More

    50 ಶಾಸಕರೊಂದಿಗೆ ಕೇಂದ್ರದ ಕದ ತಟ್ಟಿದ ಕಾಂಗ್ರೆಸ್​ ನಾಯಕ! ಹೊಸ ಬಾಂಬ್​ ಸಿಡಿಸಿದ ಎಚ್​ಡಿಕೆ

    ಹಾಸನ: ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುವಂತಹ ಸಂಗತಿಯೊಂದನ್ನು ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಬಹಿರಂಗಪಡಿಸಿದ್ದಾರೆ. ಕಾಂಗ್ರೆಸ್​ ಸರ್ಕಾರದ ನಾಯಕರೊಬ್ಬರು ತಮ್ಮೊಂದಿಗೆ 50 ಶಾಸಕರನ್ನು ಕರೆತರುವುದಾಗಿ ಕೇಂದ್ರ ಸರ್ಕಾರದ ಕದ ತಟ್ಟಿದ್ದಾರೆ ಎಂದು ಎಚ್​ಡಿಕೆ ಹೊಸ ಬಾಂಬ್​ ಸಿಡಿಸಿದ್ದು, ರಾಜಕೀಯ ವಲಯದಲ್ಲಿ ಇದೀಗ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

    ಹಾಸನದಲ್ಲಿ ಇಂದು (ಡಿ.10) ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಚ್​ಡಿಕೆ, ಈ ಸರ್ಕಾರದಲ್ಲೂ ಕಮಿಷನ್​ ಪದ್ಧತಿ ಇದೆ. ಇಲ್ಲೂ ಕೂಡ ಭ್ರಷ್ಟಾಚಾರ ದೊಡ್ಡದಾಗಿಯೇ ನಡೆಯುತ್ತಿದೆ. ಕಮಿಷನ್​ ಹೊಡೆಯುವುದನ್ನು ನಿಲ್ಲಿಸಿ, ಅಭಿವೃದ್ಧಿ ಕಡೆ ಗಮನ ಕೊಡಲಿ. ಇದೀಗ ಮತ್ತೆ 85 ಸಾವಿರ ಕೋಟಿ ಸಾಲ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಇದು ಅಂತಿಮವಾಗಿ ಎಲ್ಲಿಗೆ ಬಂದು ನಿಲ್ಲುತ್ತದೆ ಎಂದು ಕಾದುನೋಡಬೇಕಿದೆ. ಈಗಾಗಲೇ ಸರ್ಕಾರದ ವಿರುದ್ಧ ಅವರ ಪಕ್ಷದ ಒಳಗಡೆಯೇ ಒಬ್ಬೊಬ್ಬರಾಗಿ ಧ್ವನಿ ಎತ್ತುತ್ತಿದ್ದಾರೆ ಎಂದರು.

    ನಾಯಕರೊಬ್ಬರು ನಾನು 50 ಶಾಸಕರನ್ನು ಕರೆದುಕೊಂಡು ಬರುತ್ತೇನೆ ಎಂದು ಕೇಂದ್ರ ಸರ್ಕಾರ ಬಳಿ ವ್ಯಾಪಾರ ಮಾಡಲು ಹೋಗಿದ್ದಾರೆ. ಅವರು ಮಾಡಿರುವ ಅಕ್ರಮಗಳನೆಲ್ಲ ಸರಿಪಡಿಸಿಕೊಳ್ಳಲು ಕೇಂದ್ರದ ಮುಂದೆ ಹೋಗಿದ್ದಾರೆ ಎಂದು ಎಚ್​ಡಿಕೆ ಹೇಳಿದರು. ಆದರೆ, ಆ ನಾಯಕನ ಹೆಸರನ್ನು ಬಹಿರಂಗಪಡಿಸಲಿಲ್ಲ. ಇದೀಗ ಯಾರು ಆ ನಾಯಕ ಯಾರು ಎಂಬ ಚರ್ಚೆ ಶುರುವಾಗಿದೆ.

    ಶಾಸಕರನ್ನು ಕರೆದುಕೊಂಡು ಬರ್ತೀನಿ ಅಂತ ಕೇಂದ್ರದ ನಾಯರಕನ್ನು ಕೇಳುವುದಕ್ಕೆ ಮೊನ್ನೆ ಯಾರೋ ಹೊಗಿದ್ದರು ಎಂದು ನನಗೆ ಯಾರೋ ಒಬ್ಬರು ಹೇಳಿದರು. ನಾನು ನಿಮ್ಮ ಜತೆ ಬಂದು ಬಿಡುತ್ತೇನೆ, ನನಗೆ ಐದಾರು ತಿಂಗಳು ರಿಲೀಫ್​ ಕೊಡಿ ಎಂದು ಕೇಳಿಕೊಂಡಿದ್ದಾರೆ. ಯಾರನ್ನು ಮುಂದೆ ಬಿಟ್ಟು ಇದನೆಲ್ಲ ನಡೆಸುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ಲೋಕಸಭಾ ಚುನಾವಣೆ ಮುಂಗಿದ ಬಳಿಕ ಎಲ್ಲವೂ ಗೊತ್ತಾಗಲಿದೆ. ಮಹಾರಾಷ್ಟ್ರದಲ್ಲಿ ಆದಂತೆ ಇಲ್ಲಿಯು ಸಹ ಯಾರಾದರೂ ಒಬ್ಬರು ದಂಗೆ ಏಳಲಿದ್ದಾರೆ. ಈ ದೇಶದಲ್ಲಿ ಇವತ್ತಿನ ರಾಜಕಾರಣ ನೋಡಿದಾಗ ಏನು ಬೇಕಾದರೂ ನಡೆಯಬಹುದು. ಇಲ್ಲಿ ಯಾರಿಗೂ ಪ್ರಾಮಾಣಿಕತೆ ಮತ್ತು ನಿಷ್ಠೆ ಎಂಬುದು ಉಳಿದಿಲ್ಲ. ಇವತ್ತು ಇಲ್ಲಿರುತ್ತಾರೆ, ಅನುಕೂಲ ಸಿಕ್ಕರೆ ನಾಳೆ ಇನ್ನೊಂದು ಕಡೆ ಹೋಗುತ್ತಾರೆ. ಹಲವಾರು ವರ್ಷಗಳಿಂದ ಇದು ನಡೆದುಕೊಂಡು ಬರುತ್ತಿದೆ ಎಂದರು.

    ಇದೇ ಸಂದರ್ಭದಲ್ಲಿ ಬಿಕೆ ಹರಿಪ್ರಸಾದ್ ಮತ್ತು ಸಿಎಂ ಸಿದ್ದರಾಮಯ್ಯ ನಡುವಿನ ಮುಸುಕಿನ ಗುದ್ದಾಟದ ಬಗ್ಗೆ ಮಾತನಾಡಿದ​ ಎಚ್​ಡಿಕೆ, ಕೇವಲ ಹರಿಪ್ರಸಾದ್​ ಅವರ ಹೆಸರನ್ನು ಮಾತ್ರ ಯಾಕೆ ಹೇಳುತ್ತೀರಾ? ಕಾಂಗ್ರೆಸ್​ನ ಪ್ರಮಾಣಿಕ, ನಿಷ್ಠಾವಂತ ಕಾರ್ಯಕರ್ತ ಎಂದು ಅವರೇ ಹೇಳಿಕೊಂಡಿದ್ದಾರೆ. ಆದರೆ, ಅವರನ್ನು ಕಡೆಗಣಿಸಿ ಈಡಿಗ ಸಮಾವೇಶ ನಡೆಸುತ್ತಿದ್ದಾರೆ. ಈ ಸಮಯದಲ್ಲಿ ಇಂತಹ ಸಮಾವೇಶಗಳು ಬೇಕಿತ್ತಾ? ರಾಜ್ಯದಲ್ಲಿ ಯಾವೆಲ್ಲ ಸಮಸ್ಯೆಗಳು ಇವೆಯೋ ಅದಕ್ಕೆ ಸಮಯ ಕೊಡಬೇಕಿದೆ. ಆದರೆ, ಇಬ್ಬರ ನಡುವೆ ಎತ್ತಿಕಟ್ಟುವುದನ್ನು ಎಷ್ಟು ದಿನ ಅಂತ ಮಾಡುತ್ತೀರಿ? ಇದೇನು ಶಾಶ್ವತವಾ? ಇಲ್ಲಿ ಯಾರಿಗೂ ಯಾವುದೂ ಶಾಶ್ವತ ಇಲ್ಲ ಎಂದರು.

    ಜಾತಿ ಗಣತಿ ವರದಿ ಬಗ್ಗೆ ಮಾತನಾಡಿದ ಎಚ್​​ಡಿಕೆ, ಆರ್ಥಿಕ ಮತ್ತು ಶೈಕ್ಷಣಿಕ ವಲಯದ ಬಗ್ಗೆ ಸಮೀಕ್ಷೆ ಮಾಡಿ. ಇದರಿಂದ ಜನರಿಗೆ ಅನುಕೂಲವಾಗುತ್ತದೆ. ಅದನ್ನು ಬಿಟ್ಟು ಜಾತಿ ಗಣತಿ ಮಾಡಿ ಜಾತಿ-ಜಾತಿಗಳ ಮಧ್ಯೆ ಒಡಕು ಉಂಟುಮಾಡಬೇಡಿ ಮತ್ತು ವೈಷ್ಯಮದ ಬೀಜ ಬಿತ್ತಬೇಡಿ ಎಂದರು. ಮುಸ್ಲಿಂ ಸಮುದಾಯಕ್ಕೆ​ 10 ಸಾವಿರ ಕೋಟಿ ನೀಡುವಲ್ಲಿ ನನಗೆ ಯಾವುದೇ ತಕರಾರು ಇಲ್ಲ. ಆದರೆ, ಹಿಂದುಗಳೆಂದರೆ, ಕೇವಲ ಮೇಲ್ವರ್ಗದವರು ಮಾತ್ರ ಇಲ್ಲ, ಅದರಲ್ಲಿ ದಲಿತರು ಮತ್ತು ಹಿಂದುಳಿದ ವರ್ಗದವರು ಕೂಡ ಸೇರುತ್ತಾರೆ. ಅವರ ಮೇಲೆ ಅಷ್ಟೊಂದು ಮುತುವರ್ಜಿ ಯಾಕಿಲ್ಲ ನಿಮಗೆ ಎಂದು ಪ್ರಶ್ನೆ ಮಾಡಿದರು.

    ವಿನಯ್​ಗೆ ಮನುಷ್ಯತ್ವ ಇಲ್ಲ ಅನ್ನೋದಾದ್ರೆ ಇವರು ಮಾಡಿದ್ದು ಸರಿನಾ? ಸಂಗೀತಾ ವಿರುದ್ಧವೂ ಆಕ್ರೋಶ!

    900 ಹಂದಿಗಳನ್ನು ಕೊಲ್ಲಲು ಆದೇಶ.. ಕಾರಣವೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts