More

    ಮಾಜಿ ಕ್ರಿಕೆಟಿಗ ರಾಬಿನ್ ಸಿಂಗ್ ಕಾರು ಜಪ್ತಿ ಮಾಡಿದ ಚೆನ್ನೈ ಪೊಲೀಸ್

    ಚೆನ್ನೈ: ತರಕಾರಿ ತರುವುದಕ್ಕೆ ಅಡ್ಯಾರ್​ನಿಂದ ಉತಾಂಡಿಗೆ ಹೋಗುತ್ತಿದ್ದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ರಾಬಿನ್ ಸಿಂಗ್ ಅವರ ಕಾರನ್ನು ಚೆನ್ನೈ ಪೊಲೀಸರು ಜಪ್ತಿ ಮಾಡಿರುವುದು ಈಗ ಸುದ್ದಿಯಲ್ಲಿದೆ. ತಮಿಳುನಾಡಿನಲ್ಲಿ ಕರೊನಾ ಸೋಂಕು ಹೆಚ್ಚಾಗಿದ್ದು, ಅದು ಹರಡದಂತೆ ತಡೆಯುವುದಕ್ಕಾಗಿ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿ ಪಾಲಿಸುವಂತೆ ಎಲ್ಲರಿಗೂ ಸೂಚಿಸಿದೆ. ಆದರೆ ರಾಬಿನ್ ಅದನ್ನು ಉಲ್ಲಂಘಿಸಿದ್ದರು.

    ತಮಿಳುನಾಡಿನಲ್ಲಿ ಲಾಕ್​ಡೌನ್​ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಈ ನಿಯಮಾವಳಿ ಪ್ರಕಾರ ಜನರು ಅಗತ್ಯ ವಸ್ತುಗಳ ಖರೀದಿಗೆ 2 ಕಿ.ಮೀ. ಸುತ್ತಳತೆಯಲ್ಲಿ ಮಾತ್ರ ಸಂಚರಿಸಬಹುದಾಗಿದೆ. ರಾಬಿನ್ ಸಿಂಗ್ ಈ ನಿಯಮ ಮೀರಿ ಅಡ್ಯಾರ್​ನಿಂದ 15 ಕಿ.ಮೀ.ಗೂ ಹೆಚ್ಚು ದೂರದ ಉತಾಂಡಿಗೆ ಕಾರಿನಲ್ಲಿ ಪ್ರಯಾಣಿಸಿದ್ದರು.

    ಇದನ್ನೂ ಓದಿ: ಎಸ್​ಎಸ್​ಎಲ್​ಸಿ ಪರೀಕ್ಷಾ ಕೇಂದ್ರದಲ್ಲಿ ಎಡವಟ್ಟು, ವಿದ್ಯಾರ್ಥಿಗಳಲ್ಲಿ ಹೆಚ್ಚಿದೆ ಆತಂಕ

    ಪೊಲೀಸ್ ಅಧಿಕಾರಿಯೊಬ್ಬರ ಹೇಳಿಕೆ ಪ್ರಕಾರ, ಶನಿವಾರ ಬೆಳಗ್ಗೆ ಈ ಘಟನೆ ನಡೆದಿದೆ. ರಾಬಿನ್ ಸಿಂಗ್​ ಈಸ್ಟ್ ಕೋಸ್ಟ್ ರೋಡ್​ ನಿಂದ ಆಗಮಿಸಿದ್ದು, ಪೊಲೀಸ್ ತಪಾಸಣೆ ಸಂದರ್ಭದಲ್ಲಿ ಅವರ ಬಳಿಕ ಇ-ಪಾಸ್ ಅಥವಾ ಅವರು ಕಾರಿನಲ್ಲಿ ಪ್ರಯಾಣಿಸುತ್ತಿರುವಂತಹ ತುರ್ತು ಏನು ಎಂಬಿತ್ಯಾದಿಗೆ ಉತ್ತರವಿರಲಿಲ್ಲ. ಆದ್ದರಿಂದ ಅವರ ಕಾರನ್ನು ಜಪ್ತಿ ಮಾಡಲಾಗಿದೆ. ಇಷ್ಟಾಗ್ಯೂ ಅವರು ಬಹಳ ಸಭ್ಯ ರೀತಿಯಲ್ಲೇ ಪೊಲೀಸರೊಂದಿಗೆ ಅವರು ವರ್ತಿಸಿದ್ದಾರೆ.

    ಚೆನ್ನೈನಲ್ಲಿ ಜೂನ್ 19ರಿಂದ 12 ದಿನಗಳ ಕಠಿಣ ಲಾಕ್​ಡೌನ್ ಚಾಲ್ತಿಯಲ್ಲಿದೆ. ಲಾಕ್​ಡೌನ್​ಗೂ ಮೊದಲೇ ಚೆನ್ನೈ ನಗರ ಪೊಲೀಸ್ ಆಯುಕ್ತ ಎ.ಕೆ.ವಿಶ್ವನಾಥನ್​ ಅವರು ನಿಯಮ ಪಾಲಿಸುವಂತೆ ನಾಗರಿಕರಲ್ಲಿ ಮನವಿ ಮಾಡಿದ್ದರು. ವಾಹನಗಳನ್ನು ಬಳಸದೆಯೇ ಮನೆ ಸಮೀಪದಲ್ಲೇ ಅಗತ್ಯವಸ್ತುಗಳನ್ನು ಖರೀದಿಸುವಂತೆ ಸೂಚಿಸಿದ್ದರು. (ಏಜೆನ್ಸೀಸ್)

    50ಸಾವಿರದ ಗಡಿ ದಾಟಿದ ಚಿನ್ನದ ದರ..ಮುಂದಿನ ವಾರ ಇನ್ನೂ ಹೆಚ್ಚಾಗುವ ನಿರೀಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts