More

    ಹಾಲ್ ಆಫ್ ಫೇಮ್ ಸೇರಿದ ಭಾರತದ ದಿಗ್ಗಜ ಟೆನಿಸ್ ಆಟಗಾರರು: ಪ್ರಶಸ್ತಿಗೆ ಭಾಜನರಾದ ಏಷ್ಯಾದ ಮೊದಲ ಪುರುಷ ಟೆನಿಸ್ ತಾರೆಯರು

    ನವದೆಹಲಿ: ಭಾರತದ ದಿಗ್ಗಜ ಆಟಗಾರರಾದ ಲಿಯಾಂಡರ್ ಪೇಸ್, ವಿಜಯ್ ಅಮೃತ್‌ರಾಜ್‌ಗೆ ಅಂತಾರಾಷ್ಟ್ರೀಯ ಟೆನಿಸ್ ಹಾಲ್ ಆಫ್ ಫೇಮ್ ಗೌರವ ಸಂದಿದೆ. ಇದರೊಂದಿಗೆ ಹ ಹಾಲ್ ಆಫ್ ಫೇಮ್ಗೆ ಸೇರಿದ ಏಷ್ಯಾದ ಮೊದಲ ಪುರುಷ ಟೆನಿಸ್ ಪಟುಗಳು ಎನಿಸಿದ್ದಾರೆ. ಪತ್ರಕರ್ತ ಮತ್ತು ಬರಹಗಾರ ಇಂಗ್ಲೆಂಡ್‌ನ ರಿಚರ್ಡ್ ಇವಾನ್ಸ್ ಹಾಲ್ ಆ್ ೇಮ್‌ಗೆ ಪಾತ್ರರಾದ ಮತ್ತೋರ್ವ ಸಾಧಕರೆನಿಸಿದ್ದಾರೆ. ಭಾರತ ಈ ಪ್ರಶಸ್ತಿ ಗೌರವ ಪಡೆದ 28ನೇ ರಾಷ್ಟ್ರ ಎನಿಸಿದೆ.

    ಮೂರು ದಶಕಗಳ ಕಾಲ ಟೆನಿಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಲಿಯಾಂಡರ್ ಪೇಸ್, ಡಬಲ್ಸ್ ಹಾಗೂ ಮಿಶ್ರ ಡಬಲ್ಸ್‌ನಲ್ಲಿ 18 ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. 462 ವಾರಗಳ ಕಾಲ ಎಟಿಪಿ ರ‌್ಯಾಂಕಿಂಗ್‌ನಲ್ಲಿ ಅಗ್ರ -10ರಲ್ಲಿ ಕಾಣಿಸಿಕೊಂಡಿದ್ದ ಪೇಸ್, 37 ವಾರ ಅಗ್ರಸ್ಥಾನದಲ್ಲಿದ್ದರು. ಸತತ ಏಳು ಒಲಿಂಪಿಕ್ಸ್ ಕೂಟದಲ್ಲಿ ಭಾಗವಹಿಸಿದ್ದ ಪೇಸ್,1996ರ ಅಟ್ಲಾಂಟ ಗೇಮ್ಸ್‌ನ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಇದುವರೆಗೆ ಒಲಿಂಪಿಕ್ಸ್ ಟೆನಿಸ್‌ನಲ್ಲಿ ಭಾರತಕ್ಕೆ ದೊರೆತಿರುವ ಮೊದಲ ಹಾಗೂ ಏಕೈಕ ಪದಕ ಇದಾಗಿದೆ. 45 ಡೇವಿಸ್ ಕಪ್ ಡಬಲ್ಸ್ ಪಂದ್ಯ ಜಯಿಸಿದ ಸಾಧನೆಯೂ ಪೇಸ್ ಅವರದಾಗಿದೆ.

    ಆಟಗಾರರ ವಿಭಾಗದಲ್ಲಿ ಲಿಯಾಂಡರ್ ಪೇಸ್, ಟೆನಿಸ್‌ಗೆ ಕೊಡುಗೆ ನೀಡಿದವರ ವಿಭಾಗದಲ್ಲಿ ವಿಜಯ್ ಅಮೃತ್‌ರಾಜ್ ಹಾಗೂ ಇವಾನ್ಸ್‌ಗೆ ಹಾಲ್ ೇಮ್ ಗೌರವ ನೀಡಲಾಗಿದೆ. 1970 ಹಾಗೂ 1980ರಲ್ಲಿ ವೃತ್ತಿಪರ ಟೆನಿಸ್ ಆಟಗಾರನಾಗಿದ್ದ ವಿಜಯ್ ಅಮೃತ್‌ರಾಜ್ 1974,1987ರಲ್ಲಿ ಭಾರತ ಡೇವಿಸ್ ಕಪ್ ೈನಲ್ ಆಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 1960ರಿಂದ ಟೆನಿಸ್ ಟೂರ್ನಿಗಳ ವರದಿ ಮಾಡಿರುವ ಇವಾನ್ಸ್, 20ಕ್ಕೂ ಹೆಚ್ಚು ಪುಸಕ್ತಗಳನ್ನು ಪ್ರಕಟಿಸಿದ್ದಾರೆ.

    ಜೀವನದಲ್ಲಿ ನನಗೆ ಎಲ್ಲವನ್ನೂ ನೀಡಿದ ಮತ್ತು ಕಲಿಸಿದ ಕ್ರೀಡೆಯಲ್ಲಿ ದಶಕಗಳ ಕಾಲ ನನ್ನ ದೇಶಕ್ಕಾಗಿ ಆಡುವುದು ಹೆಮ್ಮೆಯ ವಿಷಯ. ಇದು ನನಗೆ ಸಿಕ್ಕ ಜೀವನ ಶ್ರೇಷ್ಠ ಗೌರವವಾಗಿದೆ. ಹಾಲ್ ಆ್ ೇಮ್‌ಗೆ ಸೇರ್ಪಡೆಯಾಗಿರುವುದು ಕೋಟ್ಯಂತರ ಭಾರತೀಯರಿಗೆ ಸಲ್ಲಬೇಕಾಗಿರುವ ಗೌರವ.
    ಲಿಯಾಂಡರ್ ಪೇಸ್, ಮಾಜಿ ಟೆನಿಸ್ ಆಟಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts