More

    ಮಠಗಳು ಆಧ್ಯಾತ್ಮಿಕ ಕೇಂದ್ರಗಳಾಗಲಿ

    ಸುರಪುರ: ಮಠಗಳು ಆಧ್ಯಾತ್ಮಿಕ ಕೇಂದ್ರಗಳಾಗುವ ಮೂಲಕ ಜನರ ಲೌಕಿಕ ಬದುಕಿನೊಂದಿಗೆ ಆಧ್ಯಾತ್ಮಿಕ ರುಚಿ ಉಣಬಡಿಸಬೇಕು ಎಂದು ಮಾಜಿ ಸಚಿವ ಶರಣಪ್ರಕಾಶ ಪಾಟೀಲ್ ಹೇಳಿದರು.

    ತಾಲೂಕಿನ ಲಕ್ಷ್ಮಿಪುರದ ಮರಡಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಬಸವಲಿಂಗದೇವರು ಗುರು ಪಟ್ಟಾಧಿಕಾರ ಮಹೋತ್ಸವ ನಿಮಿತ್ತ ಮಹಾ ಶಿವರಣೆ ಹೇಮರಡ್ಡಿ ಮಲ್ಲಮ್ಮನವರ ಮಹಾಪುರಾಣ ಮಂಗಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಠಮಾನ್ಯಗಳು ಜನರಲ್ಲಿ ಲೌಕಿಕ ಬದುಕಿನೊಂದಿಗೆ ಆಧ್ಯಾತ್ಮದತ್ತ ರುಚಿ ಊಣಬಡಿಸುವ ಕೇಂದ್ರವಾಗಬೇಕು ಇದರಿಂದ ನಮ್ಮ ಯುವ ಸಮುದಾಯಕ್ಕೆ ನಮ್ಮ ಸಂಸ್ಕೃತಿ ಕಲಿಸಿಕೊಡುವ ಮಾರ್ಗದರ್ಶನ ಕೇಂದ್ರವಾಗಬೇಕಾಗಿದೆ ಎಂದರು.

    ನಮ್ಮಲ್ಲಿ ಅನೇಕ ಶರಣರು ಸಮಾಜದ ಬಗ್ಗೆ ಹಾಗೂ ನಾವು ಹೇಗೆ ಬದುಕಬೇಕು ಎನ್ನುವುದರ ಕುರಿತು ಅನೇಕ ವಚನಗಳ ರೂಪದಲ್ಲಿ ತಿಳಿಸಿದ್ದಾರೆ ಅವುಗಳನ್ನು ಅರ್ಥಮಾಡಿಕೊಂಡು ಬದುಕನ್ನು ಸಾಗಿಸಬೇಕು ಎಂದು ತಿಳಿಸಿದರು.

    ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅಧ್ಯಕ್ಷತೆ ವಹಿಸಿದ್ದರು. ಕಂಠಿಮಠ ಮುದ್ನೂರಿನ ಚನ್ನಮಲ್ಲಿಕಾರ್ಜುನ ಶ್ರೀ, ರುಕ್ಮಾಪುರ ಹೀರೆಮಠದ ಗುರುಶಾಂತಮೂರ್ತಿ ಶ್ರೀ, ಲಕ್ಷ್ಮೀಪುರದ ಬಸವಲಿಂಗ ದೇವರು, ಅಧ್ಯಕ್ಷ ಸುರೇಶ ಸಜ್ಜನ, ಮಲ್ಲಣ್ಣ ಸಾಹುಕಾರ ಮುದೋಳ, ಅಬ್ದುಲ್ ಗಫಾರ ನಗನೂರಿ, ಸೂಗೂರೇಶ ವಾರದ, ಮಂಜುನಾಥ ಜಾಲಹಳ್ಳಿ ಇತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts