More

    ಮಾಜಿ ನಕ್ಸಲ್ ನಾಯಕ ಬಿಜಿಕೆ ಕೋರ್ಟ್‌ಗೆ ಹಾಜರು

    ಶಿವಮೊಗ್ಗ: ಮಾವೋವಾದಿಗಳ ಮಾಜಿ ನಾಯಕ ಬಿ.ಜಿ.ಕೃಷ್ಣಮೂರ್ತಿ ಅವರನ್ನು ಬುಧವಾರ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಶಿವಮೊಗ್ಗದ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರವೂ ಕೃಷ್ಣಮೂರ್ತಿ ವಿಚಾರಣೆ ಎದುರಿಸಲಿದ್ದಾರೆ.

    ತೀರ್ಥಹಳ್ಳಿ ತಾಲೂಕಿನ ಆಗುಂಬೆ ಠಾಣಾ ವ್ಯಾಪ್ತಿಯ ಮೂರರ ಪೈಕಿ ಎರಡು ಪ್ರಕರಣಗಳ ವಿಚಾರಣೆಗೆ ಪೊಲೀಸರನ್ನು ಕೃಷ್ಣಮೂರ್ತಿ ಅವರನ್ನು ಕರೆತಂದಿದ್ದರು. ವಿಚಾರಣೆ ಬಳಿಕ ಪುನಃ ಅವರನ್ನು ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದರು.
    2021ರ ನವೆಂಬರ್‌ನಲ್ಲಿ ಕೇರಳದಲ್ಲಿ ಬಂಧನವಾಗಿದ್ದ ಕೃಷ್ಣಮೂರ್ತಿ ಅವರನ್ನು 2007, 2009 ಮತ್ತು 2021ರ 3 ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರನ್ನು ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರಪಡಿಸಲಾಯಿತು. ಅವರ ಮೇಲೆ ರಾಜ್ಯದ ವಿವಿಧೆಡೆ 62 ಪ್ರಕರಣಗಳು ದಾಖಲಾಗಿವೆ. ರಾಜಧಾನಿ ಬೆಂಗಳೂರಿನಲ್ಲಿ 18, ಕೇರಳದಲ್ಲಿ 4, ಉಡುಪಿ, ಕಾರ್ಕಳ, ಶೃಂಗೇರಿ, ತೀರ್ಥಹಳ್ಳಿ ಸೇರಿ ಹಲವು ಪ್ರಕರಣಗಳು ದಾಖಲಾಗಿವೆ.
    ಬಿ.ಜಿ.ಕೃಷ್ಣಮೂರ್ತಿ ಅವರ ಪರ ವಕಾಲತ್ತು ವಹಿಸಿರುವ ವಕೀಲ ಕೆ.ಪಿ.ಶ್ರೀಪಾಲ್ ಮಾತನಾಡಿ, ಬಿ.ಜಿ.ಕೃಷ್ಣಮೂರ್ತಿ ಅವರ ವಿರುದ್ಧ ಆಗುಂಬೆ ಾರೆಸ್ಟ್ ಗೇಟ್ ಧ್ವಂಸ, ಬಿದರಗೂಡು ಅರುಣ್ ಎಂಬುವರ ಮನೆ ದರೋಡೆ ಹಾಗೂ ಹೊಸಗದ್ದೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗುಂಬೆ ಠಾಣೆಲ್ಲಿ ಕೇಸ್ ದಾಖಲಾಗಿವೆ. ಬುಧವಾರ ಫಾರೆಸ್ಟ್ ಗೇಟ್ ಧ್ವಂಸ ಮತ್ತು ಬಿದರಗೋಡು ಮನೆ ದರೋಡೆ ಪ್ರಕರಣಗಳಲ್ಲಿ ಮೊದಲ ಆರೋಪಿಯಾಗಿರುವ ಸಂಬಂಧ ವಿಚಾರಣೆ ನಡೆಯಿತು ಎಂದರು.
    ಬಸ್ ಸುಟ್ಟ ಪ್ರಕರಣ ಕುರಿತು ಗುರುವಾರ ವಿಚಾರಣೆ ನಡೆಯಲಿದೆ. ಈ ಪ್ರಕರಣದಲ್ಲಿ ಕೃಷ್ಣಮೂರ್ತಿ 3ನೇ ಆರೋಪಿಯಾಗಿದ್ದರೆ, ಹೊಸಗದ್ದೆ ಪ್ರಭಾ ಮೊದಲನೇ ಆರೋಪಿಯಾಗಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts