More

    ಸುಪ್ರೀಂಕೋರ್ಟ್ ಮಾಜಿ ಸಿಜೆಐ ರಂಜನ್​ ಗೊಗೊಯಿಯವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ…

    ನವದೆಹಲಿ: ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದಾರೆ.

    ರಾಜ್ಯಸಭೆಗೆ ಈ ಹಿಂದೆ ನಾಮನಿರ್ದೇಶನಗೊಂಡಿದ್ದ ಸದಸ್ಯರೋರ್ವರ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಇನ್ನೋರ್ವರನ್ನು ನಾಮನಿರ್ದೇಶನ ಮಾಡಿದ್ದಾಗಿ ಕೇಂದ್ರ ಗೃಹಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

    ಭಾರತದ ಸಂವಿಧಾನದ 80ನೇ ಪರಿಚ್ಛೇದದಲ್ಲಿ ನೀಡಲಾದ ಅಧಿಕಾರದ ಅನ್ವಯ ರಾಷ್ಟ್ರಪತಿಗಳು ರಾಜ್ಯಸಭೆಗೆ 12ಸದಸ್ಯರನ್ನು ನಾಮನಿರ್ದೇಶನ ಮಾಡಬಹುದು. ಈಗ ಅದೇ ಅಧಿಕಾರ ಬಳಸಿಕೊಂಡು ರಾಮನಾಥ ಕೋವಿಂದ ಅವರು ಮಾಜಿ ಸಿಜೆಐ ರಂಜನ್​ ಗೊಗೊಯಿ ಅವರನ್ನು ನಾಮನಿರ್ದೇಶನ ಮಾಡಿದ್ದಾರೆ.

    ರಂಜನ್​ ಗೊಗೊಯಿ ಅವರು ಸುಪ್ರೀಂಕೋರ್ಟ್​ನ 46ನೇ ಮುಖ್ಯನ್ಯಾಯಮೂರ್ತಿಯಾಗಿ, ಶಬರಿಮಲೆ, ಅಯೋಧ್ಯಾ-ಬಾಬ್ರಿ ಮಸೀದಿ ಭೂವಿವಾದತಂತಹ ಸೂಕ್ಷ್ಮ ಹಾಗೂ ಐತಿಹಾಸಿಕ ಪ್ರಕರಣಗಳ ತೀರ್ಪು ನೀಡಿದವರು. 2019ರ ನವೆಂಬರ್​ 17ರಲ್ಲಿ ನಿವೃತ್ತರಾಗಿದ್ದಾರೆ. (ಏಜೆನ್ಸೀಸ್​)

    ಗಲ್ಲಿಗೇರಲು 4 ದಿನ ಬಾಕಿ ಇರುವಾಗ ಫುಲ್ ಅಲರ್ಟ್; ​ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲೇರಿದ ನಿರ್ಭಯಾ ಅತ್ಯಾಚಾರ ಅಪರಾಧಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts