More

    ವೇತನ ಪಡೆಯುತ್ತಿಲ್ಲ ರಾಜ್ಯಸಭಾ ಸದಸ್ಯ ಮಾಜಿ ಸಿಜೆಐ ರಂಜನ್ ಗೊಗೋಯ್​ !

    ನವದೆಹಲಿ: ನಾಮನಿರ್ದೇಶನದ ಮೂಲಕ ರಾಜ್ಯಸಭಾ ಸದಸ್ಯರಾಗಿರುವ ಮಾಜಿ ಸಿಜೆಐ ರಂಜನ್ ಗೊಗೋಯ್​ ಅವರು ವೇತನ ಅಥವಾ ಅಲೋವೆನ್ಸ್ ಪಡೆಯುತ್ತಿಲ್ಲ! ಕಳೆದ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿತ್ತು.

    82,301 ರೂಪಾಯಿ- ಪ್ರತಿ ತಿಂಗಳೂ ನ್ಯಾಯಮೂರ್ತಿ ಗೊಗೋಯ್​ ಅವರು ಪಡೆಯುವ ಸಿಜೆಐ ಪಿಂಚಣಿ ಮೊತ್ತ

    3 ಕೋಟಿ ರೂಪಾಯಿ- ಪ್ರತಿ ತಿಂಗಳು ರಾಜ್ಯಸಭಾ ಸದಸ್ಯರಿಗಾಗಿ ಸರ್ಕಾರ ಮಾಡುವ ವೆಚ್ಚ

    ಇಂಡಿಯಾ ಟುಡೇ ವರದಿ ಪ್ರಕಾರ, ನ್ಯಾಯಮೂರ್ತಿ ರಂಜನ್ ಗೊಗೋಯ್​ ಅವರು 2020ರ ಮಾರ್ಚ್​ 24ರಂದು ರಾಜ್ಯಸಭೆಯ ಸೆಕ್ರೆಟರಿ ಜನರಲ್​ಗೆ ಪತ್ರಬರೆದ ಅವರು, ವೇತನ ಮತ್ತು ಅಲೋವೆನ್ಸ್​ಗಳು ತಮಗೆ ಬೇಡ ಎಂದು ಔಪಚಾರಿಕವಾಗಿ ತಿಳಿಸಿದ್ದಾರೆ. ಈ ರೀತಿ ವೇತನ ಮತ್ತು ಅಲೋವೆನ್ಸ್​ಗಳನ್ನು ಪಡೆಯದೇ ಇರುವ ಏಕೈಕ ಸದಸ್ಯರಾಗಿದ್ದಾರೆ ನ್ಯಾಯಮೂರ್ತಿ ರಂಜನ್ ಗೊಗೋಯ್​.

    ಇದನ್ನೂ ಓದಿ: ಯೋಗೀಶ್​ಭಟ್ ವರದಿಗೆ ಸಿಗಲಿದೆಯೇ ಮರುಜೀವ?

    ನ್ಯಾಯಮೂರ್ತಿಗಳ ಪತ್ರದ ಸಾರ: ರಾಜ್ಯಸಭಾ ಸದಸ್ಯನಾಗಿ ನನಗೆ ಸಿಗಬಹುದಾದ ವೇತನ ಮತ್ತು ಭತ್ಯೆ(ಪ್ರಯಾಣ ಮತ್ತು ವಸತಿ ಭತ್ಯೆ ಹೊರತಾಗಿ)ಯ ಪ್ರಯೋಜನವನ್ನುಪಡೆಯುವುದಿಲ್ಲ. ಇದರ ಬದಲು ನಾನು ಮಾಜಿ ಸಿಜೆಐ ಆಗಿ ನನಗೆ ಸಿಗಬಹುದಾದ ನಿವೃತ್ತಿ ಪ್ರಯೋಜನಗಳನ್ನು ಪಡೆಯುತ್ತೇನೆ ಎಂಬುದು ನ್ಯಾಯಮೂರ್ತಿ ಗೊಗೋಯ್ ಅವರ ಪತ್ರದ ಸಾರ.

    ಇದನ್ನೂ ಓದಿ: VIDEO: ಮದುವೆ ಆಗ್ತಿಲ್ಲ ಯಾಕೆ ಅನ್ನೋ ಚಿಂತೆಯೇ? ಕಾರಣ ಹೀಗೂ ಇರಬಹುದು ಗಮನಿಸಿ..

    ಭತ್ಯೆ ಮಾತ್ರ ಪಡೆಯುವ ಸದಸ್ಯರಿವರು
    ಮನೋಜ್ ಝಾ – ದೆಹಲಿ ವಿಶ್ವವಿದ್ಯಾಲಯದಲ್ಲಿ ಪಿಎಚ್​ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕನಾಗಿದ್ದು ಅಲ್ಲಿ ವೇತನ ಪಡೆಯತ್ತಿರುವ ಕಾರಣ ಇಲ್ಲಿ ಪಡೆಯುತ್ತಿಲ್ಲ. ಭತ್ಯೆಗಳನ್ನು ಮಾತ್ರ ಪಡೆಯುತ್ತಿದ್ದಾರೆ.
    ರಾಕೇಶ್ ಸಿನ್ಹಾ – ದೆಹಲಿ ವಿಶ್ವವಿದ್ಯಾಲಯದಲ್ಲಿ ಬೋಧನೆ ಮಾಡುತ್ತಿದ್ದು, ಅಲ್ಲಿಂದಲೇ ವೇತನ ಪಡೆಯುತ್ತಿದ್ದಾರೆ. ಭತ್ಯೆ ರಾಜ್ಯಸಭೆಯಿಂದ ಪಡೆಯುತ್ತಿದ್ದಾರೆ. (ಏಜೆನ್ಸೀಸ್)

    VIDEO: ಯೋಗ ಅಂತಹೇಳಿದ್ರೆ ಕುಸ್ತಿ ಅಲ್ಲ, ದೇಹವನ್ನೆಲ್ಲ ಬಗ್ಗಿಸಿ ಮೇಲೆ ಕೆಳಗೆ ಮಾಡುವುದು ಅದಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts