಂತರ ಇದರಿಂದ ಜನಸಾಮಾನ್ಯರಿಗೆ ಉಪಯೋಗವಾಗಿಲ್ಲ. ಇ ಹರಾಜು ಸಾಮಾನ್ಯರಿಗೆ ಗೊತ್ತಿಲ್ಲ. ಹಾಗಾಗಿ, ಇದು ಕೇವಲ ಬಿಲ್ಡರ್‌ಗಳು, ಗುತ್ತಿಗೆದಾರರು, ಮಧ್ಯವರ್ತಿಗಳ ಪಾಲಾಗುತ್ತಿದೆ. ಇಷ್ಟು ಸಾಮಾನ್ಯ ಜ್ಞಾನ ಮಂಡಳಿಯ ಅಧಿಕಾರಿಗಳಿಗೆ ತಿಳಿಯುತ್ತಿಲ್ಲವೇ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
    ಮಂಡಳಿಯ ಈ ಅವೈಜ್ಞಾನಿಕ ಪದ್ಧತಿಯಿಂದ ಸಾಮಾನ್ಯ ಜನರಿಗೆ ಅನ್ಯಾಯವಾಗುತ್ತಿದೆ. ನಿವೇಶನ ರಹಿತರಿಗೆ ನಿವೇಶನ ಸಿಗುತ್ತಿಲ್ಲ. ಕೂಡಲೇ ಈ ಪದ್ಧತಿ ಕೈಬಿಟ್ಟು ಬಹಿರಂಗ ಹರಾಜು ಮೂಲಕ ನಿಜವಾದ ಫಲಾನುಭವಿಗಳಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
    ಮಂಡಳಿಯ ಸಹಾಯಕ ಅಭಿಯಂತರ ಹುಸೇನ್ ಬಿ. ಅವರ ಮೂಲಕ ಕೆಎಚ್‌ಬಿ ಆಯುಕ್ತರಿಗೆ ಮನವಿ ಪತ್ರ ರವಾನಿಸಿದರು.
    ಈ ವೇಳೆ ರೈತ ಸಂಘದ ಶೈಲಾ ಕೊಟ್ಟದ, ಕವಿತಾ ಕುಸಗೂರ, ಕಮಲಾಕ್ಷಮ್ಮ ಬೆಳಕೇರಿ, ಜಯಮ್ಮ ಓಲೇಕಾರ, ಪುಷ್ಪಾ ನೋಟದ, ಸಾಕಮ್ಮ ತಳವಾರ, ರೇಣುಕಾ ಕೊಟ್ಟದ, ಕಾವೇರಮ್ಮ ಪೂಜಾರ, ಪ್ರದೀಪ ಕೆ., ನಾಗನಗೌಡ ಪಾಟೀಲ, ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts