ವಿಶ್ವ ಪರಂಪರೆ ಪಟ್ಟಿಗೆ ಹೊಯ್ಸಳ ದೇವಾಲಯ ಸಮೂಹ ನಾಮಾಂಕಿತ; ಭಾರತದಿಂದ ಯುನೆಸ್ಕೊಗೆ ಪ್ರಸ್ತಾವನೆ

ಬೆಂಗಳೂರು: ಯುನೆಸ್ಕೊ ವಿಶ್ವ ಪರಂಪರೆ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು 2022-23ನೇ ಸಾಲಿಗೆ ಭಾರತದಿಂದ ಬೇಲೂರು-ಹಳೆಬೀಡು-ಸೋಮನಾಥಪುರದ ಹೊಯ್ಸಳ ಪವಿತ್ರ ಸಮೂಹವನ್ನು ಕೇಂದ್ರ ಸರ್ಕಾರ ಪ್ರಸ್ತಾವಿಸಿದೆ. ಈಗಾಗಲೆ ‘ಪವಿತ್ರ ಹೊಯ್ಸಳ ಸಮೂಹಗಳು’ ಎಂಬ ಹೆಸರಿನಲ್ಲಿ ಯುನೆಸ್ಕೊ ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆಗಾಗಿ ಸಂಭಾವ್ಯ ಪಟ್ಟಿಯಲ್ಲಿ ಬೇಲೂರು ಹಾಗೂ ಹಳೆಬೀಡಿನ ಹೆಸರುಗಳು ಯುನೆಸ್ಕೊ ಪರಿಗಣನೆಯಲ್ಲಿವೆ. ಇದೀಗ ಕೇಂದ್ರ ಸರ್ಕಾರ ಮೈಸೂರಿನ ಸೋಮನಾಥಪುರವನ್ನೂ ಸೇರಿಸಿ ಪ್ರಸ್ತಾವನೆ ಸಲ್ಲಿಸಲು ನಿರ್ಧಾರ ಮಾಡಿದೆ. ಯುನೆಸ್ಕೊದ ವಿಶ್ವಪರಂಪರೆ ವಿಭಾಗದ ಲಜೇರ್ ಎಲಂದೋ ಅವರಿಗೆ ಯುನೆಸ್ಕೊದಲ್ಲಿ ಭಾರತದ ಶಾಶ್ವತ ರಾಯಭಾರಿ ವಿಶಾಲ್ … Continue reading ವಿಶ್ವ ಪರಂಪರೆ ಪಟ್ಟಿಗೆ ಹೊಯ್ಸಳ ದೇವಾಲಯ ಸಮೂಹ ನಾಮಾಂಕಿತ; ಭಾರತದಿಂದ ಯುನೆಸ್ಕೊಗೆ ಪ್ರಸ್ತಾವನೆ