More

    ಬಾಕಿ ಇರುವ ರೈತರ ಬೆಳೆ ವಿಮಾ ಪರಿಹಾರ;ಪೂರ್ಣ ಪ್ರಮಾಣದಲ್ಲಿ ಪಾವತಿಗೆ ತಾಕೀತು;ಬ್ಯಾಂಕ್, ಆಧಾರ್ ಲಿಂಕ್ ಮಾಡಲು ಸೂಚನೆ

    ಬೆಂಗಳೂರು:
    ರೈತರ ಬೆಳೆ ವಿಮೆ ಪರಿಹಾರ ಹಣ ಪೂರ್ಣ ಪ್ರಮಾಣದಲ್ಲಿ ಪಾವತಿಯಾಗುವಂತೆ ಎಲ್ಲಾ ಜಿಲ್ಲೆಯಲ್ಲಿಯೂ ಕೃಷಿ ಇಲಾಖೆ ಕಟ್ಟು ನಿಟ್ಟಿನ ಕ್ರಮ ವಹಿಸಬೇಕು ಎಂದು ಸರ್ಕಾರ ಸೂಚಿಸಿದೆ.
    ಕಳೆದ 2019-20 ರಿಂದ 3 ವರ್ಷಗಳಲ್ಲಿ ರಾಜ್ಯದ 10,053 ರೈತರಿಗೆ 9.68 ಕೋಟಿ ರೂ ಬೆಳೆ ವಿಮೆ ಪಾವತಿ ಆಗುವುದು ಇನ್ನೂ ಬಾಕಿ ಇದೆ. ಆಧಾರ್ ಲಿಂಕ್ ಅಥವಾ ತಾಂತ್ರಿಕ ಕಾರಣಕ್ಕಾಗಿ ಈ ಹಣ ರೈತರ ಅಕೌಂಟ್‌ಗಳಿಗೆ ಆನ್ ಲೈನ್‌ನಲ್ಲಿ ಪಾವತಿ ಆಗುತ್ತಿಲ್ಲ ಎನ್ನುವ ವಿವರಣೆ ನೀಡಲಾಗಿದೆ.
    ಆದರೆ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ರೈತರು ಪ್ರೀಮಿಯಂ ಕಟ್ಟಿ ವಿಮೆ ವ್ಯಾಪ್ತಿಗೆ ಒಳಪಟ್ಟ ಮೇಲೆ ಅವರಿಗೆ ಆ ಸೌಲಭ್ಯ ಲಭ್ಯವಾಗುವಂತೆ ಮಾಡಬೇಕಾದ್ದು ನಮ್ಮ ಕರ್ತವ್ಯ. ವಿಮೆ ಮಾಡಿಸಿದವರಿಗೆ ಬೆಳೆ ನಷ್ಟವಾದಾಗಲೂ ನಾವು ವಿಮೆ ಪರಿಹಾರ ಹಣವನ್ನು ಸರಿಯಾಗಿ ಕೊಡಿಸದೆ ಇದ್ದರೆ ಯಾವ ನ್ಯಾಯ? ಆದ್ದರಿಂದ ಈ ಬಗ್ಗೆ ಮೀಟಿಂಗ್‌ಗಳಲ್ಲಿ ಸಬೂಬು ಹೇಳದೆ ಎಲ್ಲೆಲ್ಲಿ ಸಮಸ್ಯೆಯಾಗಿದೆ ಎನ್ನುವುದನ್ನು ಪ್ರತಿ ತಾಲೂಕುವಾರು ಪತ್ತೆ ಮಾಡಿ ಖುದ್ದು ರೈತರನ್ನು ಭೇಟಿ ಮಾಡಿ ಸರಿಪಡಿಸುವಂತೆ ಸೂಚಿಸಲಾಗಿದೆ.
    ಪ್ರತಿ ಲ್ಲೆಯಲ್ಲಿಯೂ ಬ್ಯಾಂಕ್ ಮತ್ತು ವಿಮಾ ಕಂಪನಿಗಳ ಜೊತೆಗೆ ಜಂಟಿ ಸಭೆ ನಡೆಸಿ, ಲೋಪ ದೋಷಗಳನ್ನು ಸರಿಪಡಿಸಿ, ರೈತರಿಗೆ ಸೇವೆ ನೀಡಬೇಕು ಎಂದು ತಾಕೀತು ಮಾಡಲಾಗಿದೆ.
    ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಸಲ್ ಭೀಮಾ ಯೋಜನೆಯ ಪ್ರಯೋಜನ ಪ್ರತಿ ರೈತರಿಗೆ ತಲುಪಬೇಕು. ಅದಕ್ಕಾಗಿ ಜಾಗೃತಿ ಅಭಿಯಾನವನ್ನು ಗ್ರಾಪಂ ಮಟ್ಟದಲ್ಲಿ ನಡೆಸಬೇಕು ಎಂದು ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts