More

    ಜಮ್ಮು-ಕಾಶ್ಮೀರದ 33 ರಾಜಕಾರಣಿಗಳ ವಿದೇಶ ಪ್ರವಾಸಕ್ಕೆ ನಿಷೇಧ

    ನವದೆಹಲಿ: ಜಮ್ಮು-ಕಾಶ್ಮೀರದಲ್ಲಿನ ಕೆಲವರು ಶಾಸಕರು ಸೇರಿ 33 ರಾಜಕಾರಣಿಗಳು ವಿದೇಶ ಪ್ರವಾಸ ಮಾಡುವಂತಿಲ್ಲ. ಅವರ ವಿದೇಶ ಪ್ರವಾಸಕ್ಕೆ ನಿಷೇಧ ಹೇರಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ನ್ಯಾಷನಲ್ ಕಾನ್ಫರೆನ್ಸ್ ಶಾಸಕ ಅಲ್ತಾಫ್​ ಅಹ್ಮದ್ ವಾನಿ ಅವರು ದುಬೈ ಹೋಗಲು ವಿಮಾನ ನಿಲ್ದಾಣಕ್ಕೆ ತೆರಳಿದ ವೇಳೆ, ವಿದೇಶ ಪ್ರವಾಸ ನಿಷೇಧದ ಮಾಹಿತಿ ನೀಡಿ ಅವರನ್ನು ಅಲ್ಲಿಂದ ವಾಪಸ್ ಕಳುಹಿಸಲಾಗಿದೆ.

    ಅಲ್ತಾಫ್ ಅಹ್ಮದ್ ವಾನಿ ಗುರುವಾರ ರಾತ್ರಿ ವಿಮಾನ ನಿಲ್ದಾಣಕ್ಕೆ ತೆರಳಿದ್ದ ವೇಳೆ ಇದು ಬಹಿರಂಗವಾಗಿದೆ. ಕುಟುಂಬದ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕೆ ದುಬೈ ತೆರಳಬೇಕಾಗಿತ್ತು. ಆದರೆ, ಅಧಿಕಾರಿಗಳು ಅದಕ್ಕೆ ಅವಕಾಶ ನೀಡಲಿಲ್ಲ. ನನ್ನ ಲಗೇಜ್​ಗಳು ಕುಟುಂಬ ಸದಸ್ಯರ ಜತೆಗೆ ಹೋಗಿದೆ. ಬಹಳ ವಿಚಾರಣೆಯ ಬಳಿಕ ಮಾರ್ಚ್ 31 ರ ತನಕ ತಾವು ವಿದೇಶ ಪ್ರವಾಸ ಮಾಡುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳಿಗೆ ಥ್ಯಾಂಕ್ಸ್ ಹೇಳ್ತೇನೆ ಎಂದು ವಾನಿ ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದಾರೆ.

    ಇದನ್ನೂ ಓದಿ: ಪಾಕ್​ ಲಾಂಚ್​ ಪ್ಯಾಡ್​, ಬಂಕರ್​ಗಳನ್ನು ಹೊಡೆದುರುಳಿಸಿದ ಸೇನೆ; ಕದನ ವಿರಾಮ ಉಲ್ಲಂಘನೆ ಮಾಡಿದ್ದಕ್ಕೆ ತಕ್ಕ ಪಾಠ ಕಲಿಸಿದ ಭಾರತ

    ವಿದೇಶ ಪ್ರವಾಸ ನಿಷೇಧಿತರ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಉಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಹೆಸರು ಇಲ್ಲ. ಆದರೆ, ಬಹುತೇಕ ಮಾಜಿ ಶಾಸಕರು, ಮಾಜಿ ಸಚಿವರ ಹೆಸರುಗಳಿವೆ. ಇವರೆಲ್ಲರೂ ಬೇರೆ ಬೇರೆ ಪಕ್ಷಗಳಿಗೆ ಸೇರಿದವರು. ಜಮ್ಮು-ಕಾಶ್ಮೀರ ಆಡಳಿತ 37 ನಾಯಕರ ಪಟ್ಟಿಯನ್ನು ಸಿದ್ಧಪಡಿಸಿ ವಿದೇಶ ಪ್ರವಾಸ ತಡೆಗೆ ಕಳೆದ ವರ್ಷ ಆಗಸ್ಟ್ ನಲ್ಲೇ ಸೂಚನೆ ನೀಡಿತ್ತು. ಅಲಿ ಮೊಹಮ್ಮದ್ ಸಾಗರ್, ಅಬ್ದುಲ್ ರಹೀಂ ರಾಥರ್​, ನಯೀಂ ಅಖ್ತರ್​, ಸಜ್ಜದ್ ಲೋನ್​, ಬಿಲಾಲ್ ಲೋನ್, ವಾನಿ, ಬಷರತ್ ಬುಖಾರಿ ಸೇರಿ ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಜೆಕೆ ಪೀಪಲ್ಸ್ ಕಾನ್ಫರೆನ್ಸ್ ನ ವಿವಿಧ ನಾಯಕರ ಹೆಸರು ಪಟ್ಟಿಯಲ್ಲಿದೆ. ಪರಾಮರ್ಶಿಸಿ ಕೆಲವರ ಹೆಸರನ್ನು ಕೈಬಿಡಲಾಗಿದ್ದು, ಸದ್ಯ 33 ನಾಯಕರ ವಿದೇಶ ಪ್ರವಾಸಕ್ಕೆ ನಿಷೇಧವಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)

    ಬಿಹಾರ ಸರ್ಕಾರ ರಚನೆ: ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ – ಭಾನುವಾರ ಎನ್​ಡಿಎ ಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts