More

    ಕಾರ್ಮಿಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ

    ಗಂಗಾವತಿ: ಸಂಘಟನಾತ್ಮಕವಾಗಿ ಹಕ್ಕುಗಳನ್ನು ಪಡೆಯಬೇಕಿದ್ದು, ಸಂಘದ ಚಟುವಟಿಕೆಗಳಿಗೆ ನಿರಂತರ ಬೆಂಬಲ ನೀಡಲಾಗುವುದು ಎಂದು ಮಾಜಿ ಶಾಸಕ ಪರಣ್ಣಮುನವಳ್ಳಿ ಹೇಳಿದರು.

    ನಗರದ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಕಲ್ಯಾಣ ಕರ್ನಾಟಕ ವೈರ್‌ಮನ್ ಕಾರ್ಮಿಕರ ಸಂಘ ಭಾನುವಾರ ಉದ್ಘಾಟಿಸಿ ಮಾತನಾಡಿದರು.

    ಕಾರ್ಮಿಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕಿದ್ದು, ಯೋಜನೆಗಳ ಅನುಷ್ಠಾನ ಮೂಲಕ ಪರಿಹಾರ ನೀಡಬೇಕಿದೆ. ಹೋರಾಟದಿಂದ ಎಲ್ಲವನ್ನೂ ಪಡೆಯಲು ಸಾಧ್ಯವಿದ್ದು, ಸಂಘದ ಯಾವುದೇ ಹೋರಾಟಕ್ಕೂ ಸದಾ ಬೆಂಬಲವಾಗಿ ನಿಲ್ಲುವೆ. ಬೆಳಕು ನೀಡುವ ಸಂಘದ ಸದಸ್ಯರು ಬದುಕು ಉಜ್ವಲವಾಗಲಿ ಎಂದರು.

    ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಮಾತನಾಡಿ, ಕಾರ್ಮಿಕರು ಪರಿಸ್ಥಿತಿ ಅನುಗುಣ ತಾಂತ್ರಿಕತೆಯತ್ತ ಗುರುತಿಸಿಕೊಳ್ಳಬೇಕಿದ್ದು, ದುಡಿವ ವರ್ಗ ಸೂರಿಗಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ಕಾರ್ಮಿಕರ ಬೆವರಿನ ಲದಿಂದ ಶ್ರೀಮಂತರು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಿದೆ ಎಂದರು.
    ಕಾರ್ಮಿಕ ನಿರೀಕ್ಷಕ ಗೋಪಾಲ್ ಬಿ.ಧೂಪದ್ ಮಾತನಾಡಿ, ಅರ್ಹರ ಕೈಯಲ್ಲಿ ಸಂಘಟನೆ ನೀಡಬೇಕಿದ್ದು, ನಿಜವಾದ ಕಾರ್ಮಿಕರಿಗೆ ಸದಸ್ಯತ್ವ ನೀಡಿ, ಕಾಟಾಚಾರಕ್ಕೆಂಬಂತೆ ಸಂಘಟನೆಯಾಗಬಾರದು ಎಂದರು.

    ಹೆಬ್ಬಾಳ ಬೃಹನ್ಮಠದ ನಾಗಭೂಷಣ ಸ್ವಾಮೀಜಿ, ವೈರಮನ್ ಸಂಘದ ತಾಲೂಕು ಅಧ್ಯಕ್ಷ ಬಿ.ರಮೇಶ, ಕಲಾವಿದ ನಾಗರಾಜ ಇಂಗಳಗಿ, ಸದಸ್ಯ ಸಂಗಮೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts