More

    ಮೋದಿಯ ಆ ನಡೆಗೆ ಖುಷಿಯಾದ ಮಾಜಿ ಪ್ರಧಾನಿ; ಪ್ರಧಾನಮಂತ್ರಿಗೆ ಅಭಿನಂದನೆ ಸಲ್ಲಿಸಿದ ಎಚ್​.ಡಿ.ದೇವೇಗೌಡ

    ಹಾಸನ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿನಂದನೆ ಸಲ್ಲಿಸಿದ್ದಾರೆ. ಮಾತ್ರವಲ್ಲ, ಮೋದಿಯ ಆ ನಡೆಗೆ ತಮ್ಮ ಖುಷಿಯನ್ನು ವ್ಯಕ್ತಪಡಿಸಿ ಧನ್ಯವಾದವನ್ನೂ ತಿಳಿಸಿದ್ದಾರೆ.

    ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದಲ್ಲಿರುವ ಹೊಯ್ಸಳ ವಾಸ್ತುಶಿಲ್ಪದ ದೇವಾಲಯಗಳನ್ನು ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಿಸುವ ಸಂಬಂಧ ನಾಮಾಂಕಿತಗೊಳಿಸಿದ ಹಿನ್ನೆಲೆಯಲ್ಲಿ ಅವರು ಈ ಅಭಿನಂದನೆಯನ್ನು ತಿಳಿಸಿದ್ದಾರೆ.

    ಇದನ್ನೂ ಓದಿ: ಟೋಯಿಂಗ್​ಗೆ ಬಂದಿದ್ದವರನ್ನು ತರಾಟೆಗೆ ತಗೊಂಡ ಜನರು; ಟೋ ಮಾಡದೆ ವಾಪಸ್ ಹೋದ ಪೊಲೀಸರು

    ಈ ಸಂಬಂಧ ತಮ್ಮ ಸಲಹೆಯನ್ನು ಪ್ರಧಾನಿ ಮೋದಿಯವರು ಸ್ವೀಕರಿಸಿದ್ದು ಖುಷಿ ನೀಡಿದೆ. 1986ರಲ್ಲಿ ಹಂಪೆ, 1987ರಲ್ಲಿ ಪಟ್ಟದಕಲ್ಲು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ಬಳಿಕ ರಾಜ್ಯದ ಯಾವ ಸ್ಥಳವೂ ಮತ್ತೆ ಆ ಪಟ್ಟಿಗೆ ಸೇರಿಲ್ಲ. ಎಲ್ಲವೂ ಅಂದುಕೊಂಡಂತೆಯೇ ಆದರೆ ನನ್ನೂರಿನ ಈ ಅದ್ಭುತ ಸ್ಥಳ 2023ರಲ್ಲಿ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರಲಿದೆ. ಆ ನಿಟ್ಟಿನಲ್ಲಿ ಕ್ರಮಕೈಗೊಂಡಿದ್ದಕ್ಕೆ ಧನ್ಯವಾದ ಎಂದು ದೇವೇಗೌಡರು ಮೋದಿಯ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಮೋದಿಯ ಆ ನಡೆಗೆ ಖುಷಿಯಾದ ಮಾಜಿ ಪ್ರಧಾನಿ; ಪ್ರಧಾನಮಂತ್ರಿಗೆ ಅಭಿನಂದನೆ ಸಲ್ಲಿಸಿದ ಎಚ್​.ಡಿ.ದೇವೇಗೌಡ
    ಮೋದಿಗೆ ಮಾಜಿ ಪ್ರಧಾನಿ ಬರೆದಿರುವ ಪತ್ರ

    ವಿಶ್ವ ಪರಂಪರೆ ಪಟ್ಟಿಗೆ ಹೊಯ್ಸಳ ದೇವಾಲಯ ಸಮೂಹ ನಾಮಾಂಕಿತ; ಭಾರತದಿಂದ ಯುನೆಸ್ಕೊಗೆ ಪ್ರಸ್ತಾವನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts