More

    VIDEO| ಸಚಿನ್​ ತೆಂಡೂಲ್ಕರ್​ ಜತೆ ಬಾಕ್ಸಿಂಗ್​ ಮಾಡಿದ ಪುಟ್ಟ ಬಾಲಕ: ಆತನ ಬಗ್ಗೆ ಸಚಿನ್​ ಹೇಳಿದ್ದೇನು ಗೊತ್ತಾ?

    ನವದೆಹಲಿ: ಕ್ರಿಕೆಟ್​ ಲೋಕದ ಮಾಂತ್ರಿಕ ಎನಿಸಿಕೊಂಡಿರುವ ಭಾರತೀಯ ಕ್ರಿಕೆಟ್​ ತಂಡದ ಆಟಗಾರ ಸಚಿನ್​ ತೆಂಡೂಲ್ಕರ್​ ಜತೆ ಪುಟಾಣಿ ಬಾಲಕನೊಬ್ಬ ಬಾಕ್ಸಿಂಗ್​ ಮಾಡಿದ್ದಾನೆ. ಆತನ ಬಾಕ್ಸಿಂಗ್​ ಶೈಲಿಯನ್ನು ಮೆಚ್ಚಿರುವ ಸಚಿನ್,​ ಪೋರನ ಬಗ್ಗೆ ಸಿಹಿಯಾದ ಮಾತುಗಳನ್ನಾಡಿದ್ದಾರೆ.

    ನಿನ್ನೆ (ಮಾ.8) ಸಚಿನ್​ ತೆಂಡೂಲ್ಕರ್​ ತನ್ನ ಸಹ ಆಟಗಾರ ಇರ್ಫಾನ್​ ಪಠಾಣ್​ ಅವರ ಮಗ ಇಮ್ರಾನ್​ನನ್ನು ಭೇಟಿ ಮಾಡಿದ್ದಾರೆ. ಮೂರು ವರ್ಷದ ಆ ಪುಟ್ಟ ಬಾಲಕನೊಂದಿಗೆ ಮಗುವಾಗಿ ಕಾಲ ಕಳೆದಿದ್ದಾರೆ. ಆಟದ ಒಂದು ಭಾಗವಾಗಿ ಇಮ್ರಾನ್​ ಸಚಿನ್​ಗೆ ಬಾಕ್ಸಿಂಗ್​ ಪಂಚ್​ಗಳನ್ನು ನೀಡಿದ್ದಾನೆ.

    ತನ್ನ ಮಗ ಸಚಿನ್​ಗೆ ಪಂಚ್​ ಮಾಡುವ ವಿಡಿಯೋವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿರುವ ಇರ್ಫಾನ್​, ಅವನು ಏನು ಮಾಡಿದ್ದಾನೆ ಅವನಿಗೆ ತಿಳಿದಿಲ್ಲ, ದೊಡ್ಡವನಾದ ಮೇಲೆ ಅವನಿಗೆ ಅದು ತಿಳಿಯುತ್ತದೆ ಎಂದು ಹೇಳಿಕೊಂಡಿದ್ದಾರೆ. ಇರ್ಫಾನ್​ ಅವರ ಈ ಪೋಸ್ಟ್​ನ್ನು ಶೇರ್​ ಮಾಡಿರುವ ಸಚಿನ್​, “ಮಕ್ಕಳೊಂದಿಗೆ ಆಟವಾಡಲು ಯಾವಾಗಲೂ ಖುಷಿಯಾಗುತ್ತದೆ. ನಿನ್ನ ತೋಳುಗಳು ಖಂಡಿತವಾಗಿಯೂ ಒಂದು ದಿನ ನಿನ್ನ ಅಪ್ಪ ಇರ್ಫಾನ್​ ಮತ್ತು ನನ್ನ ತೋಳುಗಳನ್ನು ಮೀರಿ ಬೆಳೆಯುತ್ತದೆ.” ಎಂದು ಹೇಳಿದ್ದಾರೆ.

    ಸದ್ಯ ಸಚಿನ್​ ತೆಂಡೂಲ್ಕರ್​ ಮತ್ತು ಇರ್ಪಾನ್​ ಪಠಾಣ್​ ರೋಡ್​ ಸೇಫ್ಟಿ ವರ್ಲ್ಡ್ ಸೀರಿಸ್​ನಲ್ಲಿ ಭಾಗವಹಿಸುತ್ತಿದ್ದಾರೆ. ಭಾರತ, ಆಸ್ಟ್ರೇಲಿಯಾ, ಶ್ರೀಲಂಕಾ, ವೆಸ್ಟ್​ ಇಂಡೀಸ್​ ಮತ್ತು ಸೌತ್​ ಆಫ್ರಿಕಾದ ಕ್ರಿಕೆಟ್​ ತಂಡಗಳು ಈ ಸೀರಿಸ್​ನಲ್ಲಿ T20 ಆಟವನ್ನು ಆಡುತ್ತಿವೆ. (ಏಜೆನ್ಸೀಸ್​)

    ಇಂದಿನಿಂದ ರಣಜಿ ಟ್ರೋಫಿ ಫೈನಲ್ ಪ್ರಶಸ್ತಿಗಾಗಿ ಸೌರಾಷ್ಟ್ರ-ಬಂಗಾಳ ಕಾದಾಟ, ಆತಿಥೇಯರಿಗೆ ಚೇತೇಶ್ವರ ಪೂಜಾರ ಬಲ 

    ಹಾರ್ದಿಕ್, ಧವನ್, ಭುವಿ ವಾಪಸ್​; ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts