More

    ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಆಸ್ಪತ್ರೆಗೆ ದಾಖಲು

    ನವದೆಹಲಿ: ಮಾಜಿ ಪ್ರಧಾನಮಂತ್ರಿ ಮನಮೋಹನ್​ ಸಿಂಗ್​ ತೀವ್ರ ಎದೆನೋವಿನಿಂದ ಬಳಲುತ್ತಿದ್ದು, ಅವರನ್ನು ಇಲ್ಲಿನ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಗೆ (ಏಮ್ಸ್​) ದಾಖಲಿಸಲಾಗಿದೆ.

    ಸಿಂಗ್​ ಅವರಿಗೆ 87 ವರ್ಷ ವಯಸ್ಸಾಗಿದ್ದು, 2009ರಲ್ಲಿ ಏಮ್ಸ್​ನಲ್ಲಿಯೇ ತೆರೆದ ಹೃದಯದ ಬೈಪಾಸ್​ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿತ್ತು.
    ಎರಡು ಅವಧಿಗೆ ಪ್ರಧಾನಿಯಾಗಿದ್ದ ಮನಮೋಹನ್​ ಸಿಂಗ್​, ಪ್ರಸ್ತುತ ಎನ್​ಡಿಎ ಸರ್ಕಾಋದ ಆರ್ಥಿಕ ನೀತಿಗಳ ಕಟು ಟೀಕಾಕಾರಗಿದ್ದರು. ಪಂಜಾಬ್​ ಸರ್ಕಾರಕ್ಕೆ ವಿಶೇಷ ಆರ್ಥಿಕ ಸಲಹೆಗಾರರಾಗಬೇಕು ಎನ್ನುವ ಸಿಎಂ ಕ್ಯಾಪ್ಟನ್​ ಅಮರಿಂದರ್​ ಸಿಂಗ್​ ಅವರ ಪ್ರಸ್ತಾಪಕ್ಕೆ ಒಪ್ಪಿದ್ದರು.

    ಅಂದಿನ ಪ್ರಧಾನಿ ಪಿ.ವಿ. ನರಸಿಂಹ್​ರಾವ್​ ಅವರ ಅವಧಿಯಲ್ಲಿ ಹಣಕಾಸು ಸಚಿವರಾಗಿ 1990ರ ದಶಕದಲ್ಲಿ ಆರ್ಥಿಕ ಸುಧಾರಣೆಗೆ ನಾಂದಿ ಹಾಡಿದರು. ಆರ್ಥಿಕ ಉದಾರೀಕರಣದ ಹರಿಕಾರ ಎಂದೇ ಮನ್​ಮೋಹನ್​ ಅವರನ್ನು ಕರೆಯಲಾಗುತ್ತದೆ. ವಿಶ್ವ ಆರ್ಥಿಕ ಒಪ್ಪಂದಕ್ಕೆ ಸಮ್ಮತಿಸುವ ಮೂಲಕ ದೇಶದಲ್ಲಿ ಜಾಗತೀಕರಣದ ಹೆಬ್ಬಾಗಿಲು ತೆರೆಯಲು ಕಾರಣರಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts